AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಮುತ್ತು ಕೊಟ್ಟ ಗಿಲ್ಲಿಗೆ ತಿರುಗಿ ಮೂರು ಮುತ್ತು ಕೊಟ್ಟ ಕಾವ್ಯಾ ಶೈವ

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಶೈವ ಜೋಡಿಯ ವೈರಲ್ ಆಟ ಮನೆ ಮಾತಾಗಿದೆ. ಗಿಲ್ಲಿ ಕೊಟ್ಟ ಒಂದು ಮುತ್ತಿಗೆ ಕಾವ್ಯಾ ಮೂರು ಮುತ್ತು ಮರಳಿ ಕೊಟ್ಟು ಸುದ್ದಿಯಾದರು. ಈ ಘಟನೆ ದೊಡ್ಮನೆಗೆ ಮನರಂಜನೆ ನೀಡಿದೆ. ಸಖತ್ ಎಂಟರ್‌ಟೈನರ್ ಎನಿಸಿರುವ ಗಿಲ್ಲಿ ಹಾಗೂ ಕಾವ್ಯಾ ಅವರ ಆಟ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಒಂದು ಮುತ್ತು ಕೊಟ್ಟ ಗಿಲ್ಲಿಗೆ ತಿರುಗಿ ಮೂರು ಮುತ್ತು ಕೊಟ್ಟ ಕಾವ್ಯಾ ಶೈವ
ಗಿಲ್ಲಿ ನಟ-ಕಾವ್ಯಾ
ರಾಜೇಶ್ ದುಗ್ಗುಮನೆ
|

Updated on: Oct 11, 2025 | 11:26 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ (Gilli Nata) ಹಾಗೂ ಕಾವ್ಯಾ ಶೈವ ಜಂಟಿಯಾಗಿದ್ದಾರೆ. ಅವರು ಇಡೀ ಮನೆಗೆ ಮನರಂಜನೆ ನೀಡುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ನಡೆದ ಒಂದು ಘಟನೆ ಸಾಕಷ್ಟು ಮನರಂಜನೆ ಕೊಟ್ಟಿದೆ. ಒಂದು ಮುತ್ತು ಕೊಟ್ಟ ಗಿಲ್ಲಿಗೆ ಕಾವ್ಯಾ ಅವರು ತಿರುಗಿ ಮೂರು ಮುತ್ತು ಕೊಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.

ಕಾವ್ಯಾ ಹಾಗೂ ಗಿಲ್ಲಿ ನಟ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಸುದ್ದಿಗೆ ಬರೋ ಜನರಿಗೆ ಅವರು ತಿರುಗೇಟು ನೀಡುತ್ತಿದ್ದಾರೆ. ಇದಕ್ಕೆ ಅವರು ಯಾವುದೇ ಹಿಂದೇಟು ಹಾಕುವುದಿಲ್ಲ. ಕೆಲವೊಮ್ಮೆ ಇವರ ಮಧ್ಯೆಯೇ ಫೈಟ್ ನಡೆದಿದ್ದೂ ಇದೆ. ಈಗಲೂ ಹಾಗೆಯೇ ಆಗಿದೆ.

ಇದನ್ನೂ ಓದಿ
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
Image
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

ಗಿಲ್ಲಿ ನಟ ಅವರು ಕಾವ್ಯಾಗೆ ಚಿಕ್ಕದಾಗಿ ಕೈನಲ್ಲಿ ತಟ್ಟಿದ್ದಾರೆ. ಇದರಿಂದ ಹುಸಿಗೋಪ ತೋರಿಸಿದ ಕಾವ್ಯಾ ಅವರು, ಮೂರು ಏಟನ್ನು ಮರಳಿ ಕೊಟ್ಟರು. ಆ ಬಳಿಕ ತಳ್ಳಿದರು. ‘ನನಗೆ ಯಾಕೆ ಹೊಡೆದೆ? ಒಂದು ಹೊಡೆದರೆ ನಾನು ಮೂರು ಕೊಡೋದು’ ಎಂದರು ಕಾವ್ಯಾ.

View this post on Instagram

A post shared by kavgil😜 (@gilli_kavyaz)

‘ಒಂದು ಕೊಟ್ರೆ ಮೂರು ಕೊಡ್ತೀಯಾ’ ಎಂದಾಗಲೇ ಕಾವ್ಯಾಗೆ ಎಲ್ಲೋ ಮಿಸ್ ಹೊಡೀತಾ ಇದೆ ಎಂಬುದು ಅರ್ಥವಾಗಿ ಹೋಯಿತು. ‘ಒಂದು ಕೊಟ್ರೆ ಮೂರು ಕೊಡ್ತೀಯಾ’ ಎನ್ನುತ್ತಾ ಗಿಲ್ಲಿ ನಟ ಫ್ಲೈಯಿಂಗ್ ಕಿಸ್ ಕೊಟ್ಟರು. ಆಗ ಕಾವ್ಯಾ ‘ಫೂ.. ಫೂ..’ ಎಂದು ಮೂರು ಬಾರಿ ಹೇಳಿದರು. ಸದ್ಯ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಾ ಇದೆ.

ಇದನ್ನೂ ಓದಿ: ಗಿಲ್ಲಿ ನಟನ ಅಸಲಿ ಕಾಮಿಡಿ ಈಗ ಶುರು: ನಕ್ಕು ಸುಸ್ತಾದ ಕಿಚ್ಚ ಸುದೀಪ್

ಗಿಲ್ಲಿ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಎಂಟರ್​ಟೇನರ್ ಎನಿಸಿಕೊಂಡಿದ್ದಾರೆ. ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಓರ್ವ ಫೈನಲಿಸ್ಟ್ ಆಗಲಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕಾವ್ಯಾ ಶೈವ ಆಟವೂ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.