ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್ಗೆ ಪಾಠ ಮಾಡಿದ ನೆಟ್ಟಿಗರು
ಅಮಿತಾಭ್ ಬಚ್ಚನ್ ಅವರು ಮರಾಠಿಯಲ್ಲಿ ತಪ್ಪಾಗಿ ಬರೆದ ಟ್ವೀಟ್ ವೈರಲ್ ಆಗಿದೆ. ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ರಜನಿಕಾಂತ್ ಅವರ ಭಾಷಾ ಪ್ರಾವೀಣ್ಯತೆಯನ್ನು ಹೋಲಿಸಿ ಅನೇಕರು ಅವರಿಗೆ ಪಾಠ ಮಾಡಿದ್ದಾರೆ. ಕೆಲವರು ಅಮಿತಾಭ್ ಅವರನ್ನು ಟ್ರೋಲ್ ಮಾಡಿದರೆ, ಇನ್ನು ಕೆಲವರು ಅವರ ಕ್ಷಮೆಯನ್ನು ಮೆಚ್ಚಿಕೊಂಡಿದ್ದಾರೆ.

ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ಬಿಗ್ ಬಿ ಅವರ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಈಗ ಅವರ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಅನೇಕರು ರಜನಿಕಾಂತ್ ಅವರ ಉದಾಹರಣೆ ತೆಗೆದುಕೊಂಡು ನಟನಿಗೆ ಪಾಠ ಮಾಡಿದ್ದಾರೆ.
‘ಲಾಲ್ ಬಾಗ್ ಚಾ ರಾಜಾ…’ ಎಂದು ಮರಾಠಿಯಲ್ಲಿ ಬರೆಯುವಾಗ ಅಮಿತಾಭ್ ತಪ್ಪು ಮಾಡಿದ್ದಾರೆ. ಆ ಬಳಿಕ ಅವರು ಕ್ಷಮೆ ಕೇಳಿದ್ದಾರೆ. ಅಮಿತಾಬ್ ಬಚ್ಚನ್ ಅವರ ಟ್ವೀಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್
ಅಮಿತಾಭ್ ತಮ್ಮ ತಪ್ಪನ್ನು ಸರಿಪಡಿಸಿಕೊಂಡರು ನಿಜ. ಆದರೆ ಅನೇಕರು ಅವರನ್ನು ಟ್ರೋಲ್ ಮಾಡಿದರು. ಕೆಲವರು ಅವರನ್ನು ಹೊಗಳಿದರು. ‘ನೀವು ಮಹಾರಾಷ್ಟ್ರದಲ್ಲಿ ಇಷ್ಟು ವರ್ಷಗಳಿಂದ ವಾಸಿಸುತ್ತಿದ್ದರೂ, ನಿಮಗೆ ಇನ್ನೂ ಮರಾಠಿ ತಿಳಿದಿಲ್ಲ’ ಎಂದು ಅನೇಕರು ಹೇಳಿದ್ದಾರೆ. ‘ನೀವು ಇದನ್ನು ಗೂಗಲ್ ಟ್ರಾನ್ಸ್‌ಲೇಟ್ ಮೂಲಕ ಮಾಡಿದ್ದೀರಿ. ಇದನ್ನು ತಪ್ಪಾಗಿ ಅನುವಾದಿಸಲಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಮರಾಠಿ ಭಾಷೆ ಕಷ್ಟವಲ್ಲ, ನೀವು ಅದನ್ನು ಹೃದಯದಿಂದ ಕಲಿಯಬೇಕು’ ಎಂದು ಹೇಳಿದರು. ಇನ್ನೂ ಕೆಲವರು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದನ್ನು ಹೊಗಳಿದ್ದಾರೆ.
ಅಮಿತಾಭ್ ಟ್ವೀಟ್
T 5494(i) – हमारे एक शुभचिंतक ने कहा, की हमनें कल के ट्वीट में ग़लत शब्द लिख दिया है , तो उसे सही कर रहा हूँ । मैंने लिखा था ‘लालबाग ‘च’ राजा ‘ उन्होंने कहा होना चाहिए ‘चा ‘ सो सही कर रहा हूँ। लालबाग चा राजा 🙏🙏 क्षमा प्रार्थी
— Amitabh Bachchan (@SrBachchan) September 7, 2025
ಈ ಮಧ್ಯೆ ಅಮಿತಾಭ್ ಬಚ್ಚನ್ ಮತ್ತೊಬ್ಬ ನೆಟ್ಟಿಗರು ತಮಿಳುನಾಡಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಉದಾಹರಣೆಯನ್ನು ನೀಡಿದರು. ‘ಸರ್, ನೀವು ಹೇಳಿದ್ದು ಸರಿ ರಜನಿಕಾಂತ್ ಮರಾಠಿಯಾಗಿದ್ದರೂ, ತಮಿಳುನಾಡನ್ನು ತಮ್ಮ ತಾಯ್ನಾಡು ಎಂದು ಪರಿಗಣಿಸುತ್ತಾರೆ ಮತ್ತು ತಮಿಳು ಭಾಷೆಯನ್ನು ಸಂಪೂರ್ಣವಾಗಿ ಮಾತನಾಡುತ್ತಾರೆ. ಅವರು ಬಾಲ್ಯವನ್ನು ಕರ್ನಾಟಕದಲ್ಲಿ ಕಳೆದಿದ್ದಾರೆ. ಆದ್ದರಿಂದ ಅವರಿಗೆ ಕನ್ನಡ ತಿಳಿದಿದೆ. ರಜನಿಕಾಂತ್ ಮರಾಠಿ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳನ್ನು ಸಹ ಮಾತನಾಡುತ್ತಾರೆ. ಆದರೆ, ತಮಿಳಿಗೆ ಆದ್ಯತೆ ನೀಡುತ್ತಾರೆ. ಮಹಾರಾಷ್ಟ್ರವು ನಿಮ್ಮನ್ನು ತುಂಬಾ ಬೆಳೆಸಿದೆ, ಆದರೆ ನೀವು ಮರಾಠಿ ಸರಿಯಾಗಿ ಮಾತನಾಡಲು ಸಾಧ್ಯವಾಗದಿರುವುದು ನಮಗೆ ವಿಷಾದ ತಂದಿದೆ’ ಎಂದು ಹೇಳಿದ್ದಾರೆ. ಪ್ರಸ್ತುತ, ಬಿಗ್ ಬಿ ಅವರ ಪೋಸ್ಟ್ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







