ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ
‘ಬಿಗ್ ಬಾಸ್ ಕನ್ನಡ 12’ ಮನೆಯಲ್ಲಿ ಗಿಲ್ಲಿ ಅವರ ಹಾಸ್ಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅವರು ಆಟದ ಗಂಭೀರತೆ ಕಡೆಗಣಿಸಿದ್ದಾರೆ ಎಂದು ಕೆಲವರಿಗೆ ಎನಿಸಿದೆ. ಇತ್ತೀಚೆಗೆ ಕಾಯಿನ್ ಟಾಸ್ಕ್ನಲ್ಲಿ ಗಿಲ್ಲಿ ವರ್ತನೆಗೆ ಕಾವ್ಯಾ ಶೈವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸ್ಯ ಮಿತಿ ಮೀರಿದರೆ ಆಟಕ್ಕೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ನಟ ಅವರು ಹಾಸ್ಯ ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆದರೆ, ಅವರ ಹಾಸ್ಯ ಮಿತಿ ಮೀರಿದೆ ಎಂದು ಕೆಲವರಿಗೆ ಅನಿಸಿದೆ. ಹಾಸ್ಯ ಮಾಡುತ್ತಾ ಮಾಡುತ್ತಾ ಅವರು ಆಟದ ಗಂಭೀರತೆ ಮರೆತರೇ ಎನ್ನುವ ಪ್ರಶ್ನೆ ಮೂಡಿದೆ. ಕಾವ್ಯಾ ಶೈವ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೊದಲ ಚಪ್ಪಾಳೆಯನ್ನು ಸುದೀಪ್ ಅವರು ಕರ್ನಾಟಕದ ಜನತೆಗೆ ನೀಡಿದರು. ಎರಡನೇ ಚಪ್ಪಾಳೆ ಸಿಕ್ಕಿದ್ದು ಗಿಲ್ಲಿ ನಟನಿಗೆ. ಒಳ್ಳೆಯ ರೀತಿಯಲ್ಲಿ ಆಟ ಪ್ರದರ್ಶನ ಮಾಡುತ್ತಾ ಗಿಲ್ಲಿ ಅವರು ಗಮನ ಸೆಳೆದರು. ರಕ್ಷಿತಾ ಶೆಟ್ಟಿ ಅನ್ಯಾಯ ಆಗುತ್ತಿದೆ ಎಂದಾಗ ಅವರ ಪರ ನಿಂತರು ಗಿಲ್ಲಿ. ಈ ಕಾರಣದಿಂದ ಅವರನ್ನು ಎಲ್ಲರೂ ಮೆಚ್ಚಿಕೊಂಡರು.
ಈಗ ಗಿಲ್ಲಿ ನಟ ಅವರು ಯಾಕೋ ಹಾಸ್ಯ ಮಾಡುತ್ತಾ ಮಾಡುತ್ತಾ ಗಂಭೀರತೆ ಕಳೆದುಕೊಂಡರೇ ಎಂದು ಅನಿಸುತ್ತಿದೆ. ಬಿಗ್ ಬಾಸ್ ಮೂರು ತಂಡಗಳನ್ನು ಮಾಡಿ, ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಟಾಸ್ಕ್ನ ಅನುಸಾರ ಬಿಗ್ ಬಾಸ್ ನಕಲಿ ಕಾಯಿನ್ಗಳನ್ನು ನೀಡುತ್ತಾರೆ. ಇದನ್ನು ಸಂಗ್ರಹಿಸಿ, ಜೋಪಾನವಾಗಿ ಇಟ್ಟುಕೊಳ್ಳಬೇಕು. ಈ ಟಾಸ್ಕ್ನಲ್ಲಿ ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುತ್ತಾರೆ.
ಗಿಲ್ಲಿ, ಕಾವ್ಯಾ ಮೊದಲಾದವರು ಒಂದು ತಂಡದಲ್ಲಿ ಇದ್ದರು. ಗಿಲ್ಲಿ ಅವರು ತಮಗೆ ಸಿಕ್ಕ ಕಾಯಿನ್ನ ಹಾಕಿಕೊಂಡ ಬಟ್ಟೆ ಒಳಗೆಲ್ಲ ಬಚ್ಚಿಟ್ಟಿದ್ದರು. ರಘು ಈ ಮೊದಲು ಅಟ್ಯಾಕ್ ಮಾಡಿ ಕೆಲವು ಕಾಯಿನ್ ದೋಚಿಕೊಂಡು ಹೋಗಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಗಿಲ್ಲಿ ಮತ್ತೆ ಹೋಗಿ ರಘು ಪಕ್ಕವೇ ಕುಳಿತಿದ್ದಾರೆ. ಹೋಗಿ ಹಾಸ್ಯ ಮಾಡುತ್ತಾ, ಕಾಯಿನ್ಗಳನ್ನು ಎಲ್ಲಿ ಇಟ್ಟಿದ್ದೇನೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಸಮಯ ನೋಡಿಕೊಂಡು ರಘು ಅವರು ಗಿಲ್ಲಿಯಿಂದ ಕಾಯಿನ್ಗಳನ್ನು ಕದ್ದಿದ್ದಾರೆ. ಆಗ ಗಿಲ್ಲಿ ಅವರು ಒಂದೇ ಸಮನೇ ಅರಚಾಡಿದ್ದಾರೆ.
ಇದನ್ನೂ ಓದಿ: ಒಂದು ಮುತ್ತು ಕೊಟ್ಟ ಗಿಲ್ಲಿಗೆ ತಿರುಗಿ ಮೂರು ಮುತ್ತು ಕೊಟ್ಟ ಕಾವ್ಯಾ ಶೈವ
ಈ ಘಟನೆ ಕಾವ್ಯಾ ಶೈವಗೆ ಸಿಟ್ಟು ತರಿಸಿದೆ. ‘ನೀನು ಹೋಗಿ ಟಾಂಟ್ ಮಾಡ್ತಾ, ಅವರನ್ನು ರೇಗಿಸ್ತಾ ಇದೀಯಲ್ಲ. ಏನು ಪ್ರಯೋಜನ? ಅವರು ರೇಗಿಸಿ ತಿರುಗೇಟು ಕೊಡ್ತಾ ಇದಾರೆ. ನೀನು ಆ ರೀತಿ ಮಾಡ್ತಾ ಇದೀಯಾ?’ ಎಂದು ಗಿಲ್ಲಿಗೆ ಕಾವ್ಯಾ ಅವರು ಪ್ರಶ್ನೆ ಮಾಡಿದ್ದಾರೆ. ಆಗ ಮಾತು ಬಾರದೆ ಗಿಲ್ಲಿ ಸುಮ್ಮನಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








