AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?

Puneeth Rajkumar Death Anniversary: ಪುನೀತ್ ರಾಜ್​ಕುಮಾರ್ ನಿಧನಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಅಕಾಲಿಕ ಮರಣದಿಂದ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು. ಅಕ್ಟೋಬರ್ 29, 2021ರಂದು ಅವರು ನಿಧನ ಹೊಂದಿದ್ದರು. ಅವರ ಅಕಾಲಿಕ ನಿಧನದ ಹಿಂದಿನ ದಿನದ ಘಟನೆಗಳು, ಗಂಧದಗುಡಿ ಕನಸು ಹಾಗೂ ಪಿಆರ್‌ಕೆ ಮುನ್ನಡೆಸುತ್ತಿರುವ ಅಶ್ವಿನಿ ಅವರ ಬಗ್ಗೆ ಈ ಸ್ಟೋರಿಯಲ್ಲಿದೆ ವಿಷಯ.

ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?
Puneeth Rajkumar Death Anniversery
ರಾಜೇಶ್ ದುಗ್ಗುಮನೆ
|

Updated on:Oct 29, 2025 | 7:38 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಿಧನ ಹೊಂದಿ ನಾಲ್ಕು ವರ್ಷಗಳೇ ಕಳೆದು ಹೋಗಿವೆ. ಕನ್ನಡದಲ್ಲಿ ಸೂಪರ್​ಸ್ಟಾರ್ ಆಗಿ ಮೆರೆಯುವಾಗಲೇ ಅವರು ಅಕಾಲಿಕ ಮರಣ ಹೊಂದಿದರು. ಅವರು ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ವಿಧಿ ಆಟ ಬೆರೇಯದೇ ಇತ್ತು. ಎಲ್ಲಿಯೋ ಅವಿತು ಕೂತಿದ್ದ ಸಾವು ಅವರನ್ನು ಬಂದು ಬಿಗಿದಪ್ಪಿ ಬಿಟ್ಟಿತ್ತು. ಅವರನ್ನು ಉಳಿಸಿಕೊಳ್ಳಲು ಆ ದೇವರು ಸಮಾಯವಕಾಶವನ್ನೂ ನೀಡಲಿಲ್ಲ. ಅವರು ಇಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಈಗಲೂ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.

ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪುನೀತ್

ಪುನೀತ್ ಆಪ್ತ ಹಾಗೂ ಸಂಗೀತ ಸಂಯೋಜಕ ಗುರುಕಿರಣ್ ಅವರಿಗೆ ಅಕ್ಟೋಬರ್ 28 ಬರ್ತ್​ಡೇ. ಈ ಕಾರಣಕ್ಕೆ ಪುನೀತ್ ಅವರನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಪುನೀತ್ ಅವರು ಈ ಪಾರ್ಟಿಗೆ ಬಂದ ಸೆಲೆಬ್ರಟಿಗಳು ಹಾಗೂ ಆಪ್ತರ ಜೊತೆ ಮಾತನಾಡಿ ಅಲ್ಲಿಂದ ಮನೆಗೆ ಬಂದಿದ್ದರು.

ವಿಶ್ ಮಾಡಿದ್ರು

2021ರ ಅಕ್ಟೋಬರ್ 29ರಂದು ಶಿವರಾಜ್​ಕುಮಾರ್ ನಟನೆಯ, ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾಗೆ ಮುಂಜಾನೆ 5 ಗಂಟೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಯಿತು. ಈ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಮುಗಿ ಬಿದ್ದರು. ಈ ಚಿತ್ರಕ್ಕೆ ಪುನೀತ್ ರಾಜ್​ಕುಮಾರ್ ಅವರು ಟ್ವಿಟರ್ ಮೂಲಕ ವಿಶ್ ಮಾಡಿದರು.

ಇದನ್ನೂ ಓದಿ
Image
Shocking News: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ
Image
ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಉಂಟಾಯಿತು ಎನ್ನಲಾಗಿದೆ. ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಅವರು ನಿಧನ ಹೊಂದಿಯಾಗಿತ್ತು. ಸಖತ್ ಫಿಟ್ ಆಗಿದ್ದ ಪುನೀತ್ ಈ ರೀತಿ ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. 12 ಗಂಟೆ ವೇಳೆಗೆ ಅವರು ನಿಧನ ಹೊಂದಿದ್ದು ಖಚಿತವಾಗಿತ್ತು. ಆದರೆ, ಸರ್ಕಾರದವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕವೇ ಈ ಸುದ್ದಿಯನ್ನು ಪ್ರಕಟಿಸಿದರು.

ಜಿಮ್ ಮಾಡಿದ್ರಾ?

ಪುನೀತ್ ರಾಜ್​ಕುಮಾರ್ ಏನೇ ತಪ್ಪಿಸಿದರೂ ಜಿಮ್ ಮಾಡೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅವರಿಗೆ ಹೃದಯಾಘಾತ ಆಗುವ ದಿನ ಅವರು ಜಿಮ್ ಮಾಡಿದ್ದರು ಎಂದು ಕೆಲವರು ಹೇಳಿದರೆ, ಅವರ ಬಾಡಿಗಾರ್ಡ್ ಈ ವಿಚಾರವನ್ನು ತಳ್ಳಿ ಹಾಕುತ್ತಾರೆ. ‘ಅವರು ಅಂದು ಜಿಮ್ ಮಾಡಿಯೇ ಇರಲಿಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಏನೋ ಸರಿ ಇಲ್ಲ ಎಂದು ಅನಿಸುತ್ತಿದ್ದ ಕಾರಣಕ್ಕೆ ಪುನೀತ್ ಅಂದು ಜಿಮ್ ಮಾಡಿರಲಿಲ್ಲ ಎನ್ನಲಾಗಿದೆ.

ನವೆಂಬರ್ 1ಕ್ಕೆ ಬಿಡುಗಡೆ ಆಗಬೇಕಿತ್ತು ಟೈಟಲ್

ಪುನೀತ್ ರಾಜ್​ಕುಮಾರ್ ಅವರು ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ಮಾಡಿದ್ದರು. ಈ ಡಾಕ್ಯುಮೆಂಟರಿಯ ಟೈಟಲ್​ನ ನವೆಂಬರ್ 1ರಂದು ಅವರು ಅನೌನ್ಸ್ ಮಾಡುವವರು ಇದ್ದರು. ಆದರೆ, ವಿಧಿಯಾಟ ಬೇರೆಯದೇ ಇತ್ತು. ಅದಕ್ಕೂ ಮೊದಲೇ ಅವರು ನಿಧನ ಹೊಂದಿದರು.

ಇದನ್ನೂ ಓದಿ: ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?

ಪಿಆರ್​ಕೆ ಜವಾಬ್ದಾರಿ

ಪುನೀತ್ ನಿಧನದ ಬಳಿಕ ಪಿಆರ್​ಕೆ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ. ಇದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಪುನೀತ್ ನಿಧನದ ಬಳಿಕ ಪಿಆರ್​ಕೆಯಿಂದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಗಂಧದಗುಡಿ’, ‘ಆಚಾರ್ ಆ್ಯಂಡ್ ಕೋ’, ‘ಒ2’ ಹಾಗೂ ‘ಎಕ್ಕ’ ಸಿನಿಮಾಗಳು ಬಂದಿವೆ. ಈ ಪೈಕಿ ಕೆಲವು ಕಥೆಗಳನ್ನು ಪುನೀತ್ ಅವರೇ ಫೈನಲ್ ಮಾಡಿದ್ದರೆ, ಇನ್ನೂ ಕೆಲವು ಅಶ್ವಿನಿ ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:38 am, Wed, 29 October 25

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ