ಆರ್​ಎಸ್​ಎಸ್, ಬಿಜೆಪಿಯವರು ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಆರಾಧಕರು: ಸಿದ್ದರಾಮಯ್ಯ ಕಿಡಿ

ಆರ್​ಎಸ್​ಎಸ್, ಬಿಜೆಪಿಯವರು ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಆರಾಧಕರು: ಸಿದ್ದರಾಮಯ್ಯ ಕಿಡಿ

Ganapathi Sharma
|

Updated on: Jan 30, 2025 | 11:52 AM

ಮಹಾತ್ಮ ಗಾಂಧೀಜಿ ಪುಣ್ಯ ತಿಥಿಯಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಆರ್​ಎಸ್​ಎಸ್ ವಿರುದ್ಧ ವಗ್ದಾಳಿ ನಡೆಸಿದರು. ಬಿಜೆಪಿ ಹಾಗೂ ಆರ್​ಎಸ್​ಎಸ್​ನವರು ಗಾಂಧಿ ಹಂತ ಗೋಡ್ಸೆ ವಂಶಸ್ಥರೆಂದು ಜರೆದ ಅವರು, ಗಾಂಧೀಜಿ ಅವರ ಮೌಲ್ಯಗಳನ್ನು ಕೊಲ್ಲಲು ಎಂದಿಗೂ, ಯಾರಿಂದಲೂ ಸಾಧ್ಯವಿಲ್ಲ ಎಂದರು.

ಬೆಂಗಳೂರು, ಜನವರಿ 30: ಆರ್​ಎಸ್​ಎಸ್ ಮತ್ತು ಬಿಜೆಪಿಯವರು ಮಹಾತ್ಮ ಗಾಂಧಿಯನ್ನು ಕೊಂದ ಮತಾಂಧ ಗೋಡ್ಸೆಯ ಆರಾಧಕರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್​​ಎಸ್​​ಎಸ್​ನವರು ಹಂತಕ ಗೋಡ್ಸೆ ವಂಶಸ್ಥರು. ಆದರೆ, ನಾವೆಲ್ಲ ಗಾಂಧೀಜಿ ವಂಶಸ್ಥರು ಎಂದರು.

1948ರ ಜನವರಿ 30ರಂದು ಮಹಾತ್ಮ ಗಾಂಧೀಜಿ ಹತ್ಯೆ ನಡೆಯಿತು. ಮತಾಂಧ ನಾಥುರಾಮ್​ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ. ನಾಥುರಾಮ್ ಗೋಡ್ಸೆ ಗಾಂಧೀಜಿಯನ್ನು ಕೊಲೆ ಮಾಡಿರಬಹುದು, ಆದರೆ ಗಾಂಧೀಜಿ ಮೌಲ್ಯಗಳನ್ನು ಕೊಲ್ಲಲು ಆಗಲ್ಲ, ಸಾಧ್ಯವಿಲ್ಲ. ಇವತ್ತಿಗೂ ಗಾಂಧೀಜಿ ವಿಚಾರಗಳು ಭಾರತ, ಜಗತ್ತಿನಲ್ಲಿ ಪ್ರಸ್ತುತ. ನಿಮ್ಮ ಸಂದೇಶ ಏನೆಂದಾಗ ನನ್ನ ಜೀವನವೇ ನನ್ನ ಸಂದೇಶ ಎಂದಿದ್ದವರು ಅವರು. ಇದು ನಮಗೆಲ್ಲರಿಗೂ ಪ್ರೇರಣೆ. ಸತ್ಯ, ಅಹಿಂಸೆ, ಸತ್ಯಾಗ್ರಹ ಮೂಲಕ‌ ಸ್ವತಂತ್ರ ತಂದಿದ್ದು ಬೇರೆಲ್ಲೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ