ಅತ್ತೆಯ ಒತ್ತಾಯಕ್ಕೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಪ್ರೇಮಕಥೆ ಮತ್ತು ವಿವಾಹಕ್ಕೂ ಮುನ್ನ ಡಿಂಪಲ್ ಕಪಾಡಿಯಾ ಅವರು ನೀಡಿದ್ದ ವಿಶೇಷ ಸಲಹೆಯ ಬಗ್ಗೆ ಈ ಲೇಖನ ತಿಳಿಸುತ್ತದೆ. ಟ್ವಿಂಕಲ್ ಅವರ ತಾಯಿ, ಅವರ ಸ್ವಂತ ವಿವಾಹದ ಅನುಭವದ ಆಧಾರದ ಮೇಲೆ, ಅಕ್ಷಯ್ ಮತ್ತು ಟ್ವಿಂಕಲ್ ಲಿವ್-ಇನ್ ಸಂಬಂಧದಲ್ಲಿ ಎರಡು ವರ್ಷಗಳ ಕಾಲ ವಾಸಿಸಲು ಸಲಹೆ ನೀಡಿದ್ದರು.

ಅಕ್ಷಯ್ ಕುಮಾರ್ (Akshay Kumar) ಮತ್ತು ಟ್ವಿಂಕಲ್ ಖನ್ನಾ ಅವರ ಪ್ರೇಮಕಥೆ ಅನೇಕರಿಗೆ ತಿಳಿದಿರಬಹುದು. ಈ ಮೊದಲು ಟ್ವಿಂಕಲ್ ತಮ್ಮ ಮದುವೆಯ ಬಗ್ಗೆ ಹೊಸ ವಿಚಾರ ಹೇಳಿದ್ದರು. ಟ್ವಿಂಕಲ್ ಅವರ ತಾಯಿ ಡಿಂಪಲ್ ಕಪಾಡಿಯಾ ಮತ್ತು ತಂದೆ ರಾಜೇಶ್ ಖನ್ನಾ ವಿಚ್ಛೇದನ ಪಡೆಯದೆ ಹಲವು ವರ್ಷಗಳ ಕಾಲ ಬೇರೆಯಾಗೇ ವಾಸ ಇದ್ದರು. ಡಿಂಪಲ್ ಕಪಾಡಿಯಾ ಅವರು ಟ್ವಿಂಕಲ್ ಅವರನ್ನು ತುಂಬಾ ರಕ್ಷಿಸುತ್ತಿದ್ದರು. ಮದುವೆಯಾಗುವ ವಿಚಾರ ಬಂದಾಗ ಡಿಂಪಲ್ ಈ ಜೋಡಿಗೆ ಮೊದಲು ಲಿವ್-ಇನ್ ಸಂಬಂಧದಲ್ಲಿ ಇರಲು ಸಲಹೆ ನೀಡಿದರು. ಮದುವೆಗೆ ಮೊದಲು ಇಬ್ಬರೂ ಎರಡು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿ ವಾಸಿಸಬೇಕು ಮತ್ತು ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇಂದು (ಸೆಪ್ಟೆಂಬರ್ 9) ಅಕ್ಷಯ್ ಕುಮಾರ್ ಜನ್ಮದಿನ. ಈ ಸಂದರ್ಭದಲ್ಲಿ ಅವರ ಜೀವನದಲ್ಲಿ ನಡೆದ ಒಂದು ಪ್ರಮುಖ ಘಟನೆ ಬಗ್ಗೆ ತಿಳಿದುಕೊಳ್ಳೋಣ. ಅವರು ಈ ಮೊದಲು ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದರು.
‘ಅಕ್ಷಯ್ ನನ್ನನ್ನು ಮದುವೆಯಾಗಲು ಬಯಸುತ್ತಾನೆ ಎಂದು ಹೇಳಿದಾಗ, ನನ್ನ ತಾಯಿ ಹೇಳಿದ್ದು ಒಂದೇ ಮಾತು. ನೀವು ಎರಡು ವರ್ಷಗಳ ಕಾಲ ಒಟ್ಟಿಗೆ ಇರಬೇಕು. ಆ ನಂತರವೂ ನೀವು ಮದುವೆಯಾಗಲು ಬಯಸಿದರೆ, ನಂತರ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದರು’ ಎಂದು ಟ್ವಿಂಕಲ್ ವಿವರಿಸಿದ್ದರು.
‘ನಾನು ಮದುವೆಯಾಗಿದ್ದೇನೆ ಮತ್ತು ಮದುವೆಯ ಅನುಭವ ಹೇಗಿರುತ್ತದೆ ಎಂದು ನನಗೆ ತಿಳಿದಿದೆ ಎಂದು ತಾತು ಹೇಳುತ್ತಿದ್ದರು. ರಾಜೇಶ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ವಿವಾಹ ಆದರು. ಆದರೆ ಮದುವೆ ಆಗಿ 9 ವರ್ಷಕ್ಕೆ ಇವರು ಬೇರೆ ಆದರು. ಮದುವೆಗೂ ಮೊದಲು ಒಟ್ಟಿಗೆ ವಾಸ ಇದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯ ಡಿಂಪಲ್ ಅವರದ್ದು.
ಇದನ್ನೂ ಓದಿ: ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಜೊತೆಗೆ ಕೆವಿಎನ್ ವೆಂಕಟ್
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ 2001 ರಲ್ಲಿ ವಿವಾಹವಾದರು. ಅಕ್ಷಯ್ ಮತ್ತು ಟ್ವಿಂಕಲ್ ಉದ್ಯಮದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಈ ಜೋಡಿ ಹಲವು ಕಾರಣಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇವರು ಮಕ್ಕಳನ್ನು ಬೆಳೆಸುತ್ತಿರುವ ರೀತಿಯೂ ಭಿನ್ನವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







