‘ನಂಗೂ ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಗಿಲ್ಲಿ ವಿರುದ್ಧ ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಕೀಳುಮಟ್ಟದ ವರ್ತನೆ ಮುಂದುವರಿಸಿದ್ದಾರೆ. ಕಳೆದ ವಾರ 'ಎಸ್' ಶಬ್ದಕ್ಕೆ ಸುದೀಪ್ ಅವರಿಂದ ಉಗಿಸಿಕೊಂಡಿದ್ದ ಅಶ್ವಿನಿ, ಈ ವಾರ ಗಿಲ್ಲಿ ಜೊತೆಗಿನ ವಿವಾದದಲ್ಲಿ ಸಿಲುಕಿದ್ದಾರೆ. ಗಿಲ್ಲಿಯ ಪಂಚೆ ಎಳೆಯುವ ಬಗ್ಗೆ ಮಾತನಾಡಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸುದೀಪ್ ಅವರು ಇಂದು ಅಶ್ವಿನಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಶ್ವಿನಿ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ಕೀಳು ಮಟ್ಟಕ್ಕೆ ಇಳಿದು ಸುದೀಪ್ ಅವರಿಂದ ಉಗಿಸಿಕೊಂಡಿದ್ದರು. ಅವರು ಬಳಕೆ ಮಾಡಿದ ಎಸ್ ಶಬ್ದದ ವಿಚಾರವಾಗಿ ಕೇಸ್ ಕೂಡ ದಾಖಲಾಗಿದೆ. ಈ ವಾರ ಅಶ್ವಿನಿ ಅವರು ಕಿಚ್ಚನ ಚಪ್ಪಾಳೆ ಪಡೆಯಬೇಕು ಎಂಬ ಹಂಬದಲ್ಲಿ ಇದ್ದರು. ಆದರೆ, ಅವರು ನಡೆದುಕೊಂಡ ರೀತಿ ಸಾಕಷ್ಟು ಕೀಳುಮಟ್ಟದಲ್ಲಿ ಇತ್ತು. ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಗಿಲ್ಲಿಯ ಪಂಚೆ ಎಳೆಯುವ ಬಗ್ಗೆ ಅವರು ಮಾತನಾಡಿದ್ದಾರೆ. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತಾವೇ ಡಾನ್ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಒಂಟಿ-ಜಂಟಿ ಆಟವನ್ನು ಕೊನೆಗೊಳಿಸಿದರೂ ಅಶ್ವಿನಿ ಆ್ಯಂಡ್ ಟೀಂ ಇನ್ನೂ ಈ ಆಟವನ್ನು ಮರೆಯುವಂತೆ ಕಾಣುತ್ತಿಲ್ಲ. ಯಾವುದಾದರೂ ಟೀಂ ಮಾಡುವಾಗ ಒಂಟಿಯಲ್ಲಿ ಒಬ್ಬರು, ಜಂಟಿಯಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಎಂದೇ ಹೇಳುತ್ತಿದ್ದಾರೆ. ಈ ಮಧ್ಯೆ ಒಂದು ಘಟನೆ ನಡೆದು ಹೋಗಿದೆ.
ಅಶ್ವಿನಿ ಗೌಡ ಅವರಿಗೆ ರಘು ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಕಳಪೆ ನೀಡಿದ್ದಾರೆ. ಕಳಪೆ ಎನಿಸಿಕೊಂಡ ಅವರು ಜೈಲಿನಲ್ಲಿ ಕುಳಿತಿರಬೇಕು. ಅವರು ಯಾವುದೇ ವಸ್ತುಗಳನ್ನು ತೆಗೆದುಕೊಂಡು ಜೈಲಿಗೆ ಹೋಗಬಾರದು. ಆದರೆ, ಅಶ್ವಿನಿ ಅವರು ತಮ್ಮ ಸ್ವೆಟರ್ ಧರಿಸಿಯೇ ಜೈಲಿನ ಒಳಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಗಿಲ್ಲಿ ನಟ ಸ್ವೆಟರ್ನ ಎಸೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅಶ್ವಿನಿ ಸಿಟ್ಟಾದರು.
ಇದನ್ನೂ ಓದಿ: ಜೈಲಿಗೆ ಹೋದರೂ ಬುದ್ಧಿ ಕಲಿಯಲಿಲ್ಲ ಅಶ್ವಿನಿ ಗೌಡ; ಕ್ಯಾಪ್ಟನ್ ಆದ ರಘು
‘ನಿನ್ನ ಪಂಚೆ ಎಳೆಯೋಕೆ ನಿನಗೂ ಬರುತ್ತದೆ. ಆಗ, ನಿನ್ನ ಮರ್ಯಾದೆ ಏನಾಗಿರೋದು? ಹೋಗೋ ಥೂ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ‘ರೂಲ್ಸ್ ಹೇಳಲು ಬಂದವರಿಗೆ ಈ ರೀತಿಯಾ ಮಾಡೋದಾ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಗಿಲ್ಲಿ ಅವರು ಅಶ್ವಿನಿ ಅವರ ಸ್ವೆಟರ್ ಎಳೆದಿದ್ದೇ ಹೊರತು, ಡ್ರೆಸ್ ಅಲ್ಲ. ಅದರಲ್ಲಿ ತಪ್ಪೇನಿದೆ’ ಎಂದಿದ್ದಾರೆ ಫ್ಯಾನ್ಸ್. ಈ ವಿಚಾರವಾಗಿ ಸುದೀಪ್ ಅವರು ಇಂದಿನ (ಅಕ್ಟೋಬರ್ 25) ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








