AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎ’ ಸಿನಿಮಾದಲ್ಲಿ ನಟಿಸಿದ ಬಾಲಕ ಬೆಳೆದು ದೊಡ್ಡವನಾಗಿ ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಸಿಕ್ಕಾಗ

'ಎ' ಸಿನಿಮಾದಲ್ಲಿ ಉಪೇಂದ್ರ ಹೇಳಿದ ಮಾತು ಕೇಳಿ ಓಡಿ ಹೋದ ಬಾಲಕ 27 ವರ್ಷಗಳ ಬಳಿಕ ಮತ್ತೆ ನಟ ಉಪೇಂದ್ರಗೆ ಸಿಕ್ಕಿದ್ದರು. ‘ಯುಐ’ ಚಿತ್ರದ ಸುದ್ದಿಗೋಷ್ಠಿ ವೇಳೆ ಈ ಅನಿರೀಕ್ಷಿತ ಭೇಟಿ ನಡೆದಿತ್ತು, ಉಪೇಂದ್ರ ಅವರಿಗೆ ಈ ವಿಚಾರ ಅಚ್ಚರಿ ತಂದಿದೆ. ಬಾಲಕ ಈಗ ದೊಡ್ಡವನಾಗಿ ತಮ್ಮನ್ನು ಭೇಟಿಯಾದ ಕ್ಷಣವನ್ನು ಉಪೇಂದ್ರ ಅಚ್ಚರಿಗೊಂಡರು.

‘ಎ’ ಸಿನಿಮಾದಲ್ಲಿ ನಟಿಸಿದ ಬಾಲಕ ಬೆಳೆದು ದೊಡ್ಡವನಾಗಿ ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಸಿಕ್ಕಾಗ
ಉಪೇಂದ್ರ
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 31, 2025 | 8:04 AM

Share

ಸಿನಿಮಾಗಳನ್ನು ಮಾಡುವಾಗ ನಿರ್ದೇಶಕರು ಸಾಕಷ್ಟು ಅತಿಥಿ ಪಾತ್ರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಅವರ ಬಗ್ಗೆ ನಿರ್ದೇಶಕರಿಗೆ ನೆನಪಿರುವುದೇ ಇಲ್ಲ. ಮುಂದೊಂದು ದಿನ ಅವರು ಮತ್ತೆ ಸಿಗಬಹುದು. ಈ ರೀತಿಯ ಅಪರೂಪದ ಘಟನೆ ಒಂದು ‘ಯುಐ’ (UI) ಚಿತ್ರದ ಸುದ್ದಿಗೋಷ್ಠಿ ವೇಳೆ ನಡೆದಿತ್ತು ಎಂದರೆ ನಂಬಲೇಬೇಕು. ‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಹುಡುಗ ಈಗ ಬೆಳೆದು ದೊಡ್ಡವನಾಗಿ ಉಪ್ಪಿ ಎದುರು ಬಂದು ನಿಂತಿದ್ದಾರೆ. ಆ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ ಕೇಳಿ.

‘ಎ’ ಸಿನಿಮಾ ಬಿಡುಗಡೆ ಆಗಿದ್ದು 1998ರಲ್ಲಿ. ಅಂದರೆ ಸುಮಾರು 27 ವರ್ಷಗಳ ಹಿಂದೆ. ‘ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್’ ಎಂದು ಡೈಲಾಗ್ ಹೊಡೆಯುತ್ತಾ ಉಪ್ಪಿ ಸುತ್ತಾಡುವುದನ್ನು ಸಿನಿಮಾದಲ್ಲಿ ಕಾಣಬಹುದು. ಈ ಚಿತ್ರದ ಆರಂಭದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳು ಎಂದು ಉಪೇಂದ್ರ ಸಾಯಿಸೋ ದೃಶ್ಯ ಇದೆ. ಈ ವೇಳೆ ರೈಲ್ವೆ ಟ್ರ್ಯಾಕ್ ಬಳಿ ಉಪ್ಪಿ ಅವರು ನಡೆದು ಬರುವಾಗ, ಮಹಿಳೆ ಒಬ್ಬಳು ಪತಿಗೆ ‘ಸತ್ತೋಗು’ ಎಂದು ಹೇಳುತ್ತಾಳೆ. ಮರುಕ್ಷಣವೇ ಗುಂಡು ಹೊಡೆದು ಉಪ್ಪಿ ಆ ವ್ಯಕ್ತಿಯನ್ನು ಸಾಯಿಸುತ್ತಾರೆ. ಈ ರೀತಿಯಲ್ಲಿ ದೃಶ್ಯ ಇದೆ.

ಉಪ್ಪಿ ಹಾಗೂ ಎ ಕಲಾವಿದನ ಭೇಟಿ

ಇದನ್ನೂ ಓದಿ
Image
‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ
Image
ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
Image
ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
Image
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಈ ದಂಪತಿಗೆ ಒಂದು ಮಗು ಇರುತ್ತದೆ. ಆ ಬಾಲಕ ಅಳುತ್ತಾನೆ. ಇದಕ್ಕೆ ಸಮಜಾಯಿಶಿ ಕೊಡೋ ಉಪ್ಪಿ, ‘ಅಳಬೇಡ, ಅವರ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ. ಸೆಂಟಿಮೆಂಟ್ ಇದ್ರೆ ಖಾಲಿ ತಟ್ಟೆನೇ ಗಟ್ಟಿ ಆಗಿಬಿಡುತ್ತದೆ. ಪ್ರಪಂಚ ವಿಶಾಲವಾಗಿದೆ. ಆರಾಮಾಗಿ ಹೋಗಿ ಬದುಕಿಕೋ’ ಎನ್ನುತ್ತಾರೆ ಉಪ್ಪಿ. ಆ ಕ್ಷಣವೇ ಬಾಲಕ ಓಡಿ ಹೋಗುತ್ತಾನೆ.

ಇದನ್ನೂ ಓದಿ: ‘ರಕ್ತ ಕಾಶ್ಮೀರ’ ಸಿನಿಮಾ ಪ್ರಚಾರಕ್ಕೆ ಉಪ್ಪಿ-ರಮ್ಯಾ ಬರುತ್ತಿಲ್ಲವೇಕೆ? ಉತ್ತರಿಸಿದ ಬಾಬು ಸಿಂಗ್

ಹೀಗೆ ಓಡಿ ಹೋದ ಬಾಲಕ ಮತ್ತೆ ಉಪ್ಪಿಗೆ ಸಿಕ್ಕಿದ್ದು ಸುದ್ದಿಗೋಷ್ಠಿಯಲ್ಲಿ. ‘ಯುಐ’ ಚಿತ್ರದ ಸುದ್ದಿಗೋಷ್ಠಿ ಹೈದರಾಬಾದ್​ನಲ್ಲಿ ನಡೆದಿತ್ತು. ಈ ವೇಳೆ ಸುದ್ದಿಗೋಷ್ಠಿಗೆ ಆ ಹುಡುಗ ಕೂಡ ಬಂದಿದ್ದರು. ‘ಎ ಚಿತ್ರದಲ್ಲಿ ನಟಿಸಿದ್ದ ಹುಡುಗ ನಾನೇ’ ಎಂದು ಪರಿಚಯಿಸಿಕೊಂಡರು. ಇದನ್ನು ಕೇಳಿ ಉಪ್ಪಿ ಅವರಿಗೆ ಅಚ್ಚರಿ ಆಯಿತು. ‘ಅಲ್ಲಿ ಓಡಿ ಹೋದ ನೀವು, ಈಗ ಬಂದಿದ್ದೀರಾ’ ಎಂದು ಕೇಳಿ ನಕ್ಕರು ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Fri, 31 October 25

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!