ಸೀರಿಯಲ್ನಲ್ಲಿ ನಂಬರ್ 1 ಆದ ‘ಅಮೃತಧಾರೆ’ ಧಾರಾವಾಹಿ; ಟಿಆರ್ಪಿ ಪಟ್ಟಿ
ಸದ್ಯ ಬಿಗ್ ಬಾಸ್ ಕೂಡ ಆರಂಭ ಆಗಿದೆ. ಮುಂದಿನ ವಾರ ಈ ಶೋನ ಟಿಆರ್ಪಿ ಹೊರ ಬೀಳಲಿದೆ. ಈ ರಿಯಾಲಿಟಿ ಶೋ ಕಾರಣಕ್ಕೆ ಆ ಸಮಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುವ, ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಟಿಆರ್ಪಿ ಕುಸಿಯುವ ಸಾಧ್ಯತೆ ಇದೆ.

38ನೇ ವಾರದ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದೆ. ಈ ಟಿಆರ್ಪಿಯಲ್ಲಿ ಅಚ್ಚರಿ ಎಂಬಂತೆ ‘ಅಮೃತಧಾರೆ’ ಧಾರಾವಾಹಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಧಾರಾವಾಹಿಯಲ್ಲಿ ಎದುರಾದ ಟ್ವಿಸ್ಟ್ಗಳಿಂದ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಹಾಗಾದರೆ, ಯಾವ ಧಾರಾವಾಹಿಗಳು ಯಾವ ಸ್ಥಾನದಲ್ಲಿ ಇವೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರತಿ ವಾರದ ಟಿಆರ್ಪಿಯಲ್ಲೂ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಯಾವ ಧಾರಾವಾಹಿ ಮೊದಲ ಸ್ಥಾನ ಪಡೆಯುತ್ತವೆ, ಯಾವ ಧಾರವಾಹಿ ಎರಡನೇ ಸ್ಥಾನ ಪಡೆಯುತ್ತವೆ ಎಂದು ಊಹಿಸೋದು ಕಷ್ಟ. ಏಕೆಂದರೆ ಪ್ರತಿ ವಾರವೂ ಇದರಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈಗ 38ನೇ ವಾರದ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ.
‘ಅಮೃತಧಾರೆ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ. ಭೂಮಿಕಾ ಹಾಗೂ ಗೌತಮ್ ಭೇಟಿಯ ಸಮಯದ ಎಪಿಸೋಡ್ಗೆ ಸಿಕ್ಕ ಟಿಆರ್ಪಿ ಇದಾಗಿದೆ. ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲೂ ಸದ್ಯ ಸಾಕಷ್ಟು ತಿರುವುಗಳು ಎದುರಾಗುತ್ತಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಧಾರಾವಾಹಿಯಲ್ಲಿ ಮತ್ತಷ್ಟು ಹೆಚ್ಚಿನ ಟಿಆರ್ಪಿ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಮೂರನೇ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಕೆಲ ವಾರಗಳಿಂದ ಮೊದಲ ಸ್ಥಾನ ಪಡೆದುಕೊಳ್ಳುತ್ತಾ ಬರುತ್ತಿತ್ತು. ಆದರೆ, ಈಗ ಉಳಿದ ಧಾರಾವಾಹಿಗಳ ಟಿಆರ್ಪಿಯಲ್ಲಿ ಏರಿಕೆ ಕಂಡಿದ್ದರಿಂದ, ಈ ಧಾರಾವಾಹಿಯ ಸ್ಥಾನ ಕುಸಿದಿದೆ. ನಾಲ್ಕನೇ ಸ್ಥಾನದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿಗೆ ಸ್ಥಾನ ಸಿಕ್ಕಿದೆ. ಐದನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇದನ್ನೂ ಓದಿ: ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್
ಸದ್ಯ ಬಿಗ್ ಬಾಸ್ ಕೂಡ ಆರಂಭ ಆಗಿದೆ. ಮುಂದಿನ ವಾರ ಈ ಶೋನ ಟಿಆರ್ಪಿ ಹೊರ ಬೀಳಲಿದೆ. ಈ ರಿಯಾಲಿಟಿ ಶೋ ಕಾರಣಕ್ಕೆ ಆ ಸಮಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುವ, ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಟಿಆರ್ಪಿ ಕುಸಿಯುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




