ಪ್ರೀಕ್ವೆಲ್ ಬಳಿಕ ಸೀಕ್ವೆಲ್ ಹೇಳಲು ರಿಷಬ್ ರೆಡಿ; ಕ್ಲೈಮ್ಯಾಕ್ಸ್‌ನಲ್ಲಿ ‘ಕಾಂತಾರ: ಚಾಪ್ಟರ್ 2’ ಬಗ್ಗೆ ಘೋಷಣೆ
Kantara Chapter 2: ರಿಷಬ್ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್ 1' ದೈವದ ಕಥೆ ಹೇಳುವ ಭವ್ಯ ಸಿನಿಮಾ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ನೂರಾರು ಕೋಟಿ ಕಲೆಕ್ಷನ್ ನಿರೀಕ್ಷೆಯಲ್ಲಿದೆ. ಕ್ಲೈಮ್ಯಾಕ್ಸ್‌ನಲ್ಲಿ 'ಕಾಂತಾರ: ಚಾಪ್ಟರ್ 2' ಘೋಷಣೆಯಾಗಿದೆ. ಇದು 'ಕಾಂತಾರ'ದ ಸೀಕ್ವೆಲ್ ಆಗಿರಲಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರು ಮತ್ತೆ ದೈವದ ಕಥೆಯನ್ನು ಹೇಳಿದ್ದಾರೆ. ಸಿನಿಮಾ ತುಂಬಾನೇ ಅದ್ದೂರಿಯಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರವನ್ನು ಬಹುವಾಗಿ ಇಷ್ಟಪಡುತ್ತಿದ್ದಾರೆ. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗಿರುವಾಗಲೇ ಈ ಸಿನಿಮಾಗೆ ರಿಷಬ್ ಸೀಕ್ವೆಲ್ ಘೋಷಣೆ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
‘ಕಾಂತಾರ’ ರಿಲೀಸ್ ಆದ ಬಳಿಕ ‘ಕಾಂತಾರ: ಚಾಪ್ಟರ್ 1’ ಘೋಷಣೆ ಮಾಡಲಾಯಿತು. ರಿಷಬ್ ಅವರು ಮೂರು ವರ್ಷಗಳ ಶ್ರಮ ಹಾಕಿ, ಈ ಸಿನಿಮಾ ಮಾಡಿದ್ದಾರೆ. ಸಾಮಾನ್ಯವಾಗಿ ಸೀಕ್ವೆಲ್ ಕಥೆ ಹೇಳೋದು ಗೊತ್ತೇ ಇದೆ. ಆದರೆ, ರಿಷಬ್ ಅವರು ಈ ಬಾರಿ ಪ್ರೀಕ್ವೆಲ್ ಆಯ್ಕೆ ಮಾಡಿಕೊಂಡರು. ಹಿಂದಿನ ಕಾಲದ ಕಥೆಯನ್ನು ರಿಷಬ್ ವಿವರಿಸಿದರು. ಈ ಬಾರಿಯೂ ಅವರು ದೈವದ ವಿಚಾರವನ್ನೇ ಇಟ್ಟುಕೊಂಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಚಾವುಂಡಿ (ಒಂದು ದೈವ) ಆಗಮನ ಆಗುತ್ತದೆ. ಆ ಬಳಿಕ ಕೊರಗ್ಗಜ್ಜನನ್ನೂ ತೋರಿಸಲಾಗಿದೆ. ಕೊನೆಯಲ್ಲಿ ಮತ್ತೊಂದು ದಂತ ಕಥೆ ಇದೆ ಎಂದು ಹೇಳಲಾಗುತ್ತದೆ. ಅದುವೇ ‘ಕಾಂತಾರ: ಚಾಪ್ಟರ್ 2’. ಈ ಸಿನಿಮಾ ಬಗ್ಗೆ ಈಗಲೇ ಕುತೂಹಲ ಮೂಡುವಂತೆ ಆಗಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್1’ ವಿಮರ್ಶೆ: ದಂತಕಥೆಯಲ್ಲಿ ಅದ್ದೂರಿತನ; ಇದು ದೈವದ ಕಥನ
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಹೀಗಾಗಿ, ಅವರು ಈ ಸಿನಿಮಾ ಆದ ಬಳಿಕ ಬ್ರೇಕ್ ಪಡೆಯುವ ಆಲೋಚನೆಯಲ್ಲಿ ಇದ್ದಾರೆ. ಇದರ ಜೊತೆಗೆ ಅವರು ಒಪ್ಪಿಕೊಂಡು ನಟಿಸಬೇಕಿರುವ ಸಿನಿಮಾಗಳ ಕೆಲಸಗಳು ಬಾಕಿ ಇವೆ. ಅದನ್ನು ಪೂರ್ಣಗೊಳಿಸಿದ ಬಳಿಕವೇ ರಿಷಬ್ ಅವರು ಮುಂದಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








