AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ

Kantara: Chapter 1 On Amazon Prime: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್​​ ಅನುಭವದಲ್ಲಿ ಅದ್ಭುತ ಎನಿಸಿಕೊಂಡಿದೆ. ಆದರೆ, ಒಟಿಟಿಯಲ್ಲಿ ಇದೇ ರೀತಿಯ ಅನುಭವ ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಒಟಿಟಿ ಮಂದಿ ಸಿನಿಮಾನ ಯಾವ ರೀತಿಯಲ್ಲಿ ಸ್ವಿಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
ಕಾಂತಾರ
ರಾಜೇಶ್ ದುಗ್ಗುಮನೆ
|

Updated on: Oct 28, 2025 | 7:00 AM

Share

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದ ವಿಶ್ವ ಮಟ್ಟದ ಗಳಿಕೆ 850 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಸಿನಿಮಾದ ಗಳಿಕೆ ಸಾವಿರ ಕೋಟಿ ತಲುಪಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ದೀಪಾವಳಿ ರಜೆಗಳು ಚಿತ್ರಕ್ಕೆ ಸಹಕಾರಿ ಆಗಿದ್ದವು. ಆದರೆ, ಸಿನಿಮಾ ಮಾತ್ರ ಸಾವಿರ ಕೋಟಿ ರೂಪಾಯಿ ತಲುಪಲು ಸಾಧ್ಯವಿಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣ ಸಿನಿಮಾ ಅಕ್ಟೋಬರ್ 31ರಂದು ಒಟಿಟಿಗೆ ಬರುತ್ತಿರುವುದು.

ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ 50 ದಿನಗಳ ಬಳಿಕ ಒಟಿಟಿಗೆ ಬರೋದು ವಾಡಿಕೆ. ಆದರೆ, ಕೆಲವು ಫ್ಲಾಪ್ ಸಿನಿಮಾಗಳು ಒಂದೇ ತಿಂಗಳಿಗೆ ಒಟಿಟಿಗೆ ಕಾಲಿಟ್ಟ ಉದಾಹರಣೆ ಇದೆ. ‘ಕಾಂತಾರ: ಚಾಪ್ಟರ್ 1’ ಸೂಪರ್ ಹಿಟ್ ಆದ ಹೊರತಾಗಿಯೂ ಸಿನಿಮಾ ಕೇವಲ 30 ದಿನಕ್ಕೆ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಗೆ ಕಾಲಿಡುತ್ತಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾರತದ ಕಲೆಕ್ಷನ್ 600 ಕೋಟಿ ರೂಪಾಯಿ ಸಮೀಪಿಸುತ್ತಿದೆ. ಇದರಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಗಳಿಂದಲೇ ತಲಾ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಹಿಂದಿ ಮಂದಿ ಕೂಡ ಸಿನಿಮಾನ ಇಷ್ಟಪಟ್ಟು ವೀಕ್ಷಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಸಿನಿಮಾದ ಗಳಿಕೆ 850 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ
Image
‘ಮಿಸ್ ಮಾಡಿಕೊಳ್ತೀನಿ’; ಮನೆಯಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ
Image
4ನೇ ಭಾನುವಾರವೂ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಡಬಲ್ ಡಿಜಿಟ್ ಕಲೆಕ್ಷನ್

ಇನ್ನು ಕೆಲವೇ ದಿನ ಸಿನಿಮಾ ಥಿಯೇಟರ್​​ನಲ್ಲಿ ಪ್ರದರ್ಶನ ಕಂಡರೂ ಸಿನಿಮಾ ಸಾವಿರ ಕೋಟಿ ರೂಪಾಯಿ ತಲುಪುತ್ತಿತ್ತೇನೋ. ಆದರೆ, ಚಿತ್ರ ಒಟಿಟಿಗೆ ಬರುತ್ತಿದೆ. ಸಿನಿಮಾ ಒಟಿಟಿಗೆ ಬಂದ ಬಳಿಕವೂ ಥಿಯೇಟರ್​ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತದೆ ನಿಜ. ಆದರೆ, ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಆಗುವುದಿಲ್ಲ. ಕೆಲ ವಾರಗಳ ಬಳಿಕ ಆ ಪ್ರದರ್ಶನವನ್ನು ಕೂಡ ನಿಲ್ಲಿಸಲಾಗುತ್ತದೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ; ಅಪರೂಪದ ವಿಡಿಯೋ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್​​ ಅನುಭವದಲ್ಲಿ ಅದ್ಭುತ ಎನಿಸಿಕೊಂಡಿದೆ. ಆದರೆ, ಒಟಿಟಿಯಲ್ಲಿ ಇದೇ ರೀತಿಯ ಅನುಭವ ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಒಟಿಟಿ ಮಂದಿ ಸಿನಿಮಾನ ಯಾವ ರೀತಿಯಲ್ಲಿ ಸ್ವಿಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.