ರಚಿತಾ ರಾಮ್ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
Happy Birthday Rachita Ram: ನಟಿ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದರ್ಶನ್ ಜೈಲಿನಲ್ಲಿರುವುದು ಅವರಿಗೆ ಬೇಸರ ತಂದಿದ್ದರೂ, ಅವರ ವೃತ್ತಿಜೀವನಕ್ಕೆ ದರ್ಶನ್ ಕುಟುಂಬದ 'ಬುಲ್ ಬುಲ್' ಸಿನಿಮಾ ಕಾರಣ. ಧಾರಾವಾಹಿಗಳಿಂದ ಬಂದು, ದರ್ಶನ್ ಹೋಮ್ ಬ್ಯಾನರ್‌ನಿಂದ ಲಾಂಚ್ ಆಗಿ, ಈಗ 'ಕೂಲಿ' ಚಿತ್ರದ ಯಶಸ್ಸಿನಿಂದ ಸಂಭ್ರಮದಲ್ಲಿದ್ದಾರೆ.

ನಟಿ ರಚಿತಾ ರಾಮ್ (Rachita Ram) ಅವರಿಗೆ ಇಂದು (ಅಕ್ಟೋಬರ್ 3) ಜನ್ಮದಿನದ ಸಂಭ್ರಮ. ಅವರು ಅಭಿಮಾನಿಗಳನ್ನು ಭೇಟಿ ಆಗಲು ಪ್ಲ್ಯಾನ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಅವರ ಬರ್ತ್ಡೇ ಸಂದರ್ಭದಲ್ಲಿ ದರ್ಶನ್ ಜೈಲಿನಲ್ಲಿ ಇದ್ದಾರೆ ಎಂಬುದು ಅವರಿಗೆ ಬೇಸರ ತರುವ ವಿಚಾರ. ಹಾಗಾದರೆ ರಚಿತಾ ರಾಮ್ ಅವರಿಗೆ ದರ್ಶನ್ ಬಗ್ಗೆ ವಿಶೇಷ ಗೌರವ ಇದೆ. ಅದಕ್ಕೆ ಒಂದು ಮಹತ್ವದ ಕಾರಣ ಇದೆ.
ರಚಿತಾ ರಾಮ್ ಅವರು 2011ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ‘ಬೆಂಕಿಯಲ್ಲಿ ಅರಳಿದ ಹೂವು’ ಅವರ ನಟನೆಯ ಮೊದಲ ಧಾರಾವಾಹಿ. ಈ ಧಾರಾವಾಹಿ ಸಾಕಷ್ಟು ಗಮನ ಸೆಳೆಯಿತು. ಆ ಬಳಿಕ ‘ಅರಸಿ’ ಹೆಸರಿನ ಧಾರಾವಾಹಿ ಮಾಡಿದರು. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. 2012ರಲ್ಲಿ ಧಾರಾವಾಹಿಯಲ್ಲಿ ರಶ್ಮಿ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು.
ರಚಿತಾ ರಾಮ್ ಅವರು ಮೊದಲು ಆಯ್ಕೆ ಆಗಿದ್ದು, ‘ಬುಲ್ ಬುಲ್’ ಸಿನಿಮಾದಲ್ಲಿ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ದರ್ಶನ್ ತಾಯಿ ಮೀನಾ ತುಗುದೀಪ್. ದರ್ಶನ್ ಹೋಂ ಬ್ಯಾನರ್‌ನಿಂದ ಲಾಂಚ್ ಆಗಿರುವುದರಿಂದ ಅವರಿಗೆ ವಿಶೇಷ ಗೌರವ. ಈ ಸಿನಿಮಾ ಸೂಪರ್ ಹಿಟ್ ಆಗಿ ರಚಿತಾ ರಾಮ್ ವೃತ್ತಿ ಜೀವನಕ್ಕೆ ಮೈಲೇಜ್ ಕೊಟ್ಟಿತ್ತು.
‘ಬುಲ್ ಬುಲ್’ ಸಿನಿಮಾದಲ್ಲಿ ಆರಂಭದಲ್ಲಿ ಅನುಷ್ಕಾ ಶೆಟ್ಟಿ ಅಥವಾ ಕಾಜಲ್ ಅವರನ್ನು ಹಾಕಿಕೊಳ್ಳುವ ಪ್ಲ್ಯಾನ್ ಇತ್ತು. ಆದರೆ, ಡೇಟ್ ಹೊಂದಿಕೆ ಆಗದ ಕಾರಣ ಅವರು ಸಿನಿಮಾಗೆ ಬಂದಿಲ್ಲ. ಆ ಬಳಿಕ ಸಿನಿಮಾಗೆ ರಮ್ಯಾ ಹೀರೋಯಿನ್ ಎಂದು ಹೇಳಲಾಯಿತು. ಆದರೆ, ಇದು ನಿಜವಾಗಿಲ್ಲ. ಕೊನೆಗೆ ಹೊಸ ಮುಖಗಳಿಗೆ ಅವಕಾಶ ನೀಡಲು ತಂಡ ನಿರ್ಧರಿಸಿತು. 200 ಜನರ ಆಡಿಷನ್ ಮಾಡಿ ರಚಿತಾ ಅವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಭೇಟಿ ಆಗಲಿದ್ದಾರೆ ರಚಿತಾ ರಾಮ್, ಯಾವಾಗ? ಎಲ್ಲಿ?
ಈ ಬಾರಿ ರಚಿತಾ ರಾಮ್ ಅವರಿಗೆ ಬರ್ತ್ಡೇ ಸಖತ್ ವಿಶೇಷ ಎನಿಸಿಕೊಂಡಿದೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ತಮಿಳು ಸಿನಿಮಾ. ಈ ಚಿತ್ರದಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ಪಾತ್ರ ಭಿನ್ನವಾಗಿತ್ತು. ದ್ವೀತಿಯಾರ್ಧದಲ್ಲಿ ರಚಿತಾ ಪಾತ್ರಕ್ಕೆ ದೊಡ್ಡ ಮಟ್ಟದ ಟ್ವಿಸ್ಟ್ ನೀಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Fri, 3 October 25







