ನಾಲ್ಕನೇ ಭಾನುವಾರವೂ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಡಬಲ್ ಡಿಜಿಟ್ ಕಲೆಕ್ಷನ್; ಸಾವಿರ ಕೋಟಿ ಮತ್ತಷ್ಟು ಸನಿಹ
'ಕಾಂತಾರ: ಚಾಪ್ಟರ್ 1' ಸಿನಿಮಾ 25 ದಿನ ಪೂರೈಸಿ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ. ವಿಶ್ವದಾದ್ಯಂತ 850 ಕೋಟಿ ರೂಪಾಯಿ ಗಳಿಸಿದೆ. ₹1000 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ 'KGF 2' ನಂತರ ಮತ್ತೊಂದು ದೊಡ್ಡ ಯಶಸ್ಸು ಇದು. ಹಿಂದಿಯಲ್ಲೂ ₹200+ ಕೋಟಿ ಗಳಿಸಿ ದಾಖಲೆ ಬರೆದಿದೆ.

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ನಾಲ್ಕನೇ ಭಾನುವಾರವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಜೊತೆಗೆ 25ನೇ ದಿನವನ್ನು ಕೂಡ ಪೂರ್ಣಗೊಳಿಸಿದೆ. 25ನೇ ದಿನವೂ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಚಿತ್ರ ತನ್ನ ನಾಗಾಲೋಟ ಮುಂದುವರಿಸಿದೆ. ಹೀಗೆಯೇ ಗಳಿಕೆ ಆದರೆ, ಸಾವಿರ ಕೋಟಿ ರೂಪಾಯಿ ಮತ್ತಷ್ಟು ಸಮೀಪಿಸಲಿದೆ. ಈ ಮೂಲಕ ‘ಕೆಜಿಎಫ್ 2’ ಬಳಿಕ ಕನ್ನಡದಲ್ಲಿ ಮತ್ತೊಂದು ಸಾವಿರ ಕೋಟಿ ರೂಪಾಯಿಯ ಚಿತ್ರ ಹುಟ್ಟಿಕೊಂಡಂತೆ ಆಗಲಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನವೇ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಶಾರುಖ್ ಖಾನ್ ನಟನೆಯ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿತು. ಈಗ ಸಿನಿಮಾದ ಒಟ್ಟಾರೆ ಕಲೆಕ್ಷನ್ ಭಾರತದಲ್ಲಿ 589.20 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ 850+ ಕೋಟಿ ರೂಪಾಯಿ ಆಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 27ರಂದು 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಂದಿನಿಂದ ಚಿತ್ರದ ಗಳಿಕೆ ಒಂದಂಕಿಗೆ ಇಳಿಕೆ ಆಗುವ ಸಾಧ್ಯತೆ ಇದೆ. ಅಂದರೆ ಸಿನಿಮಾದ ಗಳಿಕೆ 10 ಕೋಟಿ ರೂಪಾಯಿಗಿಂತ ಕಡಿಮೆಯೇ ಇರಲಿದೆ. ಐದನೇ ವೀಕೆಂಡ್ನಲ್ಲಿ ಸಿನಿಮಾ ಯಾವ ರೀತಿ ಪ್ರದರ್ಶನ ಕಾಣುತ್ತದೆ ಎಂಬ ಕುತೂಹಲ ಇದೆ.
ಇದನ್ನೂ ಓದಿ: ದಾಖಲೆ ಬರೆದ ‘ಕಾಂತಾರ: ಚಾಪ್ಟರ್ 1’ ಹಿಂದಿ ಆವೃತ್ತಿ: ಕಲೆಕ್ಷನ್ ಎಷ್ಟು?
ಹಿಂದಿಯಲ್ಲೂ ದಾಖಲೆ
ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಸಿನಿಮಾ ದಾಖಲೆ ಬರೆದಿದೆ. ಈ ಚಿತ್ರ ಇವೆರಡೂ ಭಾಷೆಯಲ್ಲಿ 200+ ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಹೆಮ್ಮೆಯೇ ಸರಿ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡುವ ಎಲ್ಲಾ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








