‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಏಕಾಏಕಿ ಹೊರ ನಡೆದ ಮಾಯಾ ಪಾತ್ರಧಾರಿ ರುಹಾನಿ
Ruhany Shetty: 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಹೊರ ನಡೆದಿದ್ದಾರೆ. ಧಾರಾವಾಹಿ ಉತ್ತಮ TRP ಪಡೆಯುತ್ತಿರುವಾಗಲೇ ಈ ಬದಲಾವಣೆ ನಡೆದಿದೆ. ಅವರ ಸ್ಥಾನಕ್ಕೆ ರಮ್ಯಾಶ್ರೀ ಬಾಲಕೃಷ್ಣ ಅವರು ಬಂದಿದ್ದಾರೆ. ರುಹಾನಿ ಶೆಟ್ಟಿ ಅಭಿಮಾನಿಗಳಿಗೆ ಇದು ಬೇಸರ ತಂದಿದೆ.

‘ನಾ ನಿನ್ನ ಬಿಡಲಾರೆ’ (Naa Ninna Bidalare) ಧಾರಾವಾಹಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಿಗ್ ಬಾಸ್ ಮಧ್ಯೆಯೂ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಹೊರ ನಡೆದಿದ್ದಾರೆ. ಅವರು ಧಾರಾವಾಹಿಯಿಂದ ಹೊರ ಹೋಗಲು ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ.
ರುಹಾನಿ ಶೆಟ್ಟಿ ಅವರು ಮಾಯಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಗೊತ್ತೇ ಇದೆ. ಕಥಾ ನಾಯಕ ಶರತ್ನ ವಿವಾಹ ಆಗಬೇಕು ಎಂದು ಆಕೆ ಬಯಸಿದ್ದಳು. ಈ ಕಾರಣದಿಂದಲೇ ಆಕೆ ಸಾಕಷ್ಟು ತಂತ್ರ ಉಪಯೋಗಿಸುತ್ತಿದ್ದಾಳೆ. ಆಕೆ ಇನ್ನೇನು ಶರತ್ನ ಮದುವೆ ಆಗೇ ಬಿಟ್ಟಳು ಎಂಬಂತೆ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ತಿರುವು ಬಂತು. ಇಬ್ಬರ ಮದುವೆ ಮುರಿದು ಬಿತ್ತು.
ಇತ್ತೀಚಿನ ಎಪಿಸೋಡ್ನಲ್ಲಿ ರುಹಾನಿ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಮಾಯಾ ಪಾತ್ರ ಎಲ್ಲೋಯ್ತು ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಈಗ ಅವರ ಪಾತ್ರ ಬದಲಾಗಿದೆ. ಈ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಕಂಡಿದೆ. ಇದರಲ್ಲಿ ಮಾಯಾ ಪಾತ್ರಕ್ಕೆ ಬೇರೆಯವರು ಬಂದಿರೋದು ಗೊತ್ತಾಗಿದೆ. ಇದು ರುಹಾನಿ ಶೆಟ್ಟಿ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್
ರುಹಾನಿ ಹೇಳಿದ್ದು ಏನು?
‘ನಾನು ನಿಮ್ಮೆಲ್ಲರ ಮೆಸೇಜ್ ಹಾಗೂ ಕಮೆಂಟ್ ಓದುತ್ತಿದ್ದೇನೆ. ನೀವು ಸೂಪರ್. ನಿಮ್ಮಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಿಮ್ಮ ಪ್ರೀತಿಗೆ ಧನ್ಯವಾದ. ಹೊಸ ಪ್ರಾಜೆಕ್ಟ್ನೊಂದಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ರುಹಾನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರು ವಿಲನ್ ಪಾತ್ರಕ್ಕೆ ಹೆಚ್ಚು ಸೂಕ್ತ ಆಗುತ್ತಿದ್ದರು ಎಂದು ಅನೇಕರು ಹೇಳಿದ್ದಾರೆ.
ರಮ್ಯಾ ಬಾಲಕೃಷ್ಣ
ಸದ್ಯ ರುಹಾನಿ ಮಾಡುತ್ತಿದ್ದ ಮಾಯಾ ಪಾತ್ರಕ್ಕೆ ರುಹಾನಿ ಬಾಲಕೃಷ್ಣ ಅವರ ಆಗಮನ ಆಗಿದೆ. ಅವರು ಕಿರುತೆರೆಗಳಲ್ಲಿ ನಟಿಸಿ ಫೇಮಸ್ ಆದವರು. ಅವರು ಇನ್ನುಮುಂದೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಅವರು ಈ ಪಾತ್ರವನ್ನು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







