‘ಐ ಲವ್ ಯೂ’ ಎಂದು ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ರಾಶಿಕಾ ಅವರ ಈ ಪ್ರತಿಕ್ರಿಯೆ ಆಟಕ್ಕೆ ಸಹಕಾರಿ ಆಗಲಿದೆ.

‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ-ಪ್ರಣಯ ಸಾಮಾನ್ಯ. ಇಲ್ಲಿ ಹುಟ್ಟಿದ ಪ್ರೀತಿ ಮದುವೆ ಹಂತಕ್ಕೆ ಹೋಗೋದು ತುಂಬಾನೇ ಕಡಿಮೆ. ಬಹುತೇಕರು ಇದನ್ನು ಪ್ರೇಕ್ಷಕರ ಗಮನ ಸೆಳೆಯುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ರಾಶಿಕಾ ಶೆಟ್ಟಿ (Rashika Shetty) ಹಾಗೂ ಸೂರಜ್ ಆಪ್ತತೆ ಕೂಡ ಇದೇ ರೀತಿ ಎಂದು ಹೇಳಲಾಗುತ್ತಾ ಇದೆ. ಈಗ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ.
ರಾಶಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಮಾಡಿಕೊಂಡ ಆಯ್ಕೆ ಲವ್ ಟ್ರ್ಯಾಕ್. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಸೂರಜ್ ಸಿಂಗ್ ಜೊತೆ ಆಪ್ತತೆ ಬೆಳೆಸಿಕೊಂಡರು. ಅವರನ್ನು ನೋಡಿದ ತಕ್ಷಣವೇ ಫ್ಲ್ಯಾಟ್ ಆಗಿದ್ದರು. ರಾಶಿಕಾ ಹಾಗೂ ಸೂರಜ್ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ.
‘ಬಿಗ್ ಬಾಸ್’ ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿತ್ತು. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟರು. ನೇರವಾಗಿ ‘ಐ ಲವ್ ಯೂ’ ಎಂದು ಸೂರಜ್ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದರು.
ಸೂರಜ್ ಪ್ರಪೋಸ್ ಮಾಡುತ್ತಿದ್ದಂತೆ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಈ ಮೂಲಕ ಸೂರಜ್ ಜೊತೆಗಿನ ಆಪ್ತತೆ ಕೇವಲ ಒಂದು ಗೇಮ್ ತಂತ್ರ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದಂತೆ ಆಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇದು ಅವರ ಆಟಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ತಮ್ಮದೇ ತಂಡದ ರಾಶಿಕಾಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
ಸೂರಜ್ ಅವರು ಆರಂಭದಲ್ಲಿ ಬಂದಾಗ ಉತ್ತಮ ಆಟ ಪ್ರದರ್ಶನ ಮಾಡಿದ್ದರು. ಆದರೆ, ಇತ್ತೀಚೆಗೆ ಏಕೋ ಅವರು ಪ್ರೀತಿ-ಪ್ರೇಮದ ವಿಚಾರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಶಿಕಾ ಅವರು ಪ್ರಪೋಸ್ ಮಾಡಿದ ಮೇಲೂ ಒಪ್ಪಿಕೊಂಡಿಲ್ಲ. ಹೀಗಾಗಿ, ಸೂರಜ್ ತಮ್ಮ ಆಟದ ಮೇಲೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








