‘ಮಿಲನ’ ಕಥೆ ರೀತಿ ಸಾಗುತ್ತಿದೆ ‘ಕರ್ಣ’; ನಿತ್ಯಾ-ಸೂರಜ್ ಒಂದು ಮಾಡಲು ಮುಂದಾದ ಕರ್ಣ
ಪುನೀತ್ ರಾಜ್‌ಕುಮಾರ್ 'ಮಿಲನ' ಸಿನಿಮಾ ಮಾದರಿಯಲ್ಲೇ 'ಕರ್ಣ' ಧಾರಾವಾಹಿ ಸಾಗುತ್ತಿದೆ. ಕರ್ಣ ಮತ್ತು ನಿತ್ಯಾ ಮದುವೆಯಾಗಿದ್ದರೂ, ಕರ್ಣ ನಿತ್ಯಾಳನ್ನು ಆಕೆಯ ಪ್ರೇಮಿ ಸೂರಜ್‌ನೊಂದಿಗೆ ಸೇರಿಸಲು ಪ್ರಯತ್ನಿಸುತ್ತಾನೆ. ಸೂರಜ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದಿದೆ. ಮುಂದಿನ ಕಥೆಯಲ್ಲಿ ನಿತ್ಯಾ ಸೂರಜ್‌ನೊಂದಿಗೆ ಒಂದಾಗುತ್ತಾಳೇ ಅಥವಾ ಕರ್ಣನ ಜೊತೆ ಅವಳ ಸಂಸಾರ ಮುಂದುವರಿಯುತ್ತದೆಯೇ ಎಂಬುದೇ ಕುತೂಹಲ.

ಪುನೀತ್ ರಾಜ್‌ಕುಮಾರ್ ನಟನೆಯ ‘ಮಿಲನ’ ಸಿನಿಮಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಪುನೀತ್ ಹಾಗೂ ಪಾರ್ವತಿ ನಟಿಸಿದ್ದರು. ಈ ಸಿನಿಮಾದಲ್ಲಿ ಕಥಾ ನಾಯಕ ಮದುವೆ ಆಗಿ ಬರುತ್ತಾನೆ. ಈ ರೀತಿ ಮದುವೆ ಆದ ಹುಡುಗಿಗೆ ಬೇರೆ ಲವರ್ ಇರುತ್ತಾಳೆ. ಇವರನ್ನು ಒಂದು ಮಾಡಲು ಕಥಾ ನಾಯಕ ಮುಂದಾಗುತ್ತಾನೆ. ಸದ್ಯ ‘ಕರ್ಣ’ (Karna Serial) ಧಾರಾವಾಹಿಯ ಕಥೆ ಕೂಡ ಹೀಗೆಯೇ ಸಾಗುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
‘ಕರ್ಣ’ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಿದೆ. ನಿತ್ಯಾ ಪ್ರೆಗ್ನೆಂಟ್ ಕೂಡ ಹೌದು. ಆದರೆ, ಈ ವಿಚಾರವನ್ನು ಕರ್ಣನು ನಿತ್ಯಾ ಬಳಿ ಹೇಳಿಲ್ಲ. ಆಕೆಯ ನಾಡಿ ಮಿಡಿತದಿಂದಲೇ ಈ ವಿಚಾರ ಗೊತ್ತಾಗಿದೆ. ನಿತ್ಯಾಗೆ ಓರ್ವ ಲವರ್ ಇದ್ದ. ಆತನೇ ಸೂರಜ್. ಸೂರಜ್ ಹಾಗೂ ನಿತ್ಯಾನ ಒಂದು ಮಾಡಬೇಕು ಎಂಬುದು ಕರ್ಣನ ಉದ್ದೇಶ. ಈಗ ಸೂರಜ್ ಎಲ್ಲಿದ್ದಾನೆ ಎನ್ನುವ ವಿಚಾರ ತಿಳಿದು ಕರ್ಣ ಹಾಗೂ ನಿತ್ಯಾ ಖುಷಿ ಪಟ್ಟಿದ್ದಾರೆ.
ಸೂರಜ್ನ ರಮೇಶ್ (ಕರ್ಣನ ತಂದೆ) ಚಿಕ್ಕಮಗಳೂರಿನಲ್ಲಿ ಬಚ್ಚಿಟ್ಟಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ. ಹೀಗಾಗಿ, ಆಕೆಯನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಡಲು ರೆಡಿ ಆಗುತ್ತಾರೆ. ಇವರಿಬ್ಬರೂ ಹನಿಮೂನ್ಗೆ ಹೊರಟಿದ್ದಾರೆ ಎಂದು ರಮೇಶ್ ಅಂದುಕೊಳ್ಳುತ್ತಾನೆ. ಕರ್ಣ ಹಾಗೂ ನಿತ್ಯಾ ಆಪ್ತತೆ ನೋಡಿ ರಮೇಶ್ಗೆ ಶಾಕ್ ಆಗುತ್ತದೆ.
ಇದನ್ನೂ ಓದಿ: ಚಪ್ಪಡಿ ಕಲ್ಲು ಎಳೆದರೂ ನಗುತ್ತಲೇ ಇದ್ದಾನೆ ಕರ್ಣ; ರಮೇಶ್ ಶಾಕ್
ಇನ್ನು, ನಿತ್ಯಾಳನ್ನು ಸೂರಜ್ ಒಪ್ಪಿಕೊಳ್ಳೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಮದುವೆ ಟೈಮ್ ಅಲ್ಲಿ ಸೂರಜ್ನ ಕಿಡ್ನ್ಯಾಪ್ ಮಾಡಿಸಿದ್ದು ಕರ್ಣ ಎಂದು ಅನುಮಾನ ಬರುವಂತೆ ಮಾಡಲಾಗಿದೆ. ಈಗ ಸೂರಜ್ ಬಳಿ ನಿತ್ಯಾ ಹೋದಾಗ ಇದೇ ವಿಷಯ ಬರುತ್ತದೆ. ಆಗ ನಿತ್ಯಾ ಇದನ್ನು ನಂಬದೇ ಇರಬಹುದು. ಈ ವೇಳೆ ನಿತ್ಯಾ ಮರಳಿ ಮನೆಗೆ ಬರುತ್ತಾಳೆ. ಆ ಬಳಿಕ ಕರ್ಣ ಹಾಗೂ ನಿತ್ಯಾಳ ಸಂಸಾರ ಮುಂದುವರಿಯುತ್ತದೆ. ಈ ರೀತಿಯಲ್ಲಿ ಕಥೆ ಮೂಡಿ ಬರಬಹುದು ಎಂಬುದು ಪ್ರೇಕ್ಷಕರ ಊಹೆ. ಇಲ್ಲವೇ, ಕರ್ಣನ ಜೊತೆ ನಿತ್ಯಾಗೆ ಬೇಸರ ಮೂಡಬಹುದು. ಆ ಸಾಧ್ಯತೆಯೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







