AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ

Bigg Boss Kannada season 12: ಬಿಗ್​​ಬಾಸ್ ಸದಸ್ಯರಿಗೆ ಬುದ್ಧಿವಾದ ಹೇಳಲು ಸುದೀಪ್ ಅವರು ‘ಚಿಕ್ಕಪ್ಪನ ಕತೆ’ಗಳನ್ನು ಹೇಳುತ್ತಾರೆ. ಬಿಗ್​​ಬಾಸ್ ಸ್ಪರ್ಧಿಗಳ ನಡುವೆ ನಡೆದ ಘಟನೆಯನ್ನೇ ಇರಿಸಿಕೊಂಡು ತಮ್ಮ ಹಾಗೂ ತಮ್ಮ ಚಿಕ್ಕಪ್ಪನ ನಡುವೆ ಇಂಥಹದ್ದೊಂದು ಘಟನೆ ನಡೆದಿತ್ತು ಎಂದು ಕಾಲ್ಪನಿಕ ಕತೆಯೊಂದನ್ನು ಹೇಳುತ್ತಾರೆ. ಕತೆಗಳನ್ನು ಕೇಳಿ ಸ್ಪರ್ಧಿಗಳು ನಗುತ್ತಾರೆ ಆದರೆ ಸುದೀಪ್ ಹೇಳುವ ಕತೆಗಳ ಹಿಂದೆ ಗೂಡಾರ್ಥವೂ ಇರುತ್ತದೆ. ಆದರೆ ಇದೀಗ ಗಿಲ್ಲಿ, ತಮ್ಮ ಚಿಕ್ಕಪ್ಪನ ಕತೆಯೊಂದನ್ನು ಸ್ಪರ್ಧಿಗಳಿಗೆ ಹೇಳಿದ್ದಾರೆ.

ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
Bigg Boss Story
ಮಂಜುನಾಥ ಸಿ.
|

Updated on: Oct 31, 2025 | 6:45 AM

Share

ಈ ಬಾರಿಯ ಬಿಗ್​​ಬಾಸ್ನಲ್ಲಿ (Bigg Boss Kannada) ಚಿಕ್ಕಪ್ಪನ ಕತೆಗಳು ಗಮನ ಸೆಳೆಯುತ್ತಿವೆ. ಬಿಗ್​​ಬಾಸ್ ಸದಸ್ಯರಿಗೆ ಬುದ್ಧಿವಾದ ಹೇಳಲು ಸುದೀಪ್ ಅವರು ‘ಚಿಕ್ಕಪ್ಪನ ಕತೆ’ಗಳನ್ನು ಹೇಳುತ್ತಾರೆ. ಬಿಗ್​​ಬಾಸ್ ಸ್ಪರ್ಧಿಗಳ ನಡುವೆ ನಡೆದ ಘಟನೆಯನ್ನೇ ಇರಿಸಿಕೊಂಡು ತಮ್ಮ ಹಾಗೂ ತಮ್ಮ ಚಿಕ್ಕಪ್ಪನ ನಡುವೆ ಇಂಥಹದ್ದೊಂದು ಘಟನೆ ನಡೆದಿತ್ತು ಎಂದು ಕಾಲ್ಪನಿಕ ಕತೆಯೊಂದನ್ನು ಹೇಳುತ್ತಾರೆ. ಕತೆಗಳನ್ನು ಕೇಳಿ ಸ್ಪರ್ಧಿಗಳು ನಗುತ್ತಾರೆ ಆದರೆ ಸುದೀಪ್ ಹೇಳುವ ಕತೆಗಳ ಹಿಂದೆ ಗೂಡಾರ್ಥವೂ ಇರುತ್ತದೆ. ಆದರೆ ಇದೀಗ ಗಿಲ್ಲಿ, ತಮ್ಮ ಚಿಕ್ಕಪ್ಪನ ಕತೆಯೊಂದನ್ನು ಸ್ಪರ್ಧಿಗಳಿಗೆ ಹೇಳಿದ್ದಾರೆ.

ಗಿಲ್ಲಿ, ಬಿಗ್​​ಬಾಸ್ ಮನೆಯಲ್ಲಿ ತಮಾಷೆ ಮಾಡುತ್ತಾ, ಪರಸ್ಪರ ಕಾಲೆಳೆಯುತ್ತಾ ಕಾಲ ಕಳೆಯುತ್ತಾರೆ. ನಿನ್ನೆಯ (ಅಕ್ಟೋಬರ್ 30) ಎಪಿಸೋಡ್​​ನಲ್ಲಿ ಕ್ಯಾಪ್ಟನ್ ರೇಸ್​​ಗೆ ಸ್ಪರ್ಧಿಯೊಬ್ಬರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಬಿಗ್​​ಬಾಸ್ ಸೂಚಿಸಿದ್ದರು. ಅದರಂತೆ ಒಬ್ಬೊಬ್ಬರು ಒಬ್ಬೊಬ್ಬರ ಹೆಸರುಗಳನ್ನು ಹೇಳಿದರು. ಗಿಲ್ಲಿಯ ಅವಕಾಶ ಬಂದಾಗ ಅವರು ಕಾವ್ಯಾ ಅವರಿಗೆ ಓಟು ಹಾಕಿದರು. ಅಶ್ವಿನಿಗೆ ಅವಕಾಶ ಬಂದಾಗ ಅವರು ಜಾನ್ವಿ ಅವರಿಗೆ ಮತ ಚಲಾವಣೆ ಮಾಡಿದರು.

ಅಶ್ವಿನಿ ಅವರು ಜಾನ್ವಿಗೆ ಓಟು ಹಾಕಿದ್ದು ಗಿಲ್ಲಿಯ ಆಶ್ಚರ್ಯಕ್ಕೆ ಕಾರಣವಾಯ್ತು. ಆರಂಭದಿಂದಲೂ ಒಟ್ಟಿಗೆ ಇದ್ದ ಅಶ್ವಿನಿ ಮತ್ತು ಜಾನ್ವಿ ಇತ್ತೀಚೆಗೆ ದೂರಾಗಿದ್ದಾರೆ. ಜಾನ್ವಿ, ಅಶ್ವಿನಿಯ ಎದುರಾಳಿ ತಂಡ ಸೇರಿಕೊಂಡಿದ್ದಾರೆ. ಅಶ್ವಿನಿ ಜೊತೆಗೆ ಹೆಚ್ಚಾಗಿ ಬೆರೆಯುತ್ತಿಲ್ಲ. ಜಾನ್ವಿ ಸಹ ಒಮ್ಮೆ ಅಶ್ವಿನಿ ಜೊತೆ ಜಗಳ ಆಡಿದ್ದಾರೆ. ಆದರೆ ಈಗ ಏಕಾ-ಏಕಿ ಅಶ್ವಿನಿ ಅವರು ಜಾನ್ವಿಗೆ ಮತ ಹಾಕಿದ್ದು ಗಿಲ್ಲಿಗೆ ಶಾಕ್ ತಂದಿದೆ.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

ಇದೇ ಕಾರಣಕ್ಕೆ ಮನೆಯ ಸ್ಪರ್ಧಿಗಳೆಲ್ಲ ಕೂತಿದ್ದಾಗ ಗಿಲ್ಲಿ ತಮ್ಮ ಚಿಕ್ಕಪ್ಪನ ಕತೆ ಹೇಳಿದರು. ‘ನಾನು ಹಾಗೂ ನನ್ನ ಚಿಕ್ಕಪ್ಪನೂ ಬಹಳ ಕ್ಲೋಸು ಆದರೆ ಒಂದು ದಿನ ಎಲ್ಲರ ಎದುರು ನಾವಿಬ್ಬರೂ ಜಗಳ ಮಾಡಿದೆವು ಆದರೆ ಗುಟ್ಟಾಗಿ ಇಬ್ಬರೂ ಸಂಧಾನ ಮಾಡಿಕೊಂಡೆವು. ಜನರ ಎದುರು ಜಗಳ ಮಾಡುವುದು ಆ ನಂತರ ಗುಟ್ಟಾಗಿ ಮುದ್ದಾಡುವುದು ಇದೇ ನಮ್ಮ ಕೆಲಸವಾಗಿತ್ತು, ನಮ್ಮಿಬ್ಬರ ಈ ನಾಟಕದಲ್ಲಿ ಮೂರ್ಖರಾಗಿದ್ದು ಜನ’ ಎಂದರು ಗಿಲ್ಲಿ.

ಆ ಮೂಲಕ ಜಾನ್ವಿ ಹಾಗೂ ಅಶ್ವಿನಿ ಈಗಲೂ ಗೆಳತಿಯರಾಗಿಯೇ ಇದ್ದಾರೆ. ಆದರೆ ತಾವುಗಳು ಜಗಳ ಮಾಡಿರುವುದಾಗಿ, ದೂರಾಗಿರುವುದಾಗಿ ನಮ್ಮನ್ನು ನಂಬಿಸಿ, ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಗಿಲ್ಲಿಯ ಕತೆ ಕೇಳಿ ಜಾನ್ವಿ ನಕ್ಕರಷ್ಟೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ