AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಸ್ಪರ್ಧಿಗಳನ್ನು ಮನೆಗೆ ಕಳಿಸಬಹುದು: ಸುಳಿವು ಕೊಟ್ಟ ಸುದೀಪ್

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮೊದಲ ವಾರದ ಪಂಚಾಯಿತಿ ಇಂದು (ಅಕ್ಟೋಬರ್ 04) ನಡೆಯಿತು. ಸೀಸನ್​​ನ ಆರಂಭದಲ್ಲಿಯೇ ಈ ಸೀಸನ್ ಭಿನ್ನವಾಗಿರುತ್ತದೆ ಎಂದು ಸುದೀಪ್ ಹೇಳಿದ್ದರು. ಆದರೆ ಸ್ಪರ್ಧಿಗಳು ಶೋ ಅನ್ನು ಗಂಭೀರವಾಗಿ ಪರಿಗಣಿಸಿರದೇ ಇರುವುದು ಮನಗಂಡು ಕೆಲವು ಎಚ್ಚರಿಕೆಗಳನ್ನು ಕಿಚ್ಚ ನೀಡಿದ್ದಾರೆ.

ಎಲ್ಲ ಸ್ಪರ್ಧಿಗಳನ್ನು ಮನೆಗೆ ಕಳಿಸಬಹುದು: ಸುಳಿವು ಕೊಟ್ಟ ಸುದೀಪ್
Sudeep
ಮಂಜುನಾಥ ಸಿ.
|

Updated on: Oct 04, 2025 | 10:58 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಒಂದು ವಾರವಾಗಿದೆ. ಕಳೆದ ಭಾನುವಾರ ಈ ಶೋನ ಗ್ರ್ಯಾಂಡ್ ಓಪನಿಂಗ್ ನಡೆದಿತ್ತು. ಮೊದಲ ದಿನ 19 ಮಂದಿ ಮನೆ ಸೇರಿದ್ದರು. ಬಳಿಕ ಒಬ್ಬರು ಹೊರಬಂದು, 18 ಮಂದಿ ಉಳಿದುಕೊಂಡಿದ್ದರು. ಇಂದು (ಅಕ್ಟೋಭರ್ 04) ನಡೆದ ಈ ಸೀಸನ್​​ನ ಮೊದಲ ಪಂಚಾಯಿತಿಯಲ್ಲಿ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿಯವರನ್ನು ಮನೆಯ ಒಳಗೆ ಸೇರಿಸಲಾಗಿದ್ದು ಮತ್ತೆ ಮನೆ ಸದಸ್ಯರ ಸಂಖ್ಯೆ 19 ಆಗಿದೆ.

ಮೊದಲ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ಲಘುವಾಗಿ ತರಾಟೆಗೆ ತೆಗೆದುಕೊಂಡರು. ಈ ಬಾರಿಯ ಸ್ಪರ್ಧಿಗಳಿಗೆ ಶೋನ ಬಗ್ಗೆ ಸರಿಯಾದ ಗಂಭೀರತೆ ಇಲ್ಲದಿರುವುದು ಗಮನಿಸಿದ ಸುದೀಪ್ ಅವರು ಪರೋಕ್ಷವಾಗಿ ಕೆಲ ಎಚ್ಚರಿಕೆಗಳನ್ನು, ಸುಳಿವುಗಳನ್ನು ಸಹ ನೀಡಿದರು. ವಿಶೇಷವೆಂದರೆ ಇಡೀ ಬಿಗ್​​ಬಾಸ್ ಮನೆಯನ್ನೇ ಬದಲು ಮಾಡುವ ಸಾಧ್ಯತೆಯೂ ಇದೆಯೆಂದು ಸುದೀಪ್ ಹೇಳಿದರು.

ಇಷ್ಟು ವರ್ಷ ಬಿಗ್​​ಬಾಸ್ ಇತಿಹಾಸದಲ್ಲಿ ಆಗದೇ ಇರುವುದು ಈ ಬಿಗ್​​ಬಾಸ್​​ನಲ್ಲಿ ಆಗಲಿದೆ. ನಾವು ಶೋನ ಆರಂಭದಲ್ಲಿಯೇ ಹೇಳಿದ್ದೇವೆ, ಈ ವರೆಗಿನ ಬಿಗ್​​ಬಾಸ್ ಬೇರೆ, ಈ ಸೀಸನ್ಸೇ ಬೇರೆ ಎಂದು. ಯಾರೂ ಸಹ ಶೋ ಅನ್ನು ಲಘುವಾಗಿ ಪರಿಗಣಿಸಬೇಡಿ, ನೀವು ಇಷ್ಟು ವರ್ಷ ನೋಡದೇ ಇರುವುದೆಲ್ಲ ಈ ಬಾರಿಯ ಶೋನಲ್ಲಿ ನಡೆಯಲಿದೆ. ಎರಡು ಫಿನಾಲೆ, ಎರಡು ಎಲಿಮಿನೇಷನ್, ಎರಡು ಓಪನಿಂಗ್ ಏನು ಬೇಕಾದರೂ ನಡೆಯಬಹುದು. ನಿಮ್ಮಲ್ಲಿ ಅರ್ಧ ಸ್ಪರ್ಧಿಗಳ ಬದಲಾವಣೆ ಬೇಕಾದರೂ ನಡೆಯಬಹುದು, ಅದಕ್ಕಾಗಿ ತಂಡ ರೆಡಿ ಇದ್ದರೂ ಇರಬಹುದು ಎಂಬ ಸುಳಿವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?

ಸ್ಪರ್ಧಿಗಳ ತಂಡ ರೆಡಿ ಇದೆ ಎಂದು ನೇರವಾಗಿ ಹೇಳಲಿಲ್ಲವಾದರೂ ಸುದೀಪ್ ಅವರು ಹೇಳಿದ ಧಾಟಿ ನೋಡಿದರೆ ಬಿಗ್​​ಬಾಸ್ ಮನೆಗೆ ಪ್ರವೇಶಿಸಲು ಇನ್ನೊಂದು 9 ಮಂದಿಯ ತಂಡ ಸಿದ್ಧವಾಗಿರುವಂತೆ ಕಾಣುತ್ತದೆ. ಯಾರು ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಎಲಿಮಿನೇಷನ್ ಆಗಬಹುದು.

ಇಂದು ನಡೆದ ಸೀಸನ್​​ನ ಮೊದಲ ಪಂಚಾಯಿತಿಯಲ್ಲಿ ಸುದೀಪ್ ಹಲವರಿಗೆ ಕ್ಲಾಸ್ ತೆಗೆದುಕೊಂಡರು. ವಿಶೇಷವಾಗಿ ಕಾಕ್ರೂಚ್ ಸುಧಿ ಹಾಗೂ ಮಲ್ಲಮ್ಮನ ಬಗ್ಗೆ ಸಿಂಪತಿ ತೋರಿಸುತ್ತಾ ಮೈಲೇಜ್ ಪಡೆಯುತ್ತಿದ್ದ ಧ್ರುವ ಅವರುಗಳಿಗೆ ಮಾತಿನ ಚಾಟಿ ಬೀಸಿದರು. ಅವರುಗಳಿಗೆ ಮಾತ್ರವಲ್ಲದೆ, ಒಂಟಿ ಹಾಗೂ ಜಂಟಿ ಇಬ್ಬರಿಗೂ ಅವರವರ ತಪ್ಪುಗಳನ್ನು ಮನದಟ್ಟು ಮಾಡಿಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ