‘ಕಾಂತಾರ: ಚಾಪ್ಟರ್ 1’ ನೋಡಿ ಬೆರಗಾದ ನೆಟ್ಟಿಗರು ಹೇಳಿದ್ದೇನು?
Kantara Chapter 1 twitter review: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 02) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋ ನೋಡಿದವರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಮಂದಿ ಪ್ರೇಕ್ಷಕರು ನೆಟ್ಟಿಗರು ಹೇಳಿದ್ದೇನು?

ಹೊಂಬಾಳೆ ನಿರ್ಮಿಸಿ, ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 02) ಬಿಡುಗಡೆ ಆಗಿದೆ. ಸಿನಿಮಾ ದೇಶದಾದ್ಯಂತ ಬಲು ಅದ್ಧೂರಿಯಾಗಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 1) ರ ರಾತ್ರಿಯಿಂದಲೇ ಸಿನಿಮಾ ಶೋಗಳು ಚಾಲ್ತಿಯಲ್ಲಿವೆ. ಇಂದು ಸಹ ಬೆಳಿಗ್ಗೆ 5 ಗಂಟೆಯಿಂದಲೇ ಹಲವು ಕಡೆ ಶೋಗಳು ಪ್ರದರ್ಶನಗೊಳ್ಳುತ್ತಿವೆ. ಸಿನಿಮಾದ ಮೊದಲ ಶೋ ನೋಡಿದ ಹಲವರು ಟ್ವಿಟ್ಟರ್ನಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ನೆಟ್ಟಿಗರು ಹೇಳಿರುವುದೇನು? ಇಲ್ಲಿದೆ ನೋಡಿ ಮಾಹಿತಿ…
What an experience! 🙌 @shetty_rishab once again proves he’s a master storyteller.#KantaraChapter1 is more than a film—it’s a soul-stirring journey into folklore, faith & human emotions.🔥 That climax? Unforgettable. Visually surreal, emotionally… pic.twitter.com/Q0g03akK4V
— Nithin G M (@Nithin_gm1) October 1, 2025
ನಿತಿನ್ ಜಿಎಂ ಟ್ವೀಟ್ ಮಾಡಿ, ‘ರಿಷಬ್ ಶೆಟ್ಟಿ ಕತೆ ಹೇಳುವುದರಲ್ಲಿ ಮಾಸ್ಟರ್. ಅದ್ಭುತವಾಗಿ ಅವರು ಸಿನಿಮಾ ಹೆಣೆದಿದ್ದಾರೆ. ಜನಪದ, ಸಂಸ್ಕೃತಿ, ಮಾನವೀಯತೆ, ಮನುಷ್ಯನ ಗುಣಗಳು ಹೀಗೆ ಹಲವು ಭಾವಗಳನ್ನು ಅವರ ಕತೆ ಒಳಗೊಂಡಿದೆ. ‘ಕಾಂತಾರ: ಚಾಪ್ಟರ್ 1’ ಕೇವಲ ಸಿನಿಮಾ ಮಾತ್ರವಲ್ಲ, ಅದು ಆತ್ಮವನ್ನು ಅಲುಗಾಡಿಸುವ ಕಥನ. ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ಮರೆಯಲಾಗದ್ದು, ಅತ್ಯದ್ಭುತ ದೃಶ್ಯಗಳ ಹೆಣಿಗೆ, ಭಾವನೆಗಳ ತಾಕಲಾಟ ಎಲ್ಲವೂ ಕ್ಲೈಮ್ಯಾಕ್ಸ್ನಲ್ಲಿದೆ’ ಎಂದಿದ್ದಾರೆ.
Another National Award Loading… Rishabh Shetty dose it again.. lots of goosebumps moment in whole film.. @shetty_rishab#KantaraChapter1 #RishabShetty #KantaraChapter1review pic.twitter.com/R5DUcOUDal
— भाई साहब (@Bhai_saheb) October 1, 2025
ರಿಷಬ್ ಶೆಟ್ಟಿಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಪಕ್ಕಾ. ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರಿಷಬ್ ಶೆಟ್ಟಿಯವರ ನಟನೆ ಅತ್ಯದ್ಭುತ. ಸಿನಿಮಾನಲ್ಲಿ ಮೈನವಿರೇಳುವಂಥಹಾ ಹಲವಾರು ದೃಶ್ಯಗಳು ಇವೆ. ಇದೊಂದು ಅತ್ಯದ್ಭುತವಾದ ಸಿನಿಮಾ ಎಂದು ಟ್ವೀಟ್ ಮಾಡಿರುವುದು ಭಾಯಿ ಸಹಾಬ್ ಹೆಸರಿನ ಟ್ವಿಟ್ಟರ್ ಖಾತೆಯಿಂದ.
#KantaraChapter1 — BEST Climax In Indian Cinema , A Big FEAST ! @shetty_rishab pic.twitter.com/uURhHt9Jtp
— Let’s X OTT GLOBAL (@LetsXOtt) October 1, 2025
ಒಟಿಟಿ ಗ್ಲೋಬಲ್ ಟ್ವೀಟ್ ಮಾಡಿ, ‘ಕಾಂತಾರ: ಚಾಪ್ಟರ್ 1’ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯದ್ಭುತವಾದ ಕ್ಲೈಮ್ಯಾಕ್ಸ್ ದೃಶ್ಯ ಹೊಂದಿರುವ ಸಿನಿಮಾ ಆಗಿದೆ. ರಿಷಬ್ ಶೆಟ್ಟಿಯ ಈ ಸಿನಿಮಾ ಮೈನವಿರೇಳಿಸುತ್ತದೆ’ ಎಂದಿದ್ದಾರೆ.
#KantaraChapter1Review ⭐⭐⭐⭐⭐#RishabShetty’s intense acting + #RukminiVasanth’s charm = pure magic! The first half dazzles with grand visuals & massive VFX. A storytelling masterpiece meant for big screens. Don’t miss this cinematic wonder! 🎬🔥#KantaraChapter1 #Kantara
— South Movie Max (@southmoviemax) October 1, 2025
ಸೌಥ್ ಮೂವಿ ಮ್ಯಾಕ್ಸ್ ಟ್ವೀಟ್ ಮಾಡಿ, ‘ರಿಷಬ್ ಶೆಟ್ಟಿಯ ಅತ್ಯದ್ಭುತ ನಟನೆ ಮತ್ತು ರುಕ್ಮಿಣಿ ವಸಂತ್ ಅವರ ಚಾರ್ಮ್ ಅದ್ಭುತವಾಗಿದೆ. ಸಿನಿಮಾದ ಮೊದಲಾರ್ಧ ಅತ್ಯದ್ಭುತವಾದ ವಿಎಫ್ಎಕ್ಸ್, ಗ್ರ್ಯಾಂಡ್ ದೃಶ್ಯಗಳಿಂದ ಗಮನ ಸೆಳೆದರೆ, ಎರಡನೇ ಅರ್ಧ ಅದ್ಭುತ ಎಮೋಷನ್ಗಳನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವುದಕ್ಕೆ ಮರೆಯದಿರಿ’ ಎಂದಿದ್ದಾರೆ.
Kantara: Chapter 1 – Review 🔥
Rishab Shetty has done it again! This isn’t just a film – it’s an experience. From the first frame to the last, the movie grips you with raw emotion, divine energy, and breathtaking visuals. #KantaraChapter1 #KantaraChapter1review @shetty_rishab pic.twitter.com/fjwjR3M4oj
— MaDMa𝕏 (@Mad_MaXX_2) October 1, 2025
ಮ್ಯಾಡ್ ಮ್ಯಾಕ್ಸ್ ಟ್ವೀಟ್ ಮಾಡಿ, ‘ರಿಷಬ್ ಶೆಟ್ಟಿ ಮತ್ತೊಮ್ಮೆ ಮಾಡಿ ತೋರಿಸಿದ್ದಾರೆ. ಇದು ಕೇವಲ ಸಿನಿಮಾ ಮಾತ್ರ ಅಲ್ಲ ಇದೊಂದು ಅದ್ಭುತ ಅನುಭವ. ಸಿನಿಮಾದ ಮೊದಲ ದೃಶ್ಯದಿಂದ ಕೊನೆಯ ದೃಶ್ಯದ ವರೆಗೆ ಇಡೀ ಸಿನಿಮಾ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಭಾವನೆಗಳು, ದೈವೀಕ ಶಕ್ತಿ, ಅದ್ಭುತ ದೃಶ್ಯಗಳು, ನಟನೆ ಎಲ್ಲವೂ ಸೆಳೆಯುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




