ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ 1’; ಮುಂದಿದೆ ದೊಡ್ಡ ಸವಾಲು
Kantara Chapter 1 Box Office Collection: 'ಕಾಂತಾರ: ಚಾಪ್ಟರ್ 1' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ದಾಟಿ ಸಾವಿರ ಕೋಟಿಯತ್ತ ಸಾಗಿದೆ. ದೀಪಾವಳಿ ನಂತರ ದೈನಂದಿನ ಗಳಿಕೆ ಒಂದಂಕಿಗೆ ಇಳಿದಿದ್ದರೂ, ಒಟ್ಟಾರೆ ಕಲೆಕ್ಷನ್ ಬಲವಾಗಿದೆ. ಹೊಸ ಸಿನಿಮಾಗಳ ನಡುವೆಯೂ 'ಕಾಂತಾರ 1' ಸದ್ದು ಮಾಡುತ್ತಿದೆ.

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾ ರಿಲೀಸ್ ಆದಾಗಿನಿಂದಲೂ ಅಬ್ಬರದ ಕಲೆಕ್ಷನ್ ಮಾಡುತ್ತಲೇ ಸಾಗುತ್ತಿದೆ. ಈಗ ಈ ಚಿತ್ರದ ದಿನದ ಗಳಿಕೆ ಮೂರು ವಾರಗಳಲ್ಲಿ ಮೂರನೇ ಬಾರಿಗೆ ಒಂದಂಕಿಗೆ ಇಳಿದಿದೆ. ಹೊಸ ಸಿನಿಮಾಗಳ ಬಿಡುಗಡೆ ಹಾಗೂ ವಿವಿಧ ಕಾರಣಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಲೆಕ್ಷನ್ ಒಂದಂಕಿಗೆ ಇಳಿಕೆ ಆಗಿದೆ. ವೀಕೆಂಡ್ ಹೊರತುಪಡಿಸಿ ಮುಂದಿನ ದಿನಗಳಲ್ಲಿ ಗಳಿಕೆ ಕಡಿಮೆ ಆಗುವ ಸಾಧ್ಯತೆ ಇದೆ.
ಹಿಂದಿಯಲ್ಲಿ ‘ಥಾಮಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಿಂದಿ ವರ್ಷನ್ ಮೇಲೆ ಈ ಚಿತ್ರದ ರಿಲೀಸ್ ಅಷ್ಟಾಗಿ ಪ್ರಭಾವ ಬೀರಿಲ್ಲ. ಹಿಂದಿಯಲ್ಲೂ ‘ಕಾಂತಾರ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರ (ಅಕ್ಟೋಬರ್ 23) ಸಿನಿಮಾ ಸಾಧಾರಣ ಗಳಿಕೆ ಮಾಡಿದೆ.
ಈ ವಾರದ ಮೊದಲ ಮೂರು ದಿನ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದೆ. ಇದಕ್ಕೆ ಕಾರಣ ಆಗಿದ್ದು, ದೀಪಾವಳಿ ಹಬ್ಬ. ಈಗ ಸಿನಿಮಾ ಅಕ್ಟೋಬರ್ 23ರಂದು ಕೇವಲ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಿಲೀಸ್ ಆದಾಗಿನಿಂದಲೂ ಸಿನಿಮಾ ಇಷ್ಟು ಕಡಿಮೆ ಗಳಿಕೆಯನ್ನು ಸಿನಿಮಾ ಮಾಡಿಯೇ ಇರಲಿಲ್ಲ. ಈ ಚಿತ್ರದ ಕನಿಷ್ಠ ಗಳಿಕೆ ಈವರೆಗೆ 8.5 ಕೋಟಿ ರೂಪಾಯಿ ಇತ್ತು.
‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದಿದೆ. ಈಗಾಗಲೇ ಅನೇಕರು ಸಿನಿಮಾನ ಎರಡು-ಮೂರು ಬಾರಿ ನೋಡಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಡಬಲ್ ಡಿಜಿಟ್ ಕಲೆಕ್ಷನ್ ಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.
ಇದನ್ನೂ ಓದಿ: ದೀಪಾವಳಿ ಕೊನೆಯ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರ; ಸಾವಿರದ ಕ್ಲಬ್ ಸೇರಲು ಇನ್ನೆಷ್ಟು ಕೋಟಿ ಬೇಕು?
‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ತಲುಪುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 900 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ನಿಧಾನವಾಗಿ ಕಲೆಕ್ಷನ್ ಆದರೂ ಇನ್ನೊಂದು ತಿಂಗಳಲ್ಲಿ ಸಿನಿಮಾ 1000 ಕೋಟಿ ರೂಪಾಯಿ ತಲುಪಬಹುದು ಎಂದು ಊಹಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








