ಬಿಗ್ ಬಾಸ್ ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ಪೊಲೀಸ್ ವಿಚಾರಣೆ
ಬಿಗ್ ಬಾಸ್ ಕನ್ನಡ ಮನೆಗೆ ಅಶ್ವಿನಿ ಗೌಡಗೆ ಕಾನೂನು ಸಂಕಷ್ಟ ಎದುರಾಗಿದೆ. ರಕ್ಷಿತಾ ಶೆಟ್ಟಿ ಜೊತೆ ಜಗಳದ ಸಂದರ್ಭದಲ್ಲಿ ಜಾತಿ ನಿಂದನೆಗೆ ಒಳಗಾಗುವ ಪದ ಬಳಸಿದ್ದಾರೆ. ಇದರಿಂದಾಗಿ ಪೊಲೀಸ್ ವಿಚಾರಣೆಗಾಗಿ ಅವರು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಕಲರ್ಸ್ ವಾಹಿನಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್ (Bigg Boss) ಶೋ ಹಾಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಬೇಡ ಬೇಡ ಎಂದರೂ ಸಾಕಷ್ಟು ವಿವಾದಗಳು ಹುಟ್ಟಿಕೊಳ್ಳುತ್ತವೆ. ಕಳೆದ ಬಾರಿಯ ಬಿಗ್ ಬಾಸ್ನಲ್ಲಿ ಆದ ವಿವಾದಗಳು ಒಂದೆರಡಲ್ಲ. ಈ ಬಾರಿ ಯಾವುದೇ ಕಾನೂನು ಸಮಸ್ಯೆ ಬರದಂತೆ ನೋಡಿಕೊಳ್ಳಲು ಸಾಕಷ್ಟು ಸಿದ್ಧತೆ ನಡೆದಿತ್ತು. ಆದರೆ, ಅಶ್ವಿನಿ ಗೌಡ ಅವರು ಮಾಡಿದ ತಪ್ಪಿನಿಂದ ಮತ್ತೆ ಕಾನೂನು ತೊಡಕು ಉಂಟಾಗಿದೆ. ಪೊಲೀಸ್ ವಿಚಾರಣೆಗಾಗಿ ಅವರು ಶೀಘ್ರವೇ ಹೊರಕ್ಕೆ ಬರಬೇಕಾದ ಪರಿಸ್ಥಿತಿ ಬಂದೊದಗಬಹುದು ಎನ್ನಲಾಗುತ್ತಿದೆ.
ಆರೋಗ್ಯ ಸಮಸ್ಯೆ, ಕಾನೂನು ಸಮಸ್ಯೆ ಎದುರಾದಾಗ ಸ್ಪರ್ಧಿಗಳು ಹೊರಕ್ಕೆ ಬಂದು ಹೋದ ಉದಾಹರಣೆ ಸಾಕಷ್ಟಿದೆ. ಚೈತ್ರಾ ಕುಂದಾಪುರ ಅವರು ತಮ್ಮ ಹಳೆಯ ಕೇಸ್ ವಿಚಾರಣೆಗೆ, ಅನಾರೋಗ್ಯ ಸಮಸ್ಯೆಯಿಂದ ಈ ಮೊದಲು ಬಿಗ್ ಬಾಸ್ನಿಂದ ಹೊರಕ್ಕೆ ಬಂದಿದ್ದರು. ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ ಸೇರಿದಂತೆ ಅನೇಕರು ಹೀಗೆಯೇ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬಂದು, ತಮ್ಮ ಅನಿವಾರ್ಯತೆ ಪೂರ್ಣಗೊಳಿಸಿ ನಂತರ ಬಿಗ್ ಬಾಸ್ ಮನೆಗೆ ಮರಳಿದ್ದಿದೆ. ಈಗ ಅಶ್ವಿನಿ ಗೌಡ ಅವರಿಗೂ ಇದೇ ರೀತಿ ಆಗಬಹುದು.
ಎಸ್ ಪದ ಬಳಕೆ
ರಕ್ಷಿತಾ ಶೆಟ್ಟಿ ಜೊತೆ ಜಗಳ ಆಡುವ ಸಂದರ್ಭದಲ್ಲಿ ‘ಅವಳು ಎಸ್. ನಾನು ಆ ಕ್ಯಾಟಗರಿ ಅಲ್ಲ’ ಎಂದು ಅಶ್ವಿನಿ ಹೇಳಿದ್ದರು. ಇದು ಜಾತಿ ನಿಂದನೆ ಪದ ಆಗಿದೆ. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದರು ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣದಲ್ಲಿ ಅಶ್ವಿನಿ ವಿಚಾರಣೆ ಎದುರಿಸಬೇಕಾಗಿ ಬರಹುದು.
ಇದನ್ನೂ ಓದಿ: ಬಿಗ್ಬಾಸ್: ರಕ್ಷಿತಾ ಕುರಿತು ಅವಾಚ್ಯ ಪದ ಬಳಕೆ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
ಮುಂದಿರೋ ಆಯ್ಕೆ ಏನು?
ಅಶ್ವಿನಿ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕರೆತಂದು ಪೊಲೀಸ್ ವಿಚಾರಣೆಗೆ ಅನುವು ಮಾಡಿಕೊಡಬಹುದು. ಆ ಬಳಿಕ ಅವರನ್ನು ಮರಳಿ ದೊಡ್ಮನೆಗೆ ಕಳುಹಿಸಬಹುದು. ಇಲ್ಲವೇ ಬಿಗ್ ಬಾಸ್ ಮನೆಯಲ್ಲೇ ಅಶ್ವಿನಿ ಗೌಡ ಅವರು ಕ್ಷಮೆ ಕೇಳಿ ಈ ಪ್ರಕರಣಕ್ಕೆ ಅಂತ್ಯ ಹಾಡಬಹುದು. ಈ ಬಗ್ಗೆ ಕಲರ್ಸ್ ವಾಹಿನಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








