AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೂ ಮೊದಲೇ ಸಪ್ತಪದಿ ತುಳಿದ ಕರ್ಣ-ನಿಧಿ; ಕಣ್ಣೀರೇ ಬಂತು

ಕರ್ಣ ಧಾರಾವಾಹಿಯಲ್ಲಿ ನಿತ್ಯಾ-ಕರ್ಣ ಮದುವೆಗೂ ಮುನ್ನವೇ ಕರ್ಣ ಮತ್ತು ನಿಧಿ ಸಪ್ತಪದಿ ತುಳಿದಿದ್ದಾರೆ. ಅವರ ಬಾಂಧವ್ಯ ಗಟ್ಟಿಗೊಂಡಿದ್ದು, ಕರ್ಣನ ಭಾವನಾತ್ಮಕ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ. ಕಥೆಯ ಈ ಮಹಾ ತಿರುವು ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ಘಟನೆಗಳ ಬಗ್ಗೆ ಕಾತರ ಹೆಚ್ಚಿಸಿದೆ.

ಮದುವೆಗೂ ಮೊದಲೇ ಸಪ್ತಪದಿ ತುಳಿದ ಕರ್ಣ-ನಿಧಿ; ಕಣ್ಣೀರೇ ಬಂತು
ಸಪ್ತಪದಿ ತುಳಿದ ಕರ್ಣ-ನಿತ್ಯಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 11, 2025 | 2:01 PM

Share

‘ಕರ್ಣ’ ಧಾರಾವಾಹಿಯ (Karna Serial) ಕಥೆಯಲ್ಲಿ ಮಹಾ ತಿರುವು ಒಂದು ಬರೋದಿದೆ. ನಿತ್ಯಾ ಹಾಗೂ ಕರ್ಣನ ಮದುವೆ ಆಗಬೇಕಿದೆ. ಅದಕ್ಕೂ ಮೊದಲೇ ನಿಧಿ ಹಾಗೂ ಕರ್ಣನ ಬಾಂಧವ್ಯ ಬಿಗಿಯಾಗುತ್ತಾ ಇದೆ. ಒಂದು ಕಡೆ ನಿತ್ಯಾ ಹಾಗೂ ಸೂರಜ್ ವಿವಾಹ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕರ್ಣ ಹಾಗೂ ನಿಧಿ ಪ್ರೀತಿ ಗಟ್ಟಿಯಾಗುತ್ತಿದೆ. ಈಗ ವಿವಾಹಕ್ಕೂ ಮೊದಲೇ ನಿಧಿ ಹಾಗೂ ಕರ್ಣ ಸಪ್ತಪದಿ ತುಳಿದಾಗಿದೆ. ಈ ಸಂದರ್ಭದಲ್ಲಿ ಕರ್ಣ ಹೇಳುವ ಸಾಲುಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಿತ್ಯಾ ಹಾಗೂ ಸೂರಜ್ ವಿವಾಹ ನೆರವೇರಬೇಕಿದೆ. ಆದರೆ, ಟ್ವಿಸ್ಟ್​ನಲ್ಲಿ ನಿತ್ಯಾ ಹಾಗೂ ಕರ್ಣ ವಿವಾಹ ನೆರವೇರಲಿದೆ. ಈ ಪ್ರೋಮೋನ ಈ ಮೊದಲೇ ಹಂಚಿಕೊಳ್ಳಲಾಗಿದೆ. ಈಗ ಕರ್ಣ ಹಾಗೂ ನಿಧಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಇದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲಿ ಬರೆದ ಸಾಲುಗಳು ಎಲ್ಲರಿಗೂ ಇಷ್ಟ ಆಗಿವೆ.

ಇದನ್ನೂ ಓದಿ
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
Image
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

‘ನೀವಿಡುತ್ತಿರುವ ಮೊದಲ ಹೆಜ್ಜೆ ನಮ್ಮಿಬ್ಬರ ಜೀವನದ ಹೊಸದಾರಿಗೆ ಮುನ್ನುಡಿ. ನಮ್ಮ ಬದುಕಿಗೆ ಖುಷಿ ಹೊತ್ತು ತಂದವರು ನೀವು, ಇಷ್ಟು ವರ್ಷ ಮರೆತಿದ್ದ ನನ್ನನ್ನು ಹುಡುಕಿ ಕೊಟ್ಟವರು ನೀವು. ನಿಮ್ಮನ್ನು ಯಾವಾಗಲೂ ನನ್ನ ಎದೆಗೂಡಲ್ಲಿ ಜೋಪಾನ ಮಾಡ್ತೀನಿ’ ಎಂದು ಸಪ್ತಪದಿ ಮೇಲೆ ನಡೆದು ಬರುತ್ತಿರುವ ನಿಧಿಗೆ ಕರ್ಣ ಹೇಳುತ್ತಾನೆ.

ನಿತ್ಯಾ ಸಪ್ತಪದಿ ವಿಡಿಯೋ

‘ನಿಮ್ಮ ಮನಸ್ಸು, ದೇಹ ಯಾವುದಕ್ಕೂ ನೋವು ಆಗದ ಹಾಗೆ ನೋಡಿಕೊಳ್ಳುತ್ತೇನೆ. ನೀವು ಬಂದಮೇಲೆ ಜೀವನದಲ್ಲಿ ಕಪ್ಪು-ಬಿಳುಪು ಹೊರತಾಗಿ ಬೇರೆ ಬಣ್ಣ ಇದೆ ಅಂತ ಗೊತ್ತಾಗಿದ್ದು. ನಿಮ್ಮ ಹೆಜ್ಜೆ ಸೋಕ್ತಿರೋ ಪ್ರತಿ ಬಣ್ಣ ಕಾಮನಬಿಲ್ಲು ಮೂಡಿಸೋದಕ್ಕೆ ಕಾಯ್ತಾ ಇದೆ. ಏಳು ಹೆಜ್ಜೆ ಇಟ್ಟು ಹೃದಯದಂಗಳಕ್ಕೆ ಬಂದುಬಿಡು ಕೈಚಾಚಿ ಕರೆಯುವೆನು, ಬಂದು ಬಿಗಿದಪ್ಪಿಕೋ, ಕೈಜಾರಿ ಹೋಗದಂತೆ ನೋಡಿಕೊಳ್ಳುವೆ ಏಳೇಳು ಜನ್ಮಕ್ಕೆ’ ಎಂದು ಕರ್ಣ ವಿವರಿಸಿದ್ದಾನೆ. ಈ ವೇಳೆ ಕರ್ಣನಗೆ ಕಣ್ಣೀರೇ ಬಂದಿದೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿ: ಅಭಿಮಾನಿಗಳ ಎದುರು ವಿಶೇಷ ಕೋರಿಕೆ ಇಟ್ಟ ನಿತ್ಯಾ-ನಿಧಿ

ಕರ್ಣ ಹಾಗೂ ನಿಧಿ ಬೇರೆ ಆಗುವುದುನ್ನು ಫ್ಯಾನ್ಸ್ ಸಹಿಸಿಕೊಳ್ಳುತ್ತಿಲ್ಲ. ಯಾವ ಕಾರಣಕ್ಕೆ ಕರ್ಣನು ನಿತ್ಯಾಳ ಮದುವೆ ಆಗುತ್ತಾನೆ ಎನ್ನುವ ಕುತೂಹಲವೂ ಮೂಡಿದೆ. ಇದರಲ್ಲಿ ಕರ್ಣನ ತಂದೆ ರಮೇಶ್ ಕೈವಾಡವೂ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.