ಬೆಂಗಳೂರಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಟಿಕೆಟ್ ಸಿಗುತ್ತಿಲ್ಲವೆ? ಹಾಗಿದ್ದರೆ ಹೀಗೆ ಮಾಡಿ
Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಂತೂ ಸಾಕಷ್ಟು ಶೋಗಳನ್ನು ಸಿನಿಮಾಕ್ಕೆ ನೀಡಲಾಗಿದೆ. ಆದರೆ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗಿವೆ. ಆದರೆ ಮೊದಲ ದಿನವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಯೇ ತೀರಬೇಕು ಎಂಬ ಆಸೆ ಇದ್ದವರಿಗೆ, ದಾರಿ ಇಲ್ಲಿದೆ...

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಕರ್ನಾಟದಲ್ಲಂತೂ ಮುಂದಿನ ಎರಡು ಮೂರು ದಿನಗಳಿಗೆ ಸಿನಿಮಾ ಟಿಕೆಟ್ಗಳು ಮುಂಗಡವಾಗಿ ಬುಕಿಂಗ್ ಆಗಿಬಿಟ್ಟಿವೆ. ಬೆಂಗಳೂರಿನಲ್ಲಿ ಹಲವಾರು ಸಂಖ್ಯೆಯಲ್ಲಿ ಶೋಗಳಿವೆ, ಕೆಲವು ಚಿತ್ರಮಂದಿರಗಳಂತೂ ದಿನಕ್ಕೆ ಆರು ಶೋ ಪ್ರದರ್ಶಿಸುತ್ತಿವೆ. ಹಾಗಿದ್ದರೂ ಸಹ ಎಲ್ಲ ಶೋಗಳು ಬುಕ್ ಆಗಿವೆ. ಸಿನಿಮಾ ನೋಡಲು ಉತ್ಸುಕರಾಗಿರುವ ವೀಕ್ಷಕರಿಗೆ ಟಿಕೆಟ್ ಸಿಗುತ್ತಿಲ್ಲ. ಸಿನಿಮಾ ನೋಡಲೇ ಬೇಕು ಎಂದುಕೊಂಡವರಿಗೆ ಕೆಲವು ದಾರಿಗಳಂತೂ ಇವೆ.
ಅಕ್ಟೋಬರ್ 02, ಬೆಳಿಗ್ಗೆ 11 ಗಂಟೆ ವೇಳೆಗೆ ಬುಕ್ಮೈ ಶೋನಲ್ಲಿ ತೋರಿಸುತ್ತಿರುವ ಮಾಹಿತಿಯಂತೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಲ್ಲ ಶೋಗಳು ಸಹ ಫುಲ್ ಆಗಿವೆ. ಆದರೆ ಬೆಂಗಳೂರಿನ ಕೆಲವೆಡೆ ಕೆಲವು ಶೋಗಳ ಟಿಕೆಟ್ಗಳು ಈಗಲೂ ಬುಕ್ ಮೈ ಶೋನಲ್ಲಿ ಅವೆಲೆಬಲ್ ಇದ್ದು, ಅವುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಶೀಘ್ರವೇ ಬುಕ್ ಮಾಡಿಕೊಂಡಲ್ಲಿ, ಇಂದೇ ಸಿನಿಮಾ ನೋಡುವ ಅವಕಾಶ ಸಿಗಲಿದೆ.
ಎಚ್ಎಸ್ಆರ್ ಬಡಾವಣೆ ಹರಳೂರು ರಸ್ತೆಯಲ್ಲಿರುವ ಪಿಎನ್ಆರ್ ಫೆಲಿಸಿಟಿ ಮಾಲ್ನಲ್ಲಿ ಇಂದು ರಾತ್ರಿ 10:15ರ ಶೋಗೆ ಕೆಲವು ಟಿಕೆಟ್ಗಳು ಲಭ್ಯವಿದೆ. ಸರ್ಜಾಪುರದ ರವಿ ಡಿಜಿಟಲ್ ಚಿತ್ರಮಂದಿರದಲ್ಲಿ ಇಂದು ರಾತ್ರಿ 10:15ರ ಶೋನಲ್ಲಿ ಕೆಲವು ಟಿಕೆಟ್ಗಳು ಖರೀದಿಗೆ ಲಭ್ಯವಿದೆ. ಟಿಕೆಟ್ ಬೆಲೆಯೂ ಸಹ ಇಲ್ಲಿ ಕಡಿಮೆ ಇದೆ. ಹೊಸ ಜೆಸಿ ರಸ್ತೆಯಲ್ಲಿರುವ ಸ್ವಾಗತ್ ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ 10:30 ಗಂಟೆ ಶೋನ ಕೆಲವು ಟಿಕೆಟ್ಗಳು ಲಭ್ಯವಿದೆ. ಆಸಕ್ತರು ಗಮನಿಸಬಹುದಾಗಿದೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಫಸ್ಟ್ ಶೋ ನೋಡಿದವರ ಕ್ರೇಜಿ ಪ್ರತಿಕ್ರಿಯೆ: ವಿಡಿಯೋ
ಸುಲ್ತಾನ್ಪಾಳ್ಯದ ಪುಷ್ಪಾಂಜಲಿ ಏಸಿ ಚಿತ್ರಮಂದಿರದಲ್ಲಿ ಸಂಜೆ 6:30 ಹಾಗೂ ರಾತ್ರಿ 9:30ರ ಶೋನ ಟಿಕೆಟ್ಗಳು ಖರೀದಿಗೆ ಲಭ್ಯವಿದೆ. ಇಲ್ಲಿ ಸಹ ಟಿಕೆಟ್ ದರ ಕಡಿಮೆಯೇ ಇದೆ. ಗಾಂಧಿ ನಗರದ ಸಂತೋಶ್ ಚಿತ್ರಮಂದಿರದಲ್ಲಿ ಸಂಜೆ 7:30 ಮತ್ತು ರಾತ್ರಿ 10:45ರ ಶೋಗೆ ಟಿಕೆಟ್ಗಳು ಬುಕ್ಮೈ ಶೋನಲ್ಲಿ ಲಭ್ಯವಿವೆ. ಟಿಕೆಟ್ ದರಗಳು ಸಹ ಕಡಿಮೆ ಇವೆ. ಲಿಂಗರಾಜಪುರಂನಲ್ಲಿ ಅಮೃತ್ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 9:30ಕ್ಕೆ ಶೋ ಇದ್ದು ಎರಡೂ ಶೋನ ಟಿಕೆಟ್ಗಳು ಲಭ್ಯವಿವೆ. ಗೊಲ್ಲರಹಟ್ಟಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ರಾತ್ರಿ 9:30 ಶೋಗೆ ಬುಕಿಂಗ್ ಅವೆಲೆಬಲ್ ಇದೆ.
ಯಲಹಂಕದ ಪ್ರಕಾಶ್ ಚಿತ್ರಮಂದಿರದಲ್ಲಿ ರಾತ್ರಿ 10:30 ಶೋಗೆ ಟಿಕೆಟ್ಗಳು ಸಾಕಷ್ಟಿವೆ. ಸುಲಭವಾಗಿ ಟಿಕೆಟ್ ಲಭ್ಯ ಆಗಲಿವೆ. ಹೆಸರಘಟ್ಟದ ಎಸ್ಎಲ್ಎನ್ ಚಿತ್ರಮಂದಿರದಲ್ಲಿ ಸಹ ರಾತ್ರಿಶೋಗೆ ಟಿಕೆಟ್ಗಳು ಲಭ್ಯವಿವೆ. ಬೆಂಗಳೂರಿನ ಹೊರವಲಯದ ಆನೆಕಲ್ನ ಅನ್ನಪೂರ್ಣೇಶ್ವರಿ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 7:30ರ ಶೋಗೆ ಟಿಕೆಟ್ಗಳು ಲಭ್ಯ ಇವೆ. ಹಾಗೆಯೇ ಬೆಂಗಳೂರಿನಿಂದ ತುಸು ದೂರದಲ್ಲಿರುವ ದೊಡ್ಡಬಳ್ಳಾಪುರದ ರಾಜ್ಕಮಲ್ ಮತ್ತು ಸೌಂದರ್ಯಮಹಲ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್ಗಳು ಲಭ್ಯವಿವೆ.
ಇವುಗಳ ಹೊರತಾಗಿ ಯಲಹಂಕದ ಗ್ಯಾಲೆರಿಯಾ ಮಾಲ್ನ ಪಿವಿಆರ್ನಲ್ಲಿ ಐಮ್ಯಾಕ್ಸ್ನಲ್ಲಿ ರಾತ್ರಿ 10 ಗಂಟೆ ಶೋಗೆ ಸಾಕಷ್ಟು ಟಿಕೆಟ್ಗಳು ಲಭ್ಯವಿವೆ. ಟಿಕೆಟ್ ದರ 800 ರೂಪಾಯಿಗಳಿವೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಲ್ಲಿಯೇ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಆಗಿದ್ದು, ಪರಭಾಷೆಯ ಶೋನ ಟಿಕೆಟ್ಗಳು ಬಹುತೇಕ ಖಾಲಿ ಇವೆ. ಹಾಗಾಗಿ ಕನ್ನಡದಲ್ಲಿ ನೋಡಲು ಟಿಕೆಟ್ ಸಿಗದವರು ಪರಭಾಷೆಯಲ್ಲಿ ಬೆಂಗಳೂರಿನಲ್ಲಿಯೇ ಸಿನಿಮಾ ನೋಡಬಹುದಾಗಿದೆ. ಅದರ ಮಾಹಿತಿ ಬುಕ್ಮೈಶೋನಲ್ಲಿ ಲಭ್ಯವಿದೆ.
ಸೂಚನೆ: ಅಕ್ಟೋಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಬುಕ್ಮೈಶೋನಲ್ಲಿ ಲಭ್ಯವಿದ್ದ ಬುಕಿಂಗ್ ಮಾಹಿತಿಯ ಆಧಾರದಲ್ಲಿ ನೀಡಿರುವ ವರದಿಯಾಗಿದೆ. ಸಮಯ ಕಳೆದಂತೆ ಈಗ ಖಾಲಿ ಇರುವ ಶೋಗಳು ಸಹ ಫುಲ್ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:05 am, Thu, 2 October 25




