AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಭರ್ಜರಿ ಕಲೆಕ್ಷನ್; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ

‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆಯುತ್ತಿದೆ. ಭಾರತದಲ್ಲೂ ಭರ್ಜರಿ ಗಳಿಕೆ ಮುಂದುವರೆದಿದೆ. ವಿಶೇಷವಾಗಿ, ಹಿಂದಿ ಭಾಷೆಯಲ್ಲಿ ಚಿತ್ರದ ಕಲೆಕ್ಷನ್ ಕನ್ನಡದ ಗಳಿಕೆಯನ್ನೂ ಮೀರಿಸಿದೆ. ಎರಡನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, ಭಾರತದಲ್ಲಿ 500 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಭರ್ಜರಿ ಕಲೆಕ್ಷನ್; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
ಕಾಂತಾರ
ರಾಜೇಶ್ ದುಗ್ಗುಮನೆ
|

Updated on: Oct 11, 2025 | 7:04 AM

Share

‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara: Chapter 1) ದಾಖಲೆಯ ಕಲೆಕ್ಷನ್ ಬರೆಯುತ್ತಾ ಮುಂದಕ್ಕೆ ಸಾಗುತ್ತಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ಭಾರತ ಒಂದರಲ್ಲೇ ಸಾಕಷ್ಟು ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಎರಡನೇ ವಾರದ ಮೊದಲ ದಿನ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗಳಿಕೆ ಹೀಗೆಯೇ ಮುಂದುವರಿದರೆ ಭಾರತದಲ್ಲೇ 500 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನವೇ ಅಬ್ಬರದ ಗಳಿಕೆ ಮಾಡಿತು. ಭಾರತ ಒಂದರಲ್ಲೇ ಚಿತ್ರ 62 ಕೋಟಿ ರೂಪಾಯಿ ಗಳಿಸಿತ್ತು. ಆ ಬಳಿಕ ಸತತವಾಗಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಲೇ ಬರುತ್ತಿದೆ. ವಾರದ ದಿನಗಳಲ್ಲೂ ಸಿನಿಮಾ ಗೆದ್ದು ಬೀಗಿದೆ. ಶುಕ್ರವಾರ ಈ ಚಿತ್ರ 22 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಗಳಿಕೆ 359 ಕೋಟಿ ರೂಪಾಯಿ ಆಗಿದೆ.

ಎಂಟು ದಿನಗಳ ಕಲೆಕ್ಷನ್ ವಿವರ

‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಿ ಅಕ್ಟೋಬರ್ 9ಕ್ಕೆ ಒಂದು ವಾರ ಕಳೆದಿದೆ. ಒಂದು ವಾರದಲ್ಲಿ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬುದರ ಲೆಕ್ಕ ಸಿಕ್ಕಿದೆ. ಅಷ್ಟೇ ಅಲ್ಲ, ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ವಿವರ ಕೂಡ ದೊರಕಿದೆ. ವಿಶೇಷ ಎಂದರೆ, ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
Image
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
Image
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
Image
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

8 ದಿನಗಳಿಗೆ ಸಿನಿಮಾ 337.4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಕನ್ನಡದಿಂದ 106.95 ಕೋಟಿ ರೂಪಾಯಿ, ತೆಲುಗಿನಿಂದ 63.55 ಕೋಟಿ ರೂಪಾಯಿ, ತಮಿಳಿನಿಂದ 31.5 ಕೋಟಿ ರೂಪಾಯಿ, ಮಲಯಾಳಂನಿಂದ 26.65 ಕೋಟಿ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ವಿಶ್ವಾದ್ಯಂತ 509 ಕೋಟಿ ರೂ. ಗಳಿಸಿದ ‘ಕಾಂತಾರ: ಚಾಪ್ಟರ್ 1’

ಹಿಂದಿ ಭಾಷೆಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ, ಕನ್ನಡಕ್ಕಿಂತ ಹಿಂದಿ ಕಲೆಕ್ಷನ್ ಹೆಚ್ಚಿದೆ. ಈ ಚಿತ್ರ ಹಿಂದಿಯಲ್ಲಿ 108.75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ.  ಕನ್ನಡದ ಬೆಲ್ಟ್​ಗಿಂತ ಹಿಂದಿ ಬೆಲ್ಟ್​ ಕಲೆಕ್ಷನ್ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.