AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ದಿನಕ್ಕೆ ‘ಮ್ಯಾಕ್ಸ್’ ಸಿನಿಮಾ ಕಲೆಕ್ಷನ್ ಎಷ್ಟಾಯ್ತು?

Max Kannada Movie: ಸುದೀಪ್ ನಟನೆಯ ‘ಮ್ಯಾಕ್ಸ್’ ಕನ್ನಡ ಸಿನಿಮಾ ಬಿಡುಗಡೆ ಇಂದಿಗೆ ಐದು ದಿನವಾಗಿದೆ. ಸಿನಿಮಾ ಈ ನಾಲ್ಕು ದಿನದಲ್ಲಿ ಎಷ್ಟು ಗಳಿಕೆ ಮಾಡಿದೆ. ಸಿನಿಮಾದ ಕಲೆಕ್ಷನ್ ಏರುಗತಿಯಲ್ಲಿದೆಯೇ? ಅಥವಾ ಇಳಿಮುಖ ಕಂಡಿದೆಯೇ? ಸಿನಿಮಾ ಬಿಡುಗಡೆ ಆದ ಬಳಿಕ ಮೊದಲ ಶನಿವಾರ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

ನಾಲ್ಕು ದಿನಕ್ಕೆ ‘ಮ್ಯಾಕ್ಸ್’ ಸಿನಿಮಾ ಕಲೆಕ್ಷನ್ ಎಷ್ಟಾಯ್ತು?
ಮ್ಯಾಕ್ಸ್
ಮಂಜುನಾಥ ಸಿ.
|

Updated on: Dec 29, 2024 | 8:38 AM

Share

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಕ್ರಿಸ್​ಮಸ್ ಹಬ್ಬಕ್ಕೆ ಬಿಡುಗಡೆ ಆದ ಸಿನಿಮಾ, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೊದಲ ದಿನ ದಾಖಲೆಯ 8.50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ‘ಮ್ಯಾಕ್ಸ್’ ಸಿನಿಮಾ ತನ್ನ ಬಾಕ್ಸ್ ಆಫೀಸ್ ಓಟವನ್ನು ಭರ್ಜರಿಯಾಗಿ ಮುಂದುವರೆಸಿದೆ. ಮೊದಲ ದಿನದ ಬಳಿಕ ತುಸು ಕಡಿಮೆಯಾಗಿದ್ದ ಬಾಕ್ಸ್ ಆಫೀಸ್ ಕಲೆಕ್ಷನ್ ವೀಕೆಂಡ್​ನಲ್ಲಿ ಮತ್ತೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆ ಆದ ನಾಲ್ಕು ದಿನದಲ್ಲಿ ‘ಮ್ಯಾಕ್ಸ್’ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

ಮೊದಲ ದಿನ 8.50 ಕೋಟಿ ಹಣ ಬಾಚಿದ್ದ ‘ಮ್ಯಾಕ್ಸ್’, ಎರಡನೇ ದಿನ ವಾರದ ದಿನವಾದ್ದರಿಂದ 3.85 ಕೋಟಿ ಮಾತ್ರವೇ ಗಳಿಸಿತ್ತು. ಆದರೆ ಸಿನಿಮಾದ ಬಗ್ಗೆ ಬಾಯಿ ಪ್ರಚಾರ ಹೆಚ್ಚಾಗಿ ವಾರದ ದಿನವೇ ಆಗಿದ್ದ ಶುಕ್ರವಾರದಂದು 4.70 ಕೋಟಿಗೂ ಹೆಚ್ಚು ಹಣ ಗಳಿಸಿತು. ಇದೀಗ ಮೊದಲ ವಾರಾಂತ್ಯದ ದಿನವಾದ ಶನಿವಾರ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಿದ್ದು ಸಿನಿಮಾ ಐದು ಕೋಟಿಗೂ ಹೆಚ್ಚು ಹಣ ಗಳಿಸಿದೆ. ಅಲ್ಲಿಗೆ ಈ ನಾಲ್ಕು ದಿನದಲ್ಲಿ ಮ್ಯಾಕ್ಸ್ ಸಿನಿಮಾ ಬರೋಬ್ಬರಿ 22.25 ಕೋಟಿಗೂ ಹೆಚ್ಚು ಹಣ ಬಾಕ್ಸ್ ಆಫೀಸ್​ನಲ್ಲಿ ದೋಚಿಕೊಂಡಿದೆ.

ಇದನ್ನೂ ಓದಿ:‘ಮ್ಯಾಕ್ಸ್’ ಭರ್ಜರಿ ಗೆಲುವಿಗೆ ಕಾರಣ ಯಾರು? ಸುದೀಪ್ ಕೊಟ್ಟರು ಉತ್ತರ

ಮೊದಲ ಭಾನುವಾರ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಲಿದ್ದು, ಭಾನುವಾರ ಒಂದೇ ದಿನ ‘ಮ್ಯಾಕ್ಸ್’ ಸಿನಿಮಾ ಆರರಿಂದ ಏಳು ಕೋಟಿ ಹಣ ಗಳಿಸುವ ನಿರೀಕ್ಷೆ ಇದೆ. ಸಿನಿಮಾ ಪರಭಾಷೆಗಳಲ್ಲಿಯೂ ಉತ್ತಮ ಗಳಿಕೆ ಮಾಡುತ್ತಿದೆ. ‘ಮ್ಯಾಕ್ಸ್’ ಸಿನಿಮಾದ ತಮಿಳು ಹಾಗೂ ತೆಲುಗು ಆವೃತ್ತಿಗಳು ಒಟ್ಟಾಗಿ 1.50 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಅಲ್ಲಿಯೂ ಸಹ ಸಿನಿಮಾದ ಗಳಿಕೆ ಹೆಚ್ಚಾಗುತ್ತಿದೆ. ಸಿನಿಮಾ ಕನ್ನಡದ ಹೊರತಾಗಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ.

‘ಮ್ಯಾಕ್ಸ್’ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಥನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಸುದೀಪ್ ಜೊತೆ ಉಗ್ರಂ ಮಂಜು, ಸುಕೃತಾ ವಾಗ್ಲೆ, ತೆಲುಗಿನ ಸುನಿಲ್, ಶರತ್ ಲೋಹಿತಾಶ್ವ ಇನ್ನೂ ಕೆಲವರು ನಟಿಸಿದ್ದಾರೆ. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ