‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್

ಇಂದು (ಆಗಸ್ಟ್​ 1) ಸಂಜೆ ಸುದ್ದಿಗೋಷ್ಠಿ ಕರೆದು ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಸುದ್ದಿಗೋಷ್ಠಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದಾರೆ.  

‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 01, 2022 | 9:00 PM

ತೆಲುಗಿನ ‘ಶ್ರೀಮತಿ ಶ್ರೀನಿವಾಸ್​’ ಧಾರಾವಾಹಿ ಶೂಟಿಂಗ್ ವೇಳೆ ಕಿರಿಕ್ ನಡೆದಿತ್ತು. ‘ಚಂದನ್ ಕುಮಾರ್ (Chandan Kumar) ಅವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಧಾರಾವಾಹಿ ತಂತ್ರಜ್ಞರೊಬ್ಬರು ಹೇಳಿಕೊಂಡಿದ್ದರು. ಆದರೆ, ಇದನ್ನು ಚಂದನ್ ಕುಮಾರ್ ಅಲ್ಲಗಳೆದಿದ್ದಾರೆ. ಇಂದು (ಆಗಸ್ಟ್ 1) ಸಂಜೆ ಸುದ್ದಿಗೋಷ್ಠಿ ಕರೆದು ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಸುದ್ದಿಗೋಷ್ಠಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಶೂಟಿಂಗ್ ಸೆಟ್​ನಲ್ಲಿ ನಡೆದಿದ್ದೇನು ಎಂಬುದನ್ನು ಚಂದನ್ ಕುಮಾರ್ ವಿವರಿಸಿದ್ದಾರೆ. ‘ರಂಜಿತ್ ಎಂಬಾತ ನನ್ನ ಪದೇಪದೇ ಕರೆಯುತಿದ್ದ. ನನಗೆ 30 ನಿಮಿಷ ರೆಸ್ಟ್ ಬೇಕು ಎಂದಿದ್ದೆ. ಕೆಲ ಸಮಯ ಬಿಟ್ಟು ಆತ ‘5 ನಿಮಿಷ ಎಂದು 30 ನಿಮಿಷ ಮಲಗಿದ್ದಾನಲ್ಲೋ ಅವನು’ ಎಂದು ಕೂಗಿದ. ನಾನು ಕರೆದು ಏನಾಯ್ತು ಎಂದು ಕೇಳಿದೆ. ಡೈರೆಕ್ಟರ್ ಕರೀತಾ ಇದಾರೆ ಬರಲೇಬೇಕಂತೆ ಎಂದು ಆತ ಹೇಳಿದ. ನಾನು ಸುಮ್ಮನೆ ಹೋಗಪ್ಪ ಎಂದು ತಳ್ಳಿದೆ. ಆದರೆ, ಇದನ್ನು ಆತ ಅಲ್ಲಿ ಹೋಗಿ ಬೇರೆ ರೀತಿಯಲ್ಲಿ ಹೇಳಿದ್ದಾನೆ. ಕಣ್ಣೀರು ಹಾಕಿದ್ದಾನೆ’ ಎಂಬುದು ಚಂದನ್ ಕುಮಾರ್ ಅವರ ಮಾತು.

‘ಎಲ್ಲರೂ ಬಂದು ಗಲಾಟೆ ಮಾಡಿದರು. ಈಗ ಶೂಟಿಂಗ್ ನಡೆಯಲ್ಲ ಎಂದರೆ ನಾನು ಹೊರಡ್ತೀನಿ ಎಂದೆ. ಆಗ ಎಲ್ಲರೂ ಬಂದು ಅಡ್ಡಗಟ್ಟಿದರು. 3 ಗಂಟೆ ಎಲ್ಲಿಗೂ ಹೋಗೋಕೆ ಬಿಡಲಿಲ್ಲ. ಆಮೇಲೆ ನಿರ್ದೇಶಕ ಸಂಘದವರು ಅಂತ ಕೆಲವರು ಬಂದರು. ನನ್ನ ಪರವಾಗಿ ಯಾರೂ ಮಾತನಾಡಲಿಲ್ಲ. ಬೆಂಗಳೂರಿಂದ ಬಂದಿದ್ದೇನೆ ಎಂದು ಈ ರೀತಿ ಮಾಡಿದ್ದಾರೆ. ಹೊಡೆದು ಅವಮಾನ ಮಾಡಬೇಕು ಎಂದು ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ ಅವರು.

ಇದನ್ನೂ ಓದಿ
Image
‘ಅಮ್ಮ ನಿಮ್ಮ ಜತೆ ನಾನು ಇರಬೇಕಿತ್ತು’; ವಿವಾದದ ಬಳಿಕ ಹೊಸ ಪೋಸ್ಟ್ ಹಾಕಿದ ಚಂದನ್ ಕುಮಾರ್
Image
Chandan Kumar: ನಟ ಚಂದನ್​ ಕುಮಾರ್​ ಮೇಲೆ ಹಲ್ಲೆ: ವೈರಲ್​ ವಿಡಿಯೋದಲ್ಲಿದೆ ಕಪಾಳಮೋಕ್ಷದ ದೃಶ್ಯ
Image
Chandan Kumar: ಕನ್ನಡದ ನಟ ಚಂದನ್​ ಕುಮಾರ್​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಹಲ್ಲೆ; ವಿಡಿಯೋ ವೈರಲ್​
Image
ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್

‘ತೆಲುಗು ಜನತೆ ಕೂಡ ಇದನ್ನು ಒಪ್ಪಲ್ಲ. ನನ್ನ ತಾಯಿ ಭಾಷೆ ಕನ್ನಡ. ತೆಲುಗು ದೊಡ್ಡಮ್ಮ, ತಮಿಳು ಚಿಕ್ಕಮ್ಮ ಅಂತ ಅಂದುಕೊಂಡವನು ನಾನು. ಎಲ್ಲರೂ ಅಮ್ಮಂದಿರೇ. ಅವರು ಮಾಡಿರೋದು ಅನ್ಯಾಯ. ಧಾರಾವಾಹಿ ನಿರ್ದೇಶಕರು ಈಗಲೂ ನನ್ನ ಜತೆ ಚೆನ್ನಾಗಿದ್ದಾರೆ. ನಾನು ಧಾರಾವಾಹಿಯಿಂದ ಹೊರಬರುತ್ತಿದ್ದೇನೆ’ ಎಂದಿದ್ದಾರೆ ಚಂದನ್.

ಇದನ್ನೂ ಓದಿ: ‘ಅಮ್ಮ ನಿಮ್ಮ ಜತೆ ನಾನು ಇರಬೇಕಿತ್ತು’; ವಿವಾದದ ಬಳಿಕ ಹೊಸ ಪೋಸ್ಟ್ ಹಾಕಿದ ಚಂದನ್ ಕುಮಾರ್

‘ಅವರೆಲ್ಲ ನಮ್ಮ ಜತೆಯಲ್ಲಿ ತುಂಬಾ ಸಲುಗೆಯಿಂದ ಇದ್ದವರು. ಒಟ್ಟಿಗೆ ಪಾರ್ಟಿ ಮಾಡಿದ್ದೀವಿ. ನಮ್ಮ ಮನೆಯ ಗೃಹ ಪ್ರವೇಶ ಆದಾಗ ಅವರಿಗೆ ಇಲ್ಲಿಗೆ ಬರೋಕೆ ಆಗಿಲ್ಲ. ಹೀಗಾಗಿ, ಅಲ್ಲಿಯೇ ಊಟ ಹಾಕಿಸಿದ್ದೀನಿ. ಈಗ ಅವರು ನಡೆದುಕೊಂಡಿದ್ದು ತುಂಬಾನೇ ಅಚ್ಚರಿ ಮೂಡಿಸಿದೆ’ ಎಂದಿದ್ದಾರೆ ಚಂದನ್.

Published On - 8:38 pm, Mon, 1 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್