‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಆಟದ ಮೂಲಕ ಗಮನ ಸೆಳೆದಿದ್ದಾರೆ. ಅಶ್ವಿನಿ ಗೌಡ ಎದುರು ಖಂಡಿತವಾಗಿ ಉತ್ತರ ನೀಡುವ ಮೂಲಕ ರಕ್ಷಿತಾ ಗಮನ ಸೆಳೆದರು. ರಕ್ಷಿತಾ ಅವರ ಈ ನಡೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ರಕ್ಷಿತಾ ಶೆಟ್ಟಿ ಅವರು ತಮ್ಮ ಆಟದ ಮೂಲಕ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಯಾರೇ ಅವರ ವಿರುದ್ಧ ತಿರುಗಿ ಬಿದ್ದರೂ ಅದನ್ನು ಲೆಕ್ಕಿಸೋದಿಲ್ಲ. ಅಶ್ವಿನಿ ಗೌಡ ಅವರು ಮಾತನಾಡಲು ನಿಂತರೆ ಸುಮಾರಾಗಿ ಯಾರೂ ಎದುರುತ್ತರ ನೀಡಲು ಬರೋದಿಲ್ಲ. ಆದರೆ, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇದಕ್ಕೆ ವಿರುದ್ಧ. ಅಶ್ವಿನಿ ಗೌಡ ಎದುರಿದ್ದಾರೆ ಎಂದರೆ ಅವರು ಖಡಾಖಂಡಿತವಾಗಿ ಉತ್ತರ ನೀಡೇ ನೀಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಟಾಂಗ್ ಕೊಟ್ಟಿದ್ದಾರೆ.
ಬಿಗ್ ಬಾಸ್ನಲ್ಲಿ ರಕ್ಷಿತಾನ ರಾಶಿಕಾ ಹಾಗೂ ಅಶ್ವಿನಿ ಗೌಡ ಟಾರ್ಗೆಟ್ ಮಾಡಿದ್ದರು. ಆಟ ಆಡುವ ವೇಳೆಯೂ ರಾಶಿಕಾ ಅವರು ರಕ್ಷಿತಾನ ಗಟ್ಟಿಯಾಗಿ ಹಿಡಿದಿದ್ದರು. ಇದೆರಡೂ ವಿಚಾರದಲ್ಲಿ ಗಿಲ್ಲಿಗೆ ಸೇಡು ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ಕೊನೆಗೂ ಆ ಅವಕಾಶ ಸಿಕ್ಕೇ ಬಿಟ್ಟಿತು. ರಾಶಿಕಾ ವಿರುದ್ಧ ಗಿಲ್ಲಿ ಸೇಡು ತೀರಿಸಿಕೊಂಡರು.
ರಾಶಿಕಾ, ಗಿಲ್ಲಿ, ಅಶ್ವಿನಿ ಮೊದಲಾದವರು ಒಂದೇ ತಂಡದಲ್ಲಿ ಇದ್ದಾರೆ ಗಿಲ್ಲಿ ತಂಡ ಟಾಸ್ಕ್ನಲ್ಲಿ ಗೆದ್ದಿತು. ಈ ಮೂಲಕ ಕ್ಯಾಪ್ಟನ್ ಟಾಸ್ಕ್ ಆಡಲು ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಈ ವೇಳೆ ತಂಡದಲ್ಲಿರುವ ಆರು ಮಂದಿ ರಾಶಿಕಾ ಹೆಸರು ಹೇಳಿದರೆ ಗಿಲ್ಲಿ ಮಾತ್ರ ಇದಕ್ಕೆ ಸಹಮತ ಸೂಚಿಸಲೇ ಇಲ್ಲ. ‘ಎಲ್ಲರ ಸಹಮತ ಬೇಕು’ ಎಂದು ಬಿಗ್ ಬಾಸ್ ಎರಡು ಬಾರಿ ಹೇಳಿದರು. ಆದರೆ, ರಾಶಿಕಾ ಹೆಸರು ಆಯ್ಕೆ ಮಾಡಲು ಗಿಲ್ಲಿಯ ಸಹಮತ ಸಿಕ್ಕಿಲ್ಲ. ಇದರಿಂದ ಬಿಗ್ ಬಾಸ್ ಈ ಅವಕಾಶವನ್ನು ಹಿಂದೆ ಪಡೆದರು. ಈ ಬಗ್ಗೆ ಘೋಷಣೆ ಕೂಡ ಮಾಡಿದರು.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ತಮ್ಮದೇ ತಂಡದ ರಾಶಿಕಾಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
ಎಲ್ಲರೂ ರಾಶಿಕಾಗೆ ಕ್ಯಾಪ್ಟನ್ಸಿ ರೇಸ್ನಲ್ಲಿ ನಿಲ್ಲೋ ಅವಕಾಶ ಸಿಗುತ್ತದೆ ಎಂದೇ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಬಿಗ್ ಬಾಸ್ ಆದೇಶ ಕೇಳಿ ರಾಶಿಕಾ ಹಾಗೂ ಅಶ್ವಿನಿ ಗೌಡಗೆ ಶಾಕ್ ಆಯ್ತು. ಆಗ ರಕ್ಷಿತಾ ಶೆಟ್ಟಿ ಅವರು ಎದ್ದು ನಿಂತು, ‘ಹೇ..’ ಎಂದು ಕೂಗಿ, ‘ಥ್ಯಾಂಕ್ ಯೂ ಬಿಗ್ ಬಾಸ್’ ಎಂದರು. ಅವಕಾಶ ತಪ್ಪಿ ಹೋಗಿದ್ದನ್ನು ನೋಡಿ ಮೊದಲೇ ಉರಿದುಕೊಳ್ಳುತ್ತಿದ್ದ ಅಶ್ವಿನಿ, ರಕ್ಷಿತಾ ಮಾತಿನಿಂದ ಸಿಟ್ಟಾದರು. ಅವರು ರಕ್ಷಿತಾನ ಹೆದರಿಸೋಕೆ ಹೋದರು. ಆಗ ರಕ್ಷಿತಾ ಅವರು ಬೇರೆಯವರನ್ನು ನೋಡುತ್ತಾ, ‘ನಾನು ಬಿಗ್ ಬಾಸ್ ಜೊತೆ ಮಾತಾಡ್ತಾ ಇರೋದು. ನನ್ನ ಹಾಗೂ ಬಿಗ್ ಬಾಸ್ ಮಧ್ಯೆ ಯಾರೂ ಬರಬೇಡಿ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Thu, 30 October 25








