ಫ್ರೆಂಡ್ಶಿಪ್ ಅಂದ್ರೆ ಇದು; ಗಿಲ್ಲಿ-ಕಾವ್ಯಾ ಗೆಳೆತನದ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ
ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಅವರ ಗೆಳೆತನ ಎಲ್ಲರ ಗಮನ ಸೆಳೆದಿದೆ. ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾ ತಮ್ಮ ಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಮನೆಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಪರಸ್ಪರರ ಆಸರೆಯಾಗಿದ್ದು, ಇವರ ಸ್ನೇಹಕ್ಕೆ ಯಾರ ಕಣ್ಣೂ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಈ ಗೆಳೆತನ ದಿನ ಕಳೆದಂತೆ ಆಳಕ್ಕೆ ಹೋಗುತ್ತಿದೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಮುಂದಕ್ಕೆ ಸಾಗುತ್ತಿದ್ದಾರೆ. ಹೀಗಿರುವಾಗಲೇ ಇವರ ಗೆಳೆತನದ ಮೇಲೆ ಯಾರ ಕಣ್ಣೂ ಬೀಳದಿರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ನಲ್ಲಿ ಇರುವಷ್ಟೂ ದಿನ ಇವರ ಫ್ರೆಂಡ್ಶಿಪ್ ಮುಂದುವರಿಯಬೇಕು ಎಂಬುದು ಫ್ಯಾನ್ಸ್ ಕೋರಿಕೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಒಂಟಿ ಹಾಗೂ ಜಂಟಿ ಎಂಬ ಕಾನ್ಸೆಪ್ಟ್ ಜೊತೆ ಆಟ ಪ್ರಾರಂಭಿಸಲಾಯಿತು. ಕಾವ್ಯಾ ಹಾಗೂ ಗಿಲ್ಲಿ ಜಂಟಿ ಆದರು. ಎರಡು ವಾರಗಳ ಕಾಲ ಇವರು ಎಲ್ಲ ಕಡೆಗಳಲ್ಲೂ ಒಟ್ಟಿಗೆ ತೆರಳಬೇಕಿತ್ತು. ಈ ಸಂದರ್ಭದಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಬಾಂಡಿಂಗ್ ದಿನ ಕಳೆದಂತೆ ಗಟ್ಟಿ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ವೈರಿಗಳು ತುಂಬಾನೇ ಹೆಚ್ಚಿರುತ್ತಾರೆ. ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ನಿಲ್ಲೋದು ಕಡಿಮೆ. ಆದರೆ, ಗಿಲ್ಲಿ-ಕಾವ್ಯಾ ಆ ರೀತಿ ಅಲ್ಲ. ಒಬ್ಬರಿಗೊಬ್ಬರು ಆಸರೆ ಆಗುತ್ತಿದ್ದಾರೆ. ಗಿಲ್ಲಿ ಮೇಲೆ ಯಾವುದಾದರೂ ಆರೋಪ ಕೇಳಿ ಬಂದರೆ ಗಿಲ್ಲಿ ಪರವಾಗಿ ಕಾವ್ಯಾ ವಾದ ಮಾಡುತ್ತಾರೆ. ಅವರ ಪರವಾಗಿ ಕಾವ್ಯಾ ನಿಲ್ಲುತ್ತಾರೆ. ಇನ್ನು, ಕಾವ್ಯಾ ವಿಚಾರ ಬಂದಾಗ ಗಿಲ್ಲಿ ಬೆಂಬಲಕ್ಕೆ ನಿಲ್ಲುತ್ತಾರೆ.
ಇದನ್ನೂ ಓದಿ: ಟಾಸ್ಕ್ ಗೆದ್ದು ಬಿಗ್ ಬಾಸ್ 12ರ ಮೊದಲ ಕ್ಯಾಪ್ಟನ್ ಆದ ರಘು; ಸಿಕ್ತು ವಿಶೇಷ ಅಧಿಕಾರ
ಅಕ್ಟೋಬರ್ 23ರ ಸಂಚಿಕೆಯಲ್ಲಿ ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಅಶ್ವಿನಿ ಕೂಗಾಡಿದ್ದರಿಂದ ಕಾವ್ಯಾ ಅವರು ಸಿಟ್ಟಾದರು. ಈ ವೇಳೆ ಗಿಲ್ಲಿ ಅವರು ಕಾವ್ಯಾ ಸಮಾಧಾನಕ್ಕೆ ಬಂದಿದ್ದಾರೆ. ಗಿಲ್ಲಿ ಬೆಂಬಲ ನೋಡಿ ಅನೇಕರಿಗೆ ಖುಷಿ ಆಗಿದೆ. ಇನ್ನು, ಗಡ್ಡ ತೆಗೆಯುವಂತೆ ಗಿಲ್ಲಿಗೆ ಕಾವ್ಯಾ ಕೋರಿದ್ದರು. ಈ ಮಾತನ್ನು ಗಿಲ್ಲಿ ಪೂರೈಸಿದ್ದಾರೆ. ಈ ಎಲ್ಲಾ ಕಾರಣದಿಂದ ಇವರ ಮಧ್ಯೆ ಇರುವ ಗೆಳೆತನಕ್ಕೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂಬುದು ಫ್ಯಾನ್ಸ್ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








