ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಅಬ್ಬರ; ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್
Kantara: Chapter 1 Day 2 Collection: ಕಾಂತಾರ: ಚಾಪ್ಟರ್ 1 ಸಿನಿಮಾ ಕೇವಲ 2 ದಿನಗಳಲ್ಲಿ 100 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಕನ್ನಡಿಗರ ಹೆಮ್ಮೆಯ ಈ ಸಿನಿಮಾ, ಈ ವರ್ಷದ ಎರಡನೇ 100 ಕೋಟಿ ಗಳಿಸಿದ ಕನ್ನಡ ಚಿತ್ರವಾಗಿದೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ 'ಕೆಜಿಎಫ್ 2' ನಂತರದ ದೊಡ್ಡ ಸಾಧನೆ ಮಾಡಿದೆ.

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾ ಧೂಳೆಬ್ಬಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನೇ ಉಡೀಸ್ ಮಾಡಿದೆ. ಕೇವಲ ಎರಡು ದಿನಕ್ಕೆ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ರೀತಿಯ ಅಪರೂಪದ ಸಾಧನೆ ಮಾಡಿದ ಕನ್ನಡದ ಕೆಲವೇ ಚಿತ್ರಗಳ ಸಾಲಿಗೆ ಈ ಸಿನಿಮಾ ಕೂಡ ಸೇರ್ಪಡೆ ಆಗಿದೆ. ಈ ವರ್ಷದ ಎರಡನೇ 100 ಕೋಟಿ ರೂಪಾಯಿ ಕ್ಲಬ್ ಸಿನಿಮಾ ಇದು ಅನ್ನೋದು ವಿಶೇಷ. ಈ ಮೊದಲು ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಇಂತಹ ಸಾಧನೆ ಮಾಡಿತ್ತು.
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ ಮೊದಲಾದವರು ನಟಿಸಿರೋ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಈ ಚಿತ್ರ ಮೊದಲ ದಿನ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಿದೆ. ಈ ಸಿನಿಮಾ ಶುಕ್ರವಾರ 43.65 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.
ಭಾರತದಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರ 105.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಕೆಜಿಎಫ್ 2’ ಬಳಿಕ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಚಿತ್ರ ಇದಾಗಿದೆ. ಕನ್ನಡದ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರೋದು ಕನ್ನಡಿಗರ ಪಾಲಿಗೆ ಖುಷಿ ತಂದಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್; ‘ಪಠಾಣ್’ ದಾಖಲೆಯೇ ಉಡೀಸ್
ಭಾಷಾ ವಾರು ಲೆಕ್ಕ..
‘ಕಾಂತಾರ: ಚಾಪ್ಟರ್ 1’ ಚಿತ್ರದ ಮೊದಲ ದಿನ 62 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಭಾಷಾವಾರು ಲೆಕ್ಕ ಸಿಕ್ಕಿದೆ. ಕನ್ನಡದಿಂದ 20 ಕೋಟಿ ರೂಪಾಯಿ, ತೆಲುಗಿನಿಂದ 13 ಕೋಟಿ ರೂಪಾಯಿ, ಹಿಂದಿಯಿಂದ 18.5 ಕೋಟಿ ರೂಪಾಯಿ, ತಮಿಳಿನಿಂದ 5.5 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 5.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಸಿನಿಮಾ ಅನಾಯಾಸವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:09 am, Sat, 4 October 25








