AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು? ಉತ್ತರಿಸಿದ ಮಂಗಳೂರು ಹುಡುಗಿ

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಒಂದು ವಾರವಾಗಿದೆ. ಮೊದಲ ದಿನ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಸ್ಪರ್ಧಿಯಾಗಿ ಹೋಗಿದ್ದರು. ಆದರೆ ಮೊದಲ ದಿನವೇ ಅವರನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಇದೀಗ ರಕ್ಷಿತಾ ಶೆಟ್ಟಿ ಮತ್ತೆ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಅಷ್ಟಕ್ಕೂ ಇಷ್ಟು ದಿನ ರಕ್ಷಿತಾ ಶೆಟ್ಟಿ ಎಲ್ಲಿ ಇದ್ದರು?

ಮತ್ತೆ ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು? ಉತ್ತರಿಸಿದ ಮಂಗಳೂರು ಹುಡುಗಿ
Rakshita Shetty
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Oct 05, 2025 | 5:52 PM

Share

ರಕ್ಷಿತಾ ಶೆಟ್ಟಿ (Rakshita Shetty) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಸ್ಪರ್ಧಿ ಆಗಿ ಬಂದಿದ್ದರು. ಬಂದ ದಿನವೇ ಅವರು ಹೊರಕ್ಕೆ ಹೋಗಬೇಕಾಯಿತು. ಈ ವಿಚಾರವು ಅನೇಕರಿಗೆ ಬೇಸರ ಮೂಡಿಸಿತು ಎಂದರೂ ತಪ್ಪಾಗಲಾರದು. ಈಗ ರಕ್ಷಿತಾ ಶೆಟ್ಟಿ ಅವರು ಮರಳಿ ಬಂದಿದ್ದಾರೆ. ಒಂದು ವಾರದ ಬಳಿಕ ರಕ್ಷಿತಾ ಶೆಟ್ಟಿ ಅವರು ದೊಡ್ಮನೆಗೆ ಬಂದಿದ್ದಾರೆ. ಸುದೀಪ್ ಜೊತೆ ಮತ್ತೆ ಬಂದು ವೇದಿಕೆ ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದಿನ ಎಲ್ಲಿ ಇದ್ದರು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಹಾಗೂ ಮಾಳು ಅವರು ಬಿಗ್ ಬಾಸ್ ಪ್ರವೇಶ ಮಾಡಿದ್ದರು. ಈ ಶೋದಲ್ಲಿ ಇಬ್ಬರು ಇರಬೇಕು, ಒಬ್ಬರು ಔಟ್ ಆಗಬೇಕು ಎಂದರು. ಈ ವೇಳೆ ಎಲ್ಲರೂ ಸೇರಿ ರಕ್ಷಿತಾ ಅವರನ್ನು ಆಯ್ಕೆ ಮಾಡಿದರು. ಈ ವಿಚಾರದಲ್ಲಿ ಅವರು ಬೇಸರ ಮಾಡಿಕೊಳ್ಳದೇ ಹೋಗಿದ್ದರು. ಈಗ ಅವರು ಮರಳಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ದೊಡ್ಡವರು, ಚಿಕ್ಕವರು ಅನ್ನೋದು ಇಲ್ಲ. ಎಲ್ಲರೂ ಒಂದೇ. ಒಳಗೆ ಹೋಗಿ ಪ್ರಾಪರ್ ರೀಸನ್ ಕೇಳ್ತೀನಿ’ ಎಂದರು ರಕ್ಷಿತಾ. ಆಗ ಅವರು ದೊಡ್ಡ ಕಣ್ಣು ಮಾಡಿಕೊಂಡಿದ್ದರು. ಆಗ ಸುದೀಪ್ ಅವರು ‘ದೊಡ್ಡ ಕಣ್ಣು ಬಿಡಬೇಡಿ’ ಎಂದು ಕೋರಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?

‘ಅವತ್ತೇ ಯಾಕೆ ಕೇಳಿಲ್ಲ’ ಎಂದು ಸುದೀಪ್ ರಕ್ಷಿತಾ ಬಳಿ ಪ್ರಶ್ನೆ ಮಾಡಿದರು. ‘ನನಗೆ ರಿಗ್ರೆಟ್​ ಇದೆ. ನಾನು ಅವತ್ತೇ ಕೇಳಬೇಕಿತ್ತು. ಈಗ ಕೇಳ್ತೀನಿ’ ಎಂದರು ರಕ್ಷಿತಾ ಶೆಟ್ಟಿ.  ‘ಇಷ್ಟು ದಿನ ಎಲ್ಲಿದ್ರಿ’ ಎಂದು ರಕ್ಷಿತಾಗೆ ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ರಕ್ಷಿತಾ ಅವರು, ‘ನಾನು ಟೀಂ ಜೊತೆ ಇದ್ದೆ. ಸೀಕ್ರೆಟ್ ರೂಂನಲ್ಲಿ ನನ್ನ ಇಡಲಾಗಿತ್ತು. ಮೊಬೈಲ್​ ಕೂಡ ಇರಲಿಲ್ಲ. ಶೋನಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ರಕ್ಷಿತಾ ಶೆಟ್ಟಿ ಅವರು ಮರಳಿ ಬಂದ ಬಳಿಕ ಯಾವ ರೀತಿಯಲ್ಲಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಾರ ದೊಡ್ಮನೆಯಲ್ಲಿ ಹಲವರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 am, Sun, 5 October 25