‘ಅದು ನಾನು ಜೀವನದಲ್ಲಿ ತೆಗೆದುಕೊಂಡ ಅತಿದೊಡ್ಡ ಕೆಟ್ಟ ನಿರ್ಧಾರ’; ಮರುಗಿದ ಚಂದನ್ ಕುಮಾರ್
ಚಂದನ್ ಕುಮಾರ್ ಅವರು ಕಿರುತೆರೆ ಮೂಲಕ ಖ್ಯಾತಿ ಪಡೆದ ನಟ. ಅವರು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಅವರು ಧಾರಾವಾಹಿಗಳ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಂಡರು. ಇಂದು ಅವರು ತಮ್ಮ ಹೋಟೆಲ್ ವ್ಯವಹಾರದಲ್ಲಿ ನಿರತರಾಗಿದ್ದಾರೆ. ಜೀವನದಲ್ಲಿ ಏಳುಬೀಳುಗಳನ್ನು ಕಂಡ ಅವರ ಅನುಭವಗಳನ್ನು ಅವರು ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಕಿರುತೆರೆ ಮೂಲಕ ಫೇಮಸ್ ಆದ ಚಂದನ್ ಕುಮಾರ್ (Chandan Kumar) ನಂತರ ಹಿರಿತೆರೆಯಲ್ಲೂ ಮಿಂಚಿದರು. ಈಗ ಅವರು ಅಷ್ಟಾಗಿ ನಟನೆಯಲ್ಲಿ ಬ್ಯುಸಿ ಇಲ್ಲ. ಪತ್ನಿ ಕವಿತಾ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮದೇ ಆದ ಹೋಟೆಲ್ ಬಿಸ್ನೆಸ್ ಹೊಂದಿದ್ದಾರೆ. ಅವರು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಈ ಬಗ್ಗೆ ಚಂದನ್ ಕುಮಾರ್ ಅವರು ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ಕೆಟ್ಟ ಸಿನಿಮಾ ಮಾಡೋದಕ್ಕಿಂತ ಧಾರಾವಾಹಿ ಮಾಡೋದು ಬೆಸ್ಟ್ ಎಂದು ನನಗೆ ಅನಿಸುತ್ತದೆ. ಪ್ರೇಮ ಬರಹ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಸಿನಿಮಾ ಕೂಡ ಯಶಸ್ಸು ಕಂಡಿತು. ಈ ಚಿತ್ರ ಆದಮೇಲೆ ಬರುತ್ತಿದ್ದ ಕಥೆಗಳು ಒಂದೇ ರೀತಿಯಲ್ಲಿ ಇದ್ದವು. ನೀವು ಶ್ರೀಮಂತರ ಮನೆ ಹುಡುಗ, ಅವಳು ಬಡವರ ಮನೆ ಹುಡುಗಿ, ಕೊನೆಯಲ್ಲಿ ಒಂದಾಗ್ತಾರೋ ಅಥವಾ ಇಲ್ಲವೋ ಎಂಬುದೇ ಸ್ಟೋರಿ. ಹೀಗಾಗಿ ಸಿನಿಮಾ ಮಾಡಲು ಮನಸ್ಸು ಬರಲಿಲ್ಲ’ ಎಂದಿದ್ದಾರೆ ಚಂದನ್ ಕುಮಾರ್.
View this post on Instagram
ಜೀವನದಲ್ಲಿ ಚಂದನ್ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡರಂತೆ. ಆ ಸಮಯದಲ್ಲಿ ಅವರು ಇದಕ್ಕೆ ಮರುಗಿದ್ದರು. ‘ಪ್ರೇಮಬರಹ ಸಮಯದಲ್ಲಿ ಒಂದು ತಪ್ಪು ನಿರ್ಧಾರ ಮಾಡಿದೆ. ಕಾರು ತೆಗೆದುಕೊಂಡೆ. ಕಾರಿನ ಮೇಲೆ 20 ಲಕ್ಷ ರೂಪಾಯಿ ಸಾಲ ಇತ್ತು. ಕೆಲಸ ಇಲ್ಲದೆ, ಇಎಂಐ ಕಟ್ಟಲು ಸಾಧ್ಯ ಆಗುತ್ತಿರಲಿಲ್ಲ. ಆಗ ಮೂರ್ನಾಲ್ಕು ವಾಹಿನಿಗಳಿಂದ ಧಾರಾವಾಹಿಗಾಗಿ ನಿರಂತರವಾಗಿ ಕರೆಗಳು ಬರುತ್ತಲೇ ಇದ್ದವು’ ಎಂದಿದ್ದಾರೆ ಚಂದನ್. ಕಾರಿನ ಸಾಲ ತೀರಿಸಲು ಧಾರಾವಾಹಿ ಸಹಾಯ ಆಯ್ತು.
ಇದನ್ನೂ ಓದಿ: ‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್
‘ನಾನು ಧಾರಾವಾಹಿಯವರ ಬಳಿ ದೊಡ್ಡ ಪೇಮೆಂಟ್ ಕೇಳಿದೆ. ಅವರು ಕೊಡ್ತೀನಿ ಎಂದರು. ಲೈಫ್ ಸೆಟಲ್ ಆಯಿತು ಎಂದನಿಸಿತು. ನಾನು ಮತ್ತು ಕವಿತಾ ಕುಕ್ ವಿತ್ ಕಿರಿಕ್ ಎಂದು ಶೋ ಮಾಡ್ತಾ ಇದ್ದೆವು. ಆ ಶೋನಿಂದ ಬಂದ ಹಣದಲ್ಲಿ ಮದುವೆ ಆಯಿತು. ಗಳಿಕೆ ಮಾಡೋದು, ಖರ್ಚು ಮಾಡೋದು ಅಷ್ಟೇ’ ಎಂದಿದ್ದಾರೆ ಚಂದನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




