‘ಯುಐ’-‘ಬೇಬಿ ಜಾನ್’ ಗಳಿಕೆ ಹಿಂದಿಕ್ಕಿ ದಾಖಲೆ ಬರೆಯಲು ರೆಡಿ ಆದ ‘ಮ್ಯಾಕ್ಸ್’; ಕ್ರಿಸ್​ಮಸ್​ನ​ ರಿಯಲ್ ವಿನ್ನರ್

ಕ್ರಿಸ್​​ಮಸ್ ಹಬ್ಬದಲ್ಲಿ ಬಿಡುಗಡೆಯಾದ ‘ಯುಐ’ ಮತ್ತು ‘ಮ್ಯಾಕ್ಸ್’ ಕನ್ನಡ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿವೆ. ‘ಮ್ಯಾಕ್ಸ್’ ಚಿತ್ರ ಕೇವಲ ಐದು ದಿನಗಳಲ್ಲಿ 28 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಲು ರೆಡಿ ಆಗಿದೆ. ಹಿಂದಿಯ ‘ಬೇಬಿ ಜಾನ್’ಚಿತ್ರದ ಗಳಿಕೆಗೆ ಹೋಲಿಸಿದರೆ, ‘ಮ್ಯಾಕ್ಸ್’ ಕ್ರಿಸ್​ಮಸ್‌ನ ನಿಜವಾದ ವಿನ್ನರ್.

‘ಯುಐ’-‘ಬೇಬಿ ಜಾನ್’ ಗಳಿಕೆ ಹಿಂದಿಕ್ಕಿ ದಾಖಲೆ ಬರೆಯಲು ರೆಡಿ ಆದ ‘ಮ್ಯಾಕ್ಸ್’; ಕ್ರಿಸ್​ಮಸ್​ನ​ ರಿಯಲ್ ವಿನ್ನರ್
‘ಮ್ಯಾಕ್ಸ್’ ಕ್ರಿಸ್​ಮಸ್​ನ​ ರಿಯಲ್ ವಿನ್ನರ್
Follow us
ರಾಜೇಶ್ ದುಗ್ಗುಮನೆ
|

Updated on: Dec 30, 2024 | 1:03 PM

ಈ ವರ್ಷದ ಕ್ರಿಸ್​ಮಸ್ ಸಂದರ್ಭದಲ್ಲಿ ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾಗಳು ರಿಲೀಸ್ ಆದವು. ಈ ಪೈಕಿ ಕನ್ನಡದಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಕಂಡಿವೆ. ಅದುವೇ ‘ಯುಐ’ ಹಾಗೂ ‘ಮ್ಯಾಕ್ಸ್’ ಸಿನಿಮಾ. ಈ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿವೆ. ಇನ್ನು ಹಿಂದಿಯ ‘ಬೇಬಿ ಜಾನ್’ ಸಿನಿಮಾ ಮಂಕಾಗಿದೆ. ಕ್ರಿಸ್​ಮಸ್​ನ ರಿಯಲ್ ವಿನ್ನರ್ ಆಗಿ ‘ಮ್ಯಾಕ್ಸ್’ ಚಿತ್ರ ಹೊರಹೊಮ್ಮಿದೆ. ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿದೆ.

ಡಿಸೆಂಬರ್ 20ರಂದು ‘ಯುಐ’ ಸಿನಿಮಾ ರಿಲೀಸ್ ಆಯಿತು. ಮೊದಲ ವಾರ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡಿತ್ತು. ಸಿನಿಮಾದ ಒಟ್ಟಾರೆ ಗಳಿಕೆ ಮೊದಲ ವಾರ ಚೆನ್ನಾಗಿಯೇ ಇತ್ತು. ಆದರೆ, ‘ಮ್ಯಾಕ್ಸ್’ ರಿಲೀಸ್ ಆಗಿದ್ದು, ಚಿತ್ರಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ. ಅದರಲ್ಲೂ ‘ಮ್ಯಾಕ್ಸ್’ಗೆ ಪ್ರೇಕ್ಷಕರು ಉಘೇ ಎಂದಿದ್ದು ‘ಯುಐ’ ಚಿತ್ರಕ್ಕೆ ಕೊಂಚ ಹೊಡೆತ ಕೊಟ್ಟಿದೆ ಎಂದೇ ಹೇಳಬಹುದು. ಆದಾಗ್ಯೂ ‘ಯುಐ’ ಗಳಿಕೆ ನಿಲ್ಲಿಸಿಲ್ಲ.

ಸದ್ಯ ಉಪೇಂದ್ರ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 10ನೇ ದಿನ ಅಂದರೆ ಭಾನುವಾರ ಕೇವಲ 1.15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 29.45 ಕೋಟಿ ರೂಪಾಯಿ ಆಗಿದೆ. ‘ಮ್ಯಾಕ್ಸ್’ ಸಿನಿಮಾ ಭಾನುವಾರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರ ಕೇವಲ ಐದು ದಿನಕ್ಕೆ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಯುಐ’ ಚಿತ್ರ ಹಿಂದಿಕ್ಕಲು ‘ಮ್ಯಾಕ್ಸ್​’ಗೆ ಬೇಕಿರೋದು ಕೆಲವೇ ಕೋಟಿ ರೂಪಾಯಿ ಮಾತ್ರ.

ಇದನ್ನೂ ಓದಿ: ಭಾನುವಾರ ಬಂಗಾರದ ಬೆಳೆ ತೆಗೆದ ‘ಮ್ಯಾಕ್ಸ್’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

ಹಿಂದಿಯ ‘ಬೇಬಿ ಜಾನ್’ ಚಿತ್ರದ ಗಳಿಕೆ 28.45 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಗಳಿಕೆ ಹಿಂದಿಕ್ಕಲು ‘ಮ್ಯಾಕ್ಸ್’ ಚಿತ್ರಕ್ಕೆ ಹೆಚ್ಚಿನ ಸಮಯ ಬೇಡ. ಈ ಎರಡೂ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿ ಕ್ರಿಸ್​ಮಸ್​ನ ರಿಯಲ್ ವಿನ್ನರ್ ಆಗಲು ರೆಡಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ