ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ನಟ ಅಮಿತಾಭ್ ಬಚ್ಚನ್ ಇಂದು 83ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರು ಸಾವಿರಾರು ಕೋಟಿ ರೂ. ಸಂಪತ್ತಿನ ಒಡೆಯ. ಮುಂಬೈನಲ್ಲಿ ಹಲವು ಬಂಗಲೆಗಳು, ದುಬೈನಲ್ಲಿ ಐಷಾರಾಮಿ ಮ್ಯಾನ್ಷನ್, ಪ್ಯಾರಿಸ್‌ನಲ್ಲಿ ಮನೆ ಸೇರಿದಂತೆ ದೇಶ-ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 1570 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಇಂದು (ಅಕ್ಟೋಬರ್ 11) ಜನ್ಮದಿನ. ಅವರು 82 ವರ್ಷಗಳನ್ನು ಪೂರ್ಣಗೊಳಿಸಿ 83ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅಮಿತಾಭ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇಂದು ಸಾವಿರಾರು ಕೋಟಿ ರೂಪಾಯಿಗಳ ಒಡೆಯ. ಅಮಿತಾಭ್ ಬಚ್ಚನ್ ಬಹಳ ಸಮಯದಿಂದ ಸಿನಿಮಾಗಳಲ್ಲಿದ್ದಾರೆ. ಅವರು ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಸಾಕಷ್ಟು ಶ್ರೀಮಂತ. ಜಯಾ ಬಚ್ಚನ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಾಗ ಅಮಿತಾಭ್ ಬ್ಯಾಂಕ್ ಬ್ಯಾಲೆನ್ಸ್ ರಿವೀಲ್ ಆಗಿತ್ತು. ಅವರ ಬ್ಯಾಂಕ್ ಬ್ಯಾಲೆನ್ಸ್ 200 ಕೋಟಿ ರೂಪಾಯಿ ಇತ್ತು ಅನ್ನೋದು ವಿಶೇಷ. ಅವರ ಒಟ್ಟೂ ಆಸ್ತಿ 1570 ಕೋಟಿ ರೂಪಾಯಿ ಅನ್ನೋದು ವಿಶೇಷ.
ಇಷ್ಟೇ ಅಲ್ಲ, ಅಮಿತಾಭ್ ಬಚ್ಚನ್ ಮುಂಬೈನಲ್ಲಿ ದೊಡ್ಡ ಆಸ್ತಿಯನ್ನು ಹೊಂದಿದ್ದಾರೆ. ಮುಂಬೈನಲ್ಲಿ ಕೆಲವು ಬಂಗಲೆಗಳನ್ನು ಹೊಂದಿದ್ದಾರೆ. ಅವರು ಹಾಗೂ ಮಗ ಅಭಿಷೇಕ್ ಒಟ್ಟಾಗಿ ಸೇರಿ ಸಾಕಷ್ಟು ಆಸ್ತಿಗಳನ್ನು ಖರೀದಿ ಮಾಡುತ್ತಲೇ ಇದ್ದಾರೆ.
ಅಮಿತಾಭ್ ಬಚ್ಚನ್ ಹಲವು ಕಡೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆ ಹೊಂದಿದ್ದಾರೆ. ಪ್ಯಾರಿಸ್ನಲ್ಲೂ ಒಂದು ಮನೆ ಇದೆ. ಈ ಮನೆಯನ್ನು ಜಯಾ ಬಚ್ಚನ್ ಅರು ಅಮಿತಾಭ್ಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇದು ಫ್ರೆಂಚ್ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಇದೆ.
ಇನ್ನು ದುಬೈನಲ್ಲಿ ಅಮಿತಾಭ್ ಅವರು ದೊಡ್ಡ ಮ್ಯಾನ್ಶನ್ ಹೊಂದಿದ್ದಾರೆ. ಅವರು ಆಗಾಗ ದುಬೈ ಟ್ರಿಪ್ ತೆರಳುತ್ತಾರೆ ಮತ್ತು ಇದೇ ಮನೆಯಲ್ಲಿ ವಾಸ ಮಾಡುತ್ತಾರೆ. ಇಲ್ಲಿ ಗಾಲ್ಫ್ ಕ್ಲಬ್, ಸ್ವಮಿಂಗ್ಪೂಲ್ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್ಗೆ ಪಾಠ ಮಾಡಿದ ನೆಟ್ಟಿಗರು
ಅಮಿತಾಭ್ ಬಚ್ಚನ್ ಮುಂಬೈನಲ್ಲಿ ಜಲ್ಸಾ, ಜನಕ್, ವತ್ಸ ಮತ್ತು ಪ್ರತೀಕ್ಷಾ ಎಂಬ ಬಂಗಲೆಗಳನ್ನು ಹೊಂದಿದ್ದಾರೆ. ಈ ಪೈಕಿ ಪ್ರತೀಕ್ಷಾ ಅವರನ್ನು ಅಮಿತಾಬ್ ಬಚ್ಚನ್ ತಮ್ಮ ಮಗಳು ಶ್ವೇತಾ ನಂದಾಗೆ ಉಡುಗೊರೆಯಾಗಿ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಬಹಳ ಸಮಯದಿಂದ ಚಿತ್ರರಂಗದಲ್ಲಿದ್ದಾರೆ. ಅಮಿತಾಬ್ ಬಚ್ಚನ್ ಜಾಹೀರಾತು ಮತ್ತು ನಟನೆಯ ಮೂಲಕ ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಶೋ ಹೋಸ್ಟ್ ಮಾಡುವುದಕ್ಕೆ ಅವರಿಗೆ ಕೋಟಿ ಕೋಟಿ ಸಿಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:11 am, Sat, 11 October 25







