AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandan Kumar: ಕನ್ನಡದ ನಟ ಚಂದನ್​ ಕುಮಾರ್​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಹಲ್ಲೆ; ವಿಡಿಯೋ ವೈರಲ್​

Srimathi Srinivas: ‘ಶ್ರೀಮತಿ ಶ್ರೀನಿವಾಸ್​’ ಸೀರಿಯಲ್​ ಶೂಟಿಂಗ್​ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಚಂದನ್​ ಕುಮಾರ್​ ಮೇಲೆ ತಂತ್ರಜ್ಞರು ಹಲ್ಲೆ ಮಾಡಿದ ವಿಡಿಯೋ ವೈರಲ್​ ಆಗಿದೆ.

Chandan Kumar: ಕನ್ನಡದ ನಟ ಚಂದನ್​ ಕುಮಾರ್​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಹಲ್ಲೆ; ವಿಡಿಯೋ ವೈರಲ್​
ಚಂದನ್​ ಮೇಲೆ ಹಲ್ಲೆ
TV9 Web
| Edited By: |

Updated on:Aug 01, 2022 | 3:01 PM

Share

ನಟ ಚಂದನ್​ ಕುಮಾರ್​ (Chandan Kumar) ಅವರು ಕಿರುತೆರೆ ಮತ್ತು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ತೆಲುಗಿನ ಧಾರಾವಾಹಿಯಲ್ಲೂ ಅವರು ನಟಿಸಿ ಫೇಮಸ್​ ಆಗಿದ್ದಾರೆ. ‘ಶ್ರೀಮತಿ ಶ್ರೀನಿವಾಸ್​’ (Srimathi Srinivas) ಧಾರಾವಾಹಿಯ ಶೂಟಿಂಗ್​ ವೇಳೆ ಚಂದನ್ ​ಕುಮಾರ್​ ಅವರ ಮೇಲೆ ಹಲ್ಲೆ (Assault on Chandan Kumar) ಆಗಿದೆ. ಸೀರಿಯಲ್​ ತಂತ್ರಜ್ಞರ ಜೊತೆ ಚಂದನ್​ ಕಿರಿಕ್​ ಮಾಡಿಕೊಂಡಿದ್ದು ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಘಟನೆ ನಡೆದು ಬಹಳ ದಿನಗಳಾಗಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ.

ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಮೊದಲು ಚಂದನ್​ ಅವರಿಂದ ಕ್ಯಾಮೆರಾಮ್ಯಾನ್​ ಮೇಲೆ ಹಲ್ಲೆ ನಡೆಯಿತು. ಆ ಕಾರಣದಿಂದಲೇ ತಂತ್ರಜ್ಞರು ಚಂದನ್​ ವಿರುದ್ಧ ತಿರುಗಿ ಬಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಚಂದನ್​ ಕ್ಷಮೆ ಕೇಳಿದರೂ ಕೂಡ ಅಲ್ಲಿದ್ದ ಯಾರೊಬ್ಬರೂ ಸಮಾಧಾನಗೊಂಡಿಲ್ಲ. ಪರಿಸ್ಥಿತಿ ಬಿಡಗಾಯಿಸಿದಾಗ ಕೈಕೈ ಮಿಲಾಯಿಸಿದ್ದಾರೆ.

ಹಲವು ವರ್ಷಗಳಿಂದ ಚಂದನ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಮತ್ತು ಸೀರಿಯಲ್​ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಗಳಿಸಿದ್ದಾರೆ. ಕನ್ನಡದ ‘ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಯಿಂದ ಅವರು ಮನೆಮಾತಾಗಿದ್ದಾರೆ. ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಮೂಲಕ ತೆಲುಗು ಕಿರುತೆರೆಗೂ ಚಂದನ್​ ಕುಮಾರ್​ ಎಂಟ್ರಿ ನೀಡಿದ್ದರು. ನಂತರ  ‘ಶ್ರೀಮತಿ ಶ್ರೀನಿವಾಸ್​’ ಧಾರಾವಾಹಿ ಒಪ್ಪಿಕೊಂಡರು. ಅದೇ ಸೀರಿಯಲ್​ ಸೆಟ್​ನಲ್ಲಿ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ.

ಇದನ್ನೂ ಓದಿ
Image
ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್
Image
ಮಾಸ್ಕ್​ ಧರಿಸಿ ಹಸೆಮಣೆ ಏರಿದ ಚಂದನ್​ ಕುಮಾರ್​-ಕವಿತಾ ಗೌಡ; ಲಾಕ್​ಡೌನ್​ ಮಧ್ಯೆಯೇ ಸಿಂಪಲ್​ ವಿವಾಹ
Image
Chandan – Kavitha: ಕವಿತಾ ಪ್ರೀತಿಗಾಗಿ ಮಧ್ಯರಾತ್ರಿ ಮನೆಗೆ ಹೋಗಿದ್ದ ಚಂದನ್​! ಆಗಲೇ ಮೂಡಿತ್ತು ಅನುಮಾನ
Image
Exclusive: ಮದುವೆಗಾಗಿ ಸೀರಿಯಲ್​ ಬಿಟ್ಟುಬಂದ ಚಂದನ್​! ಹುಡುಗಿ ಕವಿತಾನಾ ಅಂತ ಕೇಳಿದ್ದಕ್ಕೆ ಅವರು ಹೇಳಿದ್ದೇನು?

ಸೀರಿಯಲ್​ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಚಂದನ್​ ಭಾಗಿ ಆಗಿದ್ದಾರೆ. ‘ಪ್ಯಾಟೆ ಮಂದಿ ಕಾಡಿಗ್​ ಬಂದ್ರು’, ‘ಬಿಗ್​ ಬಾಸ್​ ಕನ್ನಡ ಸೀಸನ್​ 3’ ಶೋಗಳಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ‘ಲವ್​ ಯೂ ಆಲಿಯಾ’, ‘ಪ್ರೇಮ ಬರಹ’ ಮುಂತಾದ ಸಿನಿಮಾಗಳಲ್ಲಿ ಚಂದನ್​ ನಟಿಸಿದ್ದಾರೆ. ಕಿರುತೆರೆ ನಟಿ ಕವಿತಾ ಗೌಡ ಜೊತೆ ಅವರು 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಸಂದರ್ಭದಲ್ಲಿ ತೆಲುಗು ಸೀರಿಯಲ್​ನಿಂದ ಅವರು ಬ್ರೇಕ್​ ಪಡೆದುಕೊಂಡಿದ್ದರು.

Published On - 8:58 am, Mon, 1 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್