AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಜಾನ್ವಿ ಹಾಗೂ ಅಭಿಷೇಕ್ ನಡುವಿನ 'ಆಂಟಿ ಲವರ್' ಸಂಭಾಷಣೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ 'ನನಗೆ ದೊಡ್ಡವರು ಇಷ್ಟ' ಎಂದಾಗ, ಜಾನ್ವಿ 'ನೀವು ಆಂಟಿ ಲವರ್ ಆ?' ಎಂದು ಕೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ
ಅಭಿಷೇಕ್-ಜಾನ್ವಿ
ರಾಜೇಶ್ ದುಗ್ಗುಮನೆ
|

Updated on: Oct 04, 2025 | 7:58 AM

Share

‘ಬಿಗ್ ಬಾಸ್’ (Bigg Boss) ಶೋಗಳಲ್ಲಿ ಫಿಲ್ಟರ್ ಬಳಕೆ ಆಗೋದು ತುಂಬಾನೇ ಕಡಿಮೆ. ಕ್ಯಾಮೆರಾ, ಮೈಕ್ ಇದೆ ಎಂಬ ಪ್ರಜ್ಞೆ ಯಾರಿಗೂ ಇರೋದಿಲ್ಲ. ಹೀಗಾಗಿ, ಮನಸ್ಸಿಗೆ ಅನಿಸಿದ್ದನ್ನು ಹೇಳುತ್ತಾರೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಹಾಗೂ ಅಭಿಷೇಕ್ ಮಧ್ಯೆ ನಡೆದ ಸಂಭಾಷಣೆ ಚರ್ಚೆಗೆ ಕಾರಣ ಆಗಿದೆ. ‘ನೀವು ಆಂಟಿ ಲವರ್ ಆ’ ಎಂದು ಜಾನ್ವಿ ಅವರು ಅಭಿಷೇಕ್​ಗೆ ಕೇಳಿದ್ದಾರೆ.

ಅಭಿಷೇಕ್ ಹಾಗೂ ಅಶ್ವಿನಿ ಜಂಟಿ ಆಗಿದ್ದಾರೆ. ಅಶ್ವಿನಿ ಜೊತೆ ಅಭಿಷೇಕ್ ಆಗಾಗ ಫ್ಲರ್ಟ್ ಮಾಡೋದು ಎದ್ದು ಕಾಣುತ್ತದೆ. ಅಭಿಷೇಕ್ ಅವರು ‘ನಿನ್ನಿಂದಲೇ..’ ಹಾಡನ್ನು ಹಾಡುತ್ತಿದ್ದರು. ಆಗ ಅಶ್ವಿನಿ ಅವರು, ‘ಜಾನ್ವಿ ನಿಮಗಾಗಿ ಹಾಡು ಹಾಡುತ್ತಿದ್ದಾರೆ ನೋಡಿ’ ಎಂದರು. ‘ನೀವು ನನ್ನಂತೆ ಎಷ್ಟು ಜನರಿಗೆ ಇದೇ ರೀತಿ ಹಾಡು ಹಾಡಿದ್ದೀರಿ’ ಎಂದು ಜಾನ್ವಿ ಪ್ರಶ್ನೆ ಮಾಡಿದರು. ‘ನಿಮಗಾಗಿ ಮಾತ್ರ ಹೇಳೋದು’ ಎಂದು ಅಭಿಷೇಕ್ ಉತ್ತರಿಸಿದರು.

ಇದನ್ನೂ ಓದಿ
Image
ಬಾಕ್ಸ್ ಆಫೀಸ್​ನಲ್ಲಿ ‘ಕಾಂತಾರ: ಚಾಪ್ಟರ್ 1’ ಅಬ್ಬರ; 100 ಕೋಟಿ ಕಲೆಕ್ಷನ್
Image
ಗುಟ್ಟಾಗಿ ನಡೆಯಿತು ರಶ್ಮಿಕಾ-ವಿಜಯ್ ನಿಶ್ಚಿತಾರ್ಥ? ಫೆಬ್ರವರಿಯಲ್ಲಿ ಮದುವೆ
Image
ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಆಗ ವಯಸ್ಸಿನ ವಿಚಾರ ಚರ್ಚೆಗೆ ಬಂತು. ಅಭಿಷೇಕ್ ತಮಗೆ 29 ವರ್ಷ ಎಂದರು. ‘ನಿಮಗಿಂತ ನಾನು 10 ವರ್ಷ ದೊಡ್ಡವಳು. ನಿಮಗೆ ದೊಡ್ಡವರೆಂದರೆ ಇಷ್ಟವೇ?’ ಎಂದು ಕೇಳಿದರು ಜಾನ್ವಿ. ‘ಹೌದು ನನಗೆ ದೊಡ್ಡವರು ಎಂದರೆ ಇಷ್ಟ’ ಎಂದರು ಅಭಿ. ಇದಕ್ಕೆ ಜಾನ್ವಿ, ‘ನೀವು ಆಂಟಿ ಲವರ್​ ಆ’ ಎಂದು ಕೇಳಿದರು.

ಇದನ್ನೂ ಓದಿ: ‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಆ್ಯಂಕರ್ ಜಾನ್ವಿ

ಆ ಬಳಿಕ ಅಭಿಷೇಕ್ ಅವರು ನೀವು ಆಂಟಿ ಎಂದು ಒಪ್ಪಿಕೊಳ್ತೀರಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಜಾನ್ವಿ, ‘ನಾನು ಆಂಟಿ ಅಲ್ಲ, ಆದರೆ, ಈ ವಯಸ್ಸಿನವರಿಗೆ ಹೊರಗಿನ ಸಮಾಜ ಹಾಗೆಯೇ ಕರೆಯುತ್ತದೆ. ನಾನು ಆಂಟಿ ತರ ಕಾಣದೇ ಇರುವಂತೆ ನನ್ನ ಬಾಡಿಯನ್ನು ನೋಡಿಕೊಂಡಿದ್ದೇನೆ’ ಎಂದರು. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.