ಸಡೆ, ನಾಲಿಗೆ ಸೀಳ್ತೀನಿ: ಬಿಗ್‌ಬಾಸ್ ಮನೆಯಲ್ಲಿ ಕಾಕ್ರೂಚ್ ಸುಧಿಯ ರೌಡಿ ಭಾಷೆ
Bigg Boss Kannada season 12: ಬಿಗ್‌ಬಾಸ್ ಮನೆಯಲ್ಲಿ ಜಗಳಗಳು ಸಾಮಾನ್ಯ. ಜಗಳದ ನಡುವೆ ಸ್ಪರ್ಧಿಗಳು ಹಲವು ಬಾರಿ ಅವಾಚ್ಯ ಶಬ್ದಗಳನ್ನು ಬಳಸಿ ಬಿಡುತ್ತಾರೆ. ಕೆಲವೊಮ್ಮೆ ಬಳಸುವ ಪದಗಳು ಅವಾಚ್ಯ ಅಲ್ಲದಿದ್ದರೂ ತೀರ ಮಾನ ಹಾನಿಕಾರಕ ಆಗಿರುತ್ತವೆ. ಇದೀಗ ಕಾಕ್ರೂಚ್ ಸುಧಿ ಸದಸ್ಯರ ಎದುರು ಆಡಿರುವ ಮಾತು ಮನೆ ಮಂದಿಯಲ್ಲೇ ಚರ್ಚೆಗೆ, ಅಸಮಾಧಾನಕ್ಕೆ ಕಾರಣವಾಗಿದೆ.

ಬಿಗ್‌ಬಾಸ್ (Bigg Boss) ಮನೆಯಲ್ಲಿ ದಿನಕ್ಕೊಂದು ಜಗಳ ಸಾಮಾನ್ಯ. ಸ್ಪರ್ಧಿಗಳು ಪರಸ್ಪರ ಜಗಳ ಆಡುತ್ತಲೇ ಇರುತ್ತಾರೆ. ಜಗಳದ ಸಮಯದಲ್ಲಿ ಸ್ಪರ್ಧಿಗಳು ಕೆಲವೊಮ್ಮೆ ತೀರ ಕೆಟ್ಟ ಶಬ್ದಗಳ ಬಳಕೆ ಮಾಡುವುದೂ ಉಂಟು. ಅಶ್ಲೀಲ ಪದಗಳನ್ನು ಬಿಗ್‌ಬಾಸ್ ಮ್ಯೂಟ್ ಮಾಡಿಬಿಡುತ್ತಾರೆ. ಆದರೆ ಕೆಲವೊಮ್ಮೆ ಅಶ್ಲೀಲ ಅಲ್ಲದ ಆದರೆ ಅದಕ್ಕಿಂತಲೂ ಹೆಚ್ಚು ಘಾಸಿ ಉಂಟು ಮಾಡಬಲ್ಲ ಪದಗಳನ್ನು ಸ್ಪರ್ಧಿಗಳು ಬಳಸಿದ್ದಿದೆ. ಕೆಲ ದಿನಗಳ ಹಿಂದಷ್ಟೆ ಅಶ್ವಿನಿ, ರಕ್ಷಿತಾ ಅವರನ್ನುದ್ದೇಶಿಸಿ ‘ಅವಳೊಬ್ಬ ಎಸ್’ ಎಂದಿದ್ದರು. ಈ ಬಗ್ಗೆ ಈಗಾಗಲೇ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಈಗ ಕಾಕ್ರೂಚ್ ಸುಧಿ ರೌಡಿ ಭಾಷೆಯನ್ನು ಮನೆಯಲ್ಲಿ ಬಳಸಿದ್ದಾರೆ. ಅದೂ ಪುಟ್ಟ ಹುಡುಗಿ ರಕ್ಷಿತಾ ವಿರುದ್ಧ.
ಮನೆಯಲ್ಲಿ ಸ್ಪರ್ಧಿಗಳೆಲ್ಲ ಸೇರಿ ಮೀಟಿಂಗ್ ಮಾಡಿದರು. ಮನೆಯ ಕೆಲಸಗಳನ್ನು ಯಾರು ಯಾರಿಗೆ ವಹಿಸಬೇಕು ಎಂಬುದು ಈ ಮೀಟಿಂಗ್ನ ಉದ್ದೇಶವಾಗಿತ್ತು. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಸಹ ಮೀಟಿಂಗ್ ಗೊಂದಲ ಮಯವಾಯ್ತು, ಯಾರು ಯಾವ ಕೆಲಸ ವಹಿಸಿಕೊಳ್ಳಬೇಕು ಎಂಬ ಚರ್ಚೆ ಬಿಟ್ಟು ಅವರು ಅದು ಮಾಡಿಲ್ಲ, ಇವರು ಇದು ಮಾಡಿಲ್ಲ ಎಂಬ ಪರಸ್ಪರ ದೂಷಣೆ ಶುರುವಾಯ್ತು.
ಈ ವೇಳೆ ರಕ್ಷಿತಾಗೆ ಅಶ್ವಿನಿ ಮನೆಗೆಲಸದ ಬಗ್ಗೆ ಕೆಲ ಸೂಚನೆಗಳನ್ನು ನೀಡುತ್ತಿದ್ದರು. ಅದೇ ಸಮಯದಲ್ಲಿ ಕಾಕ್ರೂಚ್ ಸುಧಿ, ರಕ್ಷಿತಾರನ್ನು ಕರೆದರು ಆದರೆ ರಕ್ಷಿತಾಗೆ ಅದು ಕೇಳಲಿಲ್ಲ, ಎರಡು ಮೂರು ಬಾರಿ ರಕ್ಷಿತಾರ ಹೆಸರು ಕರೆದ ಸುಧಿ ಅಲ್ಲಿಂದ ಒಮ್ಮೆಲೆ ಎದ್ದು ಹೋಗಿ ಬಿಟ್ಟರು. ಆ ಬಳಿಕ ಧ್ರುವಂತ್ ಬಂದು ಸುಧಿಯನ್ನು ಕರೆದುಕೊಂಡು ಬಂದರಾದರೂ, ಬರುತ್ತಲೆ, ‘ಇವಳ್ಯಾರೋ ನಿನ್ನೆ ಮೊನ್ನೆ ಬಂದ ಸೆಡೆ’ ಎಂದು ರಕ್ಷಿತಾರನ್ನು ಬೈದರು. ಇದು ಅಲ್ಲಿದ್ದ ಹಲವರಿಗೆ ಬೇಸರ ತರಿಸಿತು, ಗಿಲ್ಲಿ, ಜಾನ್ವಿ ಅವರುಗಳು ಅದನ್ನು ನೇರವಾಗಿ ವಿರೋಧಿಸಿದರು. ಅದಾದ ಬಳಿಕವೂ ಸಹ ಕಾಕ್ರೂಚ್ ಸುಧಿ ಚರ್ಚೆಯ ನಡುವೆ ‘ನನನ್ನು ಯಾರಾದರೂ ಕೇಳಿದರೆ ನಾಲಿಗೆ ಸೀಳಿ ಬಿಡ್ತೀನಿ’ ಎಂದು ರೌಡಿಯಂತೆ ಬೆದರಿಕೆ ಹಾಕಿದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ಆ ಬಳಿಕ ಹೊರಗೆ ಗಿಲ್ಲಿ, ಸುಧಿಯನ್ನುದ್ದೇಶಿಸಿ ‘ನೀನು ಹುಡುಗರನ್ನು ಆ ಮಾತು ಅನ್ನು ಆದರೆ ಹುಡುಗಿಗೆ ಅದರಲ್ಲೂ ಪುಟ್ಟ ಹುಡುಗಿಗೆ ಹಾಗೆ ಅನ್ನಬಾರದಿತ್ತು’ ಅಂದರು. ಅದಕ್ಕೆ ಸುಧಿ, ‘ನಮ್ಮ ಕಡೆ ಚಿಕ್ಕವರಿಗೆ ಸಡೆ ಎಂದೇ ಕರೆಯುವುದು, ನಮ್ಮಲ್ಲಿ ಅದು ಕಾಮನ್ ಎಂದರು’ ಆದರೆ ಸುಧಿ ಅವರ ಮಾತು ಯಾರಿಗೂ ಸರಿ ಬರಲಿಲ್ಲ. ರಕ್ಷಿತಾ ಸುಧಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರಾದರೂ ಅಶ್ವಿನಿ, ಸುಮ್ಮನಿರುವಂತೆ ಹೇಳಿದ್ದರಿಂದ ಅವರೂ ಸುಮ್ಮನಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




