AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮ್ಯಾಕ್ಸ್’ ಭರ್ಜರಿ ಗೆಲುವಿಗೆ ಕಾರಣ ಯಾರು? ಸುದೀಪ್ ಕೊಟ್ಟರು ಉತ್ತರ

Max Movie: ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ‘ಮ್ಯಾಕ್ಸ್’ ಸಿನಿಮಾದ ಸಂಭ್ರಮ ಬಿಗ್​ಬಾಸ್ ಮನೆಯನ್ನೂ ತಲುಪಿದೆ. ಬಿಗ್​ಬಾಸ್ ಮನೆಯಲ್ಲಿ ಕೇಕ್ ಕತ್ತರಿಸಿ ‘ಮ್ಯಾಕ್ಸ್’ ಗೆಲುವನ್ನು ಸಂಭ್ರಮಿಸಲಾಗಿದೆ. ‘ಮ್ಯಾಕ್ಸ್’ ಸಿನಿಮಾದ ಅದ್ಧೂರಿ ಗೆಲುವಿಗೆ ಕಾರಣ ಏನೆಂದು ಸುದೀಪ್ ಬಿಗ್​ಬಾಸ್ ವೇದಿಕೆ ಮೇಲೆ ಹೇಳಿದ್ದಾರೆ.

‘ಮ್ಯಾಕ್ಸ್’ ಭರ್ಜರಿ ಗೆಲುವಿಗೆ ಕಾರಣ ಯಾರು? ಸುದೀಪ್ ಕೊಟ್ಟರು ಉತ್ತರ
Max Kannada Movie
ಮಂಜುನಾಥ ಸಿ.
|

Updated on: Dec 28, 2024 | 10:04 PM

Share

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೂರು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ಭಾರಿ ಯಶಸ್ಸು ಗಳಿಸಿದೆ. ಸಿನಿಮಾ ಮೊದಲ ದಿನವೇ 8.50 ಕೋಟಿಗೂ ಹೆಚ್ಚು ಹಣ ಗಳಿಸಿದೆ. ದಿನೇ ದಿನೇ ಗಳಿಕೆಯನ್ನು ಉತ್ತಮ ಪಡಿಸಿಕೊಳ್ಳುತ್ತಾ ಸಾಗುತ್ತಿದೆ. ಪರಭಾಷೆಗಳಲ್ಲಿಯೂ ಸಿನಿಮಾಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಈ ವರ್ಷ ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಮ್ಯಾಕ್ಸ್’ ಸಿನಿಮಾ ಪಾತ್ರವಾಗಿದೆ. ಇದೀಗ ಬಿಗ್​ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಸಂಭ್ರಮಾಚರಣೆ ಮಾಡಲಾಗಿದೆ.

ಬಿಗ್​ಬಾಸ್​, ಮನೆ ಮಂದಿಯನ್ನೆಲ್ಲ ಕರೆದು, ‘ನಿಮಗೆ ಹೊರ ಪ್ರಪಂಚದಲ್ಲಿ ಭಾರಿ ಸುದ್ದಿಯಾಗಿರುವ ವಿಷಯದ ಬಗ್ಗೆ ಹೇಳಲೇ ಬೇಕಿದೆ ಎಂದು ಹೇಳಿ, ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿ ಭಾರಿ ಕಲೆಕ್ಷನ್ ಮಾಡುತ್ತಿರುವ, ಜನಪ್ರೀತಿ ಗಳಿಸಿರುವ ವಿಚಾರವನ್ನು ಹೇಳಿದರು. ಆ ನಂತರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯನ್ನು ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮಿಸಿದ ವಿಡಿಯೋಗಳನ್ನು ತೋರಿಸಿದರು. ಆ ನಂತರ ಬಿಗ್​ಬಾಸ್ ಸ್ಪರ್ಧಿ ನಟ ಉಗ್ರಂ ಮಂಜುಗೂ ಅಭಿನಂದನೆ ಸಲ್ಲಿಸಲಾಯ್ತು. ಬಳಿಕ ಬಿಗ್​ಬಾಸ್ ವಿಶೇಷ ಕೇಕ್ ಒಂದನ್ನು ಮನೆಯ ಒಳಗೆ ಕಳಿಸಿದರು. ಅದನ್ನು ಎಲ್ಲ ಸ್ಪರ್ಧಿಗಳು ಸೇರಿ ಕಟ್ ಮಾಡಿ ಖುಷಿ ಆಚರಿಸಿದರು. ಆ ಬಳಿಕ ಬಿಗ್​ಬಾಸ್​, ಸುದೀಪ್​ಗೂ ಸಹ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ:ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಸುದೀಪ್ ತೆರೆಯ ಮೇಲೆ ಬಂದಾಗ, ಮನೆಯ ಸ್ಪರ್ಧಿಗಳು ಸುದೀಪ್​ಗೆ ಅಭಿನಂದನೆ ಸಲ್ಲಿಸಿದರು. ಸುದೀಪ್ ಅವರು ಉಗ್ರಂ ಮಂಜುಗೆ ಅಭಿನಂದನೆ ಸಲ್ಲಿಸಿದರು. ಎರಡು ವರ್ಷಗಳ ಶ್ರಮ ಸಾರ್ಥಕವಾದ ಬಗ್ಗೆ ಉಗ್ರಂ ಮಂಜು ಭಾವುಕರಾಗಿ ಮಾತನಾಡಿದರು. ಈ ವೇಳೆ ಸುದೀಪ್, ಸಿನಿಮಾ ಇಷ್ಟು ದೊಡ್ಡ ಗೆಲುವಾಗಲು ನನ್ನ ತಾಯಿಯ ಆಶೀರ್ವಾದವೂ ಕಾರಣ ಎಂದರು. ನಾವು ಚಿಕ್ಕದಾಗಿ ಏನೋ ಮಾಡಲು ಹೋದೆವು, ಅದು ಸ್ವಲ್ಪ ದೊಡ್ಡದಾಯ್ತು, ಜನ ಇದನ್ನು ಭಾರಿ ದೊಡ್ಡದಾಗಿ ಮಾಡಿದ್ದಾರೆ ಎಂದರು.

‘ಮ್ಯಾಕ್ಸ್’ ಸಿನಿಮಾ ಅನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಥನು ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕೇವಲ ಒಂದೇ ದಿನದಲ್ಲಿ ನಡೆಯುವ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ಸಖತ್ ಆಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳು ಇವೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ ತಮಿಳು ಹಾಗೂ ತೆಲುಗು ಆವೃತ್ತಿಗಳು ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ