‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಕಳೆದು ಹೋದ ಮಗಳು ಗೌತಮ್ಗೆ ಸಿಕ್ಕೇ ಬಿಟ್ಟಳು
ಅಮೃತಧಾರೆ ಧಾರಾವಾಹಿ ಪ್ರಸ್ತುತ TRPಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈಗ ಗೌತಮ್‌ನ ಕಳೆದುಹೋದ ಮಗಳು ಮತ್ತೆ ಸಿಗುವ ಸೂಚನೆ ಸಿಕ್ಕಿದೆ. ಹೊಸ ಪ್ರೋಮೋದಲ್ಲಿ ತೋರಿಸಿದ ಮಗು ಗೌತಮ್‌ಳದ್ದಾಗಿರಬಹುದು ಎಂದು ಹೇಳಲಾಗಿದೆ. ಇದು ಗೌತಮ್ ಮತ್ತು ಭೂಮಿಕಾ ಮರುಮಿಲನಕ್ಕೆ ದಾರಿ ಮಾಡಿಕೊಡಲಿದೆಯೇ ಎಂಬ ಕುತೂಹಲ ಹೆಚ್ಚಿಸಿದೆ.

‘ಅಮೃತಧಾರೆ’ (Amruthadhaare) ಧಾರಾವಾಹಿ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಾ ಇದೆ. ಈ ಧಾರಾವಾಹಿಯು ಟಿಆರ್ಪಿಯಲ್ಲೂ ನಂಬರ್ ಒಂದನೇ ಸ್ಥಾನ ಪಡೆದುಕೊಂಡಿದೆ. ಈಗ ಧಾರಾವಾಹಿಯಲ್ಲಿ ಮತ್ತೊಂದು ರೋಚಕತೆ ಎದುರಾಗುವ ಸೂಚನೆ ಸಿಕ್ಕಿದೆ. ಕಳೆದು ಹೋಗಿದ್ದ ಗೌತಮ್ ಮಗಳು ಸಿಗುವ ಸೂಚನೆ ಸಿಕ್ಕಿದೆ. ಆ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಗಮನ ಸೆಳೆದಿದೆ.
ಗೌತಮ್ ದೀವಾನ್ಗೆ ಇಬ್ಬರು ಮಕ್ಕಳು ಜನಿಸಿದ್ದರು. ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು. ಗಂಡು ಮಗು ಉಳಿದುಕೊಂಡರೆ, ಹೆಣ್ಣು ಮಗು ಕಳೆದು ಹೋಗಿದೆ. ಈ ಕೆಲಸ ಮಾಡಿದ್ದು ಜಯದೇವ್ ದೀವಾನ್. ಆದರೆ, ನಂತರ ಮಗು ಎಲ್ಲಿ ಹೋಯಿತು ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಕೊನೆಗೂ ಈ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಐದು ವರ್ಷಗಳ ಬಳಿಕ ಮಗು ಎಲ್ಲಿದೆ ಎಂಬ ವಿಷಯ ಗೊತ್ತಾಗಿದೆ!
ಗೌತಮ್ ದೀವಾನ್ ಮಗುವನ್ನು ಹುಡಕಿಕೊಂಡು ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾನೆ. ಆದರೆ, ಈವರೆಗೆ ಮಗು ಸಿಕ್ಕಿರಲೇ ಇಲ್ಲ. ಈ ಕಾರಣದಿಂದಲೇ ಭೂಮಿಕಾ ಕೂಡ ಗೌತಮ್‌ನ ಬಿಟ್ಟು ಹೋಗಿದ್ದಳು. ಈ ವಿಚಾರ ಆತನಿಗೆ ಸಾಕಷ್ಟು ಬೇಸರ ಇದೆ. ಮಗು ಇಲ್ಲ ಎಂಬ ವಿಚಾರವನ್ನು ಆಕೆಗೆ ಒಪ್ಪಿಕೊಳ್ಳಳು ಸಾಧ್ಯವಾಗಲೇ ಇಲ್ಲ. ಇದು ಗೌತಮ್ಗೆ ಬೇಸರ ಮೂಡಿಸಿದೆ.
ಜೀ ಕನ್ನಡ ಪ್ರೋಮೋ
View this post on Instagram
ಈಗ ಹೊಸ ಪ್ರೋಮೋದಲ್ಲಿ ರೋಚಕ ತಿರುವು ಎಂಬ ಪ್ರೋಮೋ ಹಂಚಿಕೊಳ್ಳಲಾಗಿದೆ. ದಂಪತಿಯೊಬ್ಬರು ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕಿರುತ್ತಾರೆ. ಆದರೆ, ಮಗು ನಮಗೆ ಬೇಡ ಎಂದು ಅವರು ದೂರ ಹೋಗುತ್ತಾರೆ. ಇದು ಗೌತಮ್ಗೆ ಹುಟ್ಟಿದ ಹೆಣ್ಣು ಮಗಳೇ ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ: ಸೀರಿಯಲ್ನಲ್ಲಿ ನಂಬರ್ 1 ಆದ ‘ಅಮೃತಧಾರೆ’ ಧಾರಾವಾಹಿ; ಟಿಆರ್ಪಿ ಪಟ್ಟಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಮತ್ತೆ ಒಂದಾಗಬೇಕು ಎಂಬುದು ಅನೇಕರ ಕೋರಿಕೆ. ಅದಕ್ಕೂ ಮೊದಲೇ ಅವನ ಮಗಳು ಸಿಗುವ ಸೂಚನೆ ಸಿಕ್ಕಿದೆ. ಮುಂದೆ ಯಾವ ರೀತಿಯ ತಿರುವುಗಳ ಜೊತೆ ಧಾರಾವಾಹಿ ಸಾಗುತ್ತದೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







