ಭಾನುವಾರ ಬಂಗಾರದ ಬೆಳೆ ತೆಗೆದ ‘ಮ್ಯಾಕ್ಸ್’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?
Max Movie Collection: ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಕ್ರಿಸ್ಮಸ್ ರಜೆಯ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರವು ಮೊದಲ ಐದು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರದ ಒಳ್ಳೆಯ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಇನ್ನಷ್ಟು ಗಳಿಕೆ ಮಾಡುವ ನಿರೀಕ್ಷೆಯಿದೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಮಾಸ್ ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಕಾರಣದಿಂದಲೇ ಸಿನಿಮಾ ಬಂಗಾರದ ಬೆಳೆ ತೆಗೆಯೋಕೆ ಆರಂಭಿಸಿದೆ. ಈ ಚಿತ್ರ ಮೊದಲ ಐದು ದಿನಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿದೆ. ಮುಂಬರುವ ಹೊಸ ವರ್ಷದ ರಜಾ ದಿನ, ಈ ವಾರಂತ್ಯ ಚಿತ್ರಕ್ಕೆ ಸಹಕಾರಿ ಆಗುವ ಎಲ್ಲಾ ಸೂಚನೆ ಸಿಕ್ಕಿದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗಲಿದೆ ಎನ್ನುವ ಕುತೂಹಲ ಮೂಡಿದೆ.
‘ಮ್ಯಾಕ್ಸ್’ ಪಕ್ಕಾ ಮಾಸ್ ಎಂಟರ್ಟೇನರ್ ಸಿನಿಮಾ. ಈ ಚಿತ್ರವನ್ನು ಜನರು ಅದ್ದೂರಿಯಾಗಿ ಸ್ವೀಕರಿಸಿದ್ದಾರೆ. ಸುದೀಪ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಾಮಾನ್ಯರಿಗೂ ಸಿನಿಮಾ ಇಷ್ಟ ಆಗುತ್ತಿದೆ. ಈ ಕಾರಣದಿಂದಲೇ ಸಿನಿಮಾದ ಗಳಿಕೆ ಉತ್ತಮವಾಗಿ ಆಗುತ್ತಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 30 ಕೋಟಿ ರೂಪಾಯಿ ಸಮೀಪಿಸಿದೆ ಎಂದು sacnilk ವರದಿ ಮಾಡಿದೆ.
ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಗೆ ಬರುತ್ತವೆ. ಆದರೆ, ಕ್ರಿಸ್ಮಸ್ ಹಿನ್ನೆಲೆಯಲ್ಲಿ ‘ಮ್ಯಾಕ್ಸ್’ ಚಿತ್ರ ಬುಧವಾರ (ಡಿಸೆಂಬರ್ 25) ತೆರೆಗೆ ಬಂತು. ಮೊದಲ ದಿನ ರಜಾ ಇದ್ದ ಕಾರಣ ಹಾಗೂ ಮುಂಜಾನೆಯೇ ಶೋಗಳು ಇದ್ದ ಕಾರಣ ಸಿನಿಮಾದ ಗಳಿಕೆ 8.7 ಕೋಟಿ ರೂಪಾಯಿ ಆಯಿತು. ಆ ಬಳಿಕ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಾ ಬಂತು. ಭಾನುವಾರ (ಡಿಸೆಂಬರ್ 29) ಚಿತ್ರ ಸುಮಾರು 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯ ಗಳಿಕೆಯೂ ಇದರಲ್ಲಿ ಸೇರಿದೆ. ಅಲ್ಲಿಯೂ ಜನರು ಚಿತ್ರವನ್ನು ಇಷ್ಟಪಡುತ್ತಿದ್ದಾರೆ.
ಹಾಗಾದರೆ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ? ಅದಕ್ಕೂ ಉತ್ತರ ಇದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 28 ಕೋಟಿ ರೂಪಾಯಿ ಆಗಿದೆ. ಇದು sacnilk ನೀಡಿರುವ ವರದಿ. ಈ ಬಗ್ಗೆ ಚಿತ್ರತಂಡದವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದೊಮ್ಮೆ ಅವರು ವರದಿ ನೀಡಿದರೆ ಅದರಲ್ಲಿ ವ್ಯತ್ಯಾಸ ಬಂದರೂ ಬರಬಹುದು.
ಇದನ್ನೂ ಓದಿ: ನಾಲ್ಕು ದಿನಕ್ಕೆ ‘ಮ್ಯಾಕ್ಸ್’ ಸಿನಿಮಾ ಕಲೆಕ್ಷನ್ ಎಷ್ಟಾಯ್ತು?
‘ಮ್ಯಾಕ್ಸ್’ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಈವರೆಗೆ (ಡಿಸೆಂಬರ್ 30ರ ಮುಂಜಾನೆ 7 ಗಂಟೆ) ಚಿತ್ರಕ್ಕೆ 24.2 ಸಾವಿರ ಜನ ರೇಟಿಂಗ್ ನೀಡಿದ್ದು, 9.2/10 ರೇಟಿಂಗ್ ದೊರೆತಿದೆ. ಒಂದು ರಾತ್ರಿ ನಡೆಯುವ ಕಥೆ ಇದಾಗಿದ್ದರಿಂದ ಹೆಚ್ಚು ಥ್ರಿಲ್ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:53 am, Mon, 30 December 24