AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?

Puneeth Rajkumar Death Anniversary: ಪುನೀತ್ ರಾಜ್‌ಕುಮಾರ್ 4ನೇ ಪುಣ್ಯತಿಥಿಯಂದು ಅವರನ್ನು ಸ್ಮರಿಸಲಾಗುತ್ತಿದೆ. ಅಶ್ವಿನಿ ಅವರೊಂದಿಗಿನ ಅವರ ಪ್ರೀತಿ ಕಥೆ ಮತ್ತು ಡಾ. ರಾಜ್‌ಕುಮಾರ್ ಅವರ ಪ್ರತಿಕ್ರಿಯೆ ರೋಮಾಂಚನಕಾರಿ. ಪುನೀತ್ 24ರ ಹರೆಯದಲ್ಲಿ ಪ್ರೀತಿ ವಿಚಾರ ಹೇಳಿಕೊಂಡಾಗ, ತಂದೆ ಡಾ. ರಾಜ್‌ಕುಮಾರ್ ಸಂತೋಷದಿಂದ ಒಪ್ಪಿಕೊಂಡರು.

ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
ಅಶ್ವಿನಿ-ಪುನೀತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 28, 2025 | 7:55 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಇಂದು ನಮ್ಮ ಜೊತೆ ಇಲ್ಲ. ಅವರು ನಿಧನ ಹೊಂದಿ ಇಂದಿಗೆ ಬರೋಬ್ಬರಿ 4 ವರ್ಷಗಳು ಕಳೆದು ಹೋಗಿವೆ. ಪುನೀತ್ ರಾಜ್​ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ತಿಥಿಯಂದು ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಈ ವೇಳೆ ಅವರ ಜೀವನದ ಅಪರೂಪದ ಘಟನೆಗಳ ಬಗ್ಗೆ ನೆನಪಿಸಿಕೊಳ್ಳೋಣ.

ಪುನೀತ್ ರಾಜ್​ಕುಮಾರ್ ಹಾಗೂ ಅಶ್ವಿನಿ ಅವರು ಪ್ರೀತಿಸಿ ಮದುವೆ ಆದವರು. ಅಶ್ವಿನಿ ಚಿಕ್ಕಮಗಳೂರಿನವರು. ಪುನೀತ್ ಅವರು ಮೇರು ನಟ ರಾಜ್​ಕುಮಾರ್ ಮಗ. ಪುನೀತ್ ಹಾಗೂ ಅಶ್ವಿನಿ ಪ್ರೀತಿಗೆ ಕುಟುಂಬದವರು ಒಪ್ಪಿಗೆ ಕೊಟ್ಟ ಬಳಿಕವೇ ಮದುವೆ ಆದರು. ಪುನೀತ್ ರಾಜ್​ಕುಮಾರ್ ಅವರು ಪ್ರೀತಿ ವಿಚಾರವನ್ನು ತುಂಬಾನೇ ಭಯದಲ್ಲೇ ತಂದೆ ಬಳಿ ಹೇಳಿಕೊಂಡಿದ್ದರು. ವಿಶೇಷ ಎಂದರೆ ರಾಜ್​ಕುಮಾರ್ ನೀಡಿದ ಉತ್ತರ ಪುನೀತ್ ಮೊಗದಲ್ಲಿ ನಗು ಮೂಡಿಸಿತ್ತು.

ಈ ಬಗ್ಗೆ ಪುನೀತ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಪುನೀತ್​ಗೆ ಆಗ 24 ವರ್ಷ. ರಾಜ್​ಕುಮಾರ್​ಗೆ 70+ ವರ್ಷ ಆಗಿತ್ತು. ಜನರೇಶನ್ ಗ್ಯಾಪ್ ಇರುವುದರಿಂದ ರಾಜ್​ಕುಮಾರ್ ಏನಾದರೂ ಅಂದುಕೊಂಡು ಬಿಟ್ಟರೆ ಎಂಬ ಭಯ ಬಹುವಾಗಿ ಕಾಡಿತ್ತು. ಆದರೆ, ಹಾಗಾಲೇ ಇಲ್ಲ. ರಾಜ್​ಕುಮಾರ್ ಒಪ್ಪಿಕೊಂಡರು.

ಇದನ್ನೂ ಓದಿ
Image
‘ಕಾಂತಾರ’ ಸಿನಿಮಾ ಒಂದೇ ತಿಂಗಳಿಗೆ ಒಟಿಟಿಗೆ ಬರುತ್ತಿರುವುದೇಕೆ?
Image
ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

‘ನನ್ನ ತಾಯಿ ಪಾರ್ವತಮ್ಮ ಬಳಿ ನನ್ನ ಪ್ರೀತಿ ವಿಚಾರ ಹೇಳಿಕೊಂಡೆ. ಅವರು ಖುಷಿ ಆದರು. ತಂದೆಗೆ ತಿಳಿಸುವಂತೆ ನನಗೆ ಸೂಚಿಸಿದರು. ಆಗ ನನಗೆ 24 ವರ್ಷ. ತಂದೆಗೆ 72 ವರ್ಷ. ಒಂದು ಹುಡುಗಿಯನ್ನು ಇಷ್ಟಪಟ್ಟಿದೀನಿ ಎಂದು ನನ್ನ ತಂದೆ ಬಳಿ ಹೋಗಿ ಹೇಳಿದೆ. ಅವರು ನಕ್ಕರು. ಮದುವೆ ಮಾಡಿ ಕೊಡ್ತೀತಿನಿ ಎಂದರು. ತಂದೆ ಬರ್ತ್​​ಡೇ ದಿನ ಅಶ್ವಿನಿ ಬಳಿ ಕಾಲ್ ಮಾಡಿಸಿ ವಿಶ್ ಮಾಡಿಸಿದ್ದೆ. ಜನರೇಶನ್ ಗ್ಯಾಪ್ ಅನ್ನೋದಲ್ಲ ಏನೂ ಇರಲಿಲ್ಲ’ ಎಂದಿದ್ದರು ಪುನೀತ್.

ಇದನ್ನೂ ಓದಿ: ‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜ್​​ಕುಮಾರ್: ಜೀ5 ಒಟಿಟಿಯಲ್ಲಿ ಅ.31ರಿಂದ ಪ್ರಸಾರ

ರಾಜ್​ಕುಮಾರ್ ಅವರು ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುತ್ತಿದ್ದರು ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಹಿರಿಯರ ಬಳಿ ಅವರ ರೀತಿಯೇ ಇರುತ್ತಿದ್ದರು. ರಾಜ್​ಕುಮಾರ್ ಒಪ್ಪಿಗೆ ಬಳಿಕ ಪುನೀತ್ ಹಾಗೂ ಅಶ್ವಿನಿ ಮದುವೆ ಅದ್ದೂರಿಯಾಗಿ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.