AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಹೇಳಿದ ಆ ಮಾತನ್ನು ಯಾರೊಬ್ಬರೂ ನಂಬಲೇ ಇಲ್ಲ; ಈಗಲೂ ಇದೆ ಅನುಮಾನ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಂನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮನೆಯಲ್ಲಿರುವ ಸ್ಪರ್ಧಿಗಳು ಇದನ್ನು ನಂಬಲು ಸಿದ್ಧರಿಲ್ಲ. ಒಂದು ವಾರ ಯಾರನ್ನೂ ನೋಡದೆ, ಯಾವ ವಿಡಿಯೋಗಳನ್ನೂ ತೋರಿಸದೆ ತಮ್ಮನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು ಎಂಬ ರಕ್ಷಿತಾ ಮಾತಿಗೆ ಕಾವ್ಯಾ ಶೈವ ಸೇರಿದಂತೆ ಯಾರೊಬ್ಬರೂ ನಂಬಿಕೆ ವ್ಯಕ್ತಪಡಿಸಿಲ್ಲ.

ರಕ್ಷಿತಾ ಹೇಳಿದ ಆ ಮಾತನ್ನು ಯಾರೊಬ್ಬರೂ ನಂಬಲೇ ಇಲ್ಲ; ಈಗಲೂ ಇದೆ ಅನುಮಾನ
ರಕ್ಷಿತಾ
ರಾಜೇಶ್ ದುಗ್ಗುಮನೆ
|

Updated on:Oct 06, 2025 | 8:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸೀಸನ್​ನಲ್ಲಿ ಸಾಕಷ್ಟು ತಿರುವುಗಳನ್ನು ಇಡಲಾಗುತ್ತಿದೆ. ಎಲ್ಲ ತಿರುವುಗಳೂ ಪ್ರೇಕ್ಷಕನಿಗೆ ಶಾಕ್​ ಎನಿಸುವ ರೀತಿಯಲ್ಲಿ ಇದೆ. ರಕ್ಷಿತಾ ಶೆಟ್ಟಿ (Rakshita Shetty) ಅವರನ್ನು ಕಳೆದ ವಾರ ಬಂದ ದಿನವೇ ಹೊರ ಹಾಕಲಾಗಿತ್ತು. ಆ ಬಳಿಕ ಅವರನ್ನು ಮತ್ತೆ ಒಳಕ್ಕೆ ಕರೆಸಿಕೊಳ್ಳಲಾಗಿದೆ. ಈಗ ರಕ್ಷಿತಾ ಶೆಟ್ಟಿ ಹೇಳಿದ ಆ ಮಾತನ್ನು ಯಾರೆಂದರೆ ಯಾರೊಬ್ಬರೂ ಕೂಡ ನಂಬಲೇ ಇಲ್ಲ.

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿ ಒಂದು ವಾರ ಆಗಿತ್ತು. ಈ ಅವಧಿಯಲ್ಲಿ ಅವರು ಎಲ್ಲಿದ್ದರು? ಏನು ಮಾಡುತ್ತಿದ್ದರು ಎನ್ನುವ ಕುತೂಹಲ ಮೂಡಿದೆ. ಈ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. ‘ಇಷ್ಟು ದಿನ ನನ್ನನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ನನಗೆ ಒಂದು ವಾರ ಯಾರನ್ನೂ ತೋರಿಸಿಲ್ಲ’ ಎಂದು ರಕ್ಷಿತಾ ಶೆಟ್ಟಿ ಹೇಳಿದರು.

ಈ ವಿಚಾರದಲ್ಲಿ ಮನೆಯವರಿಗೆ ನಂಬಿಕೆ ಬರಲೇ ಇಲ್ಲ. ಸಾಮಾನ್ಯವಾಗಿ ಸೀಕ್ರೆಟ್ ರೂಂನಲ್ಲಿ ಇಟ್ಟರೆ ಯಾರು ಯಾವ ರೀತಿ ಆಡುತ್ತಾ ಇದ್ದಾರೆ ಎಂಬ ವಿಡಿಯೋಗಳನ್ನು ಅವರಿಗೆ ತೋರಿಸುತ್ತಾ ಇರಲಾಗುತ್ತದೆ. ಆದರೆ, ರಕ್ಷಿತಾಗೆ ಆ ರೀತಿ ಮಾಡಿಲ್ಲವಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡರು. ಅವರ ಮಾತಿನ ಮೇಲೆ ಯಾರಿಗೂ ನಂಬಿಕೆ ಬರಲಿಲ್ಲ.

ಇದನ್ನೂ ಓದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
Image
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
Image
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
Image
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

‘ರಕ್ಷಿತಾ ನೀವು ಸುಳ್ಳು ಹೇಳ್ತಾ ಇದೀರಾ. ಅಲ್ಲಿ ನಮ್ಮ ಎಪಿಸೋಡ್​ಗಳನ್ನು ನಿಮಗೆ ತೋರಿಸಲಾಗಿದೆ ಅಲ್ವ’ ಎಂದು ಕಾವ್ಯಾ ಶೈವ ಕೇಳಿದರು. ಆದರೆ, ಇಲ್ಲ ಎನ್ನುವ ಉತ್ತರ ರಕ್ಷಿತಾ ಕಡೆಯಿಂದ ಬಂತು. ‘ಮದರ್ ಪ್ರಾಮಿಸ್ ನನಗೆ ನಿಮ್ಮ ವಿಶ್ಯುವಲ್ಸ್ ತೋರಿಸಿಲ್ಲ’ ಎಂದು ರಕ್ಷಿತಾ ಸಮಜಾಯಿಶಿ ಕೊಡಲು ಬಂದರು. ಆ ಬಳಿಕ ಕಾವ್ಯಾ ಶೈವ ಅವರು, ‘ನಿಮ್ಮ ದಿನಚರಿಗಳ ವಿಡಿಯೋನ ನನಗೆ ತೋರಿಸುತ್ತಾ ಇದ್ದರು’ ಎಂದು ಹೇಳಿದರು. ಇದನ್ನು ರಕ್ಷಿತಾ ನಂಬಿಲ್ಲ.

ಇದನ್ನೂ ಓದಿ: ಮತ್ತೆ ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು? ಉತ್ತರಿಸಿದ ಮಂಗಳೂರು ಹುಡುಗಿ

ಸದ್ಯ ರಕ್ಷಿತಾ ಶೆಟ್ಟಿ ಅವರು ಹೇಳಿದ ಮಾತಿನ ಮೇಲೆ ಯಾರೊಬ್ಬರಿಗೂ ನಂಬಿಕೆ ಬರಲೇ ಇಲ್ಲ. ರಕ್ಷಿತಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:54 am, Mon, 6 October 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್