AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandan – Kavitha: ಕವಿತಾ ಪ್ರೀತಿಗಾಗಿ ಮಧ್ಯರಾತ್ರಿ ಮನೆಗೆ ಹೋಗಿದ್ದ ಚಂದನ್​! ಆಗಲೇ ಮೂಡಿತ್ತು ಅನುಮಾನ

Chandan Gowda - Kavitha Gowda Wedding: ಚಂದನ್​ ಕುಮಾರ್​ ಮತ್ತು ಕವಿತಾ ಗೌಡ ಪ್ರೇಮ್​ ಕಹಾನಿ ಶುರುವಾಗಿದ್ದು ನಿನ್ನೆ-ಮೊನ್ನೆ ಅಲ್ಲ. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.

Chandan - Kavitha: ಕವಿತಾ ಪ್ರೀತಿಗಾಗಿ ಮಧ್ಯರಾತ್ರಿ ಮನೆಗೆ ಹೋಗಿದ್ದ ಚಂದನ್​! ಆಗಲೇ ಮೂಡಿತ್ತು ಅನುಮಾನ
ಚಂದನ್​ ಕುಮಾರ್​ - ಕವಿತಾ ಗೌಡ
ಮದನ್​ ಕುಮಾರ್​
| Edited By: |

Updated on:Mar 31, 2021 | 1:31 PM

Share

ಕಿರುತೆರೆಯ ಕ್ಯೂಟ್​ ಕಪಲ್​ ಎನಿಸಿಕೊಂಡಿರುವ ನಟ ಚಂದನ್​ ಕುಮಾರ್​ ಮತ್ತು ನಟಿ ಕವಿತಾ ಗೌಡ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದು ಖಚಿತ ಆಗಿದೆ. ಹಾಗಂತ ಈ ಜೋಡಿಯ ಪ್ರೇಮ್​ ಕಹಾನಿ ಶುರುವಾಗಿದ್ದು ನಿನ್ನೆ-ಮೊನ್ನೆ ಅಲ್ಲ. ಈ ಹಿಂದೆ ಅನೇಕ ಬಾರಿ ಈ ಜೋಡಿಯ ಬಗ್ಗೆ ಅನುಮಾನ ಮೂಡಿತ್ತು.

ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್​ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್​ನಲ್ಲಿ ಚಂದನ್​ ಕುಮಾರ್​ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.

ಕವಿತಾ ಮತ್ತು ಚಂದನ್​ ಕುಮಾರ್​ ನೇರವಾಗಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಹಾಗಿದ್ದರೂ ಕೂಡ ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಅನೇಕ ಸಾಕ್ಷಿಗಳು ಸಿಗಲು ಆರಂಭಿಸಿದವು. ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದರು. ಅದನ್ನು ಅವರು ಮುಚ್ಚಿಡುತ್ತಿರಲಿಲ್ಲ ಕೂಡ. ಆ ಕ್ಷಣದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು. ‘ಒಳ್ಳೆಯ ಜೋಡಿ.. ಬೇಗ ಮದುವೆ ಆಗಿ’ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದರೂ ಸಹ, ಈ ಪ್ರೇಮಪಕ್ಷಿಗಳು ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

ಕಳೆದ ವರ್ಷ ಲಾಕ್​ಡೌನ್​ ಸಮಯದಲ್ಲಿ ಕವಿತಾ ಗೌಡ ಜನ್ಮದಿನವನ್ನು (ಜು.26) ಸಿಂಪಲ್​ ಆಗಿ ಅವರ ಮನೆಯಲ್ಲೇ ಆಚರಿಸಲಾಗಿತ್ತು. ಲಾಕ್​ಡೌನ್​ ನಿಯಮಗಳು ಇದ್ದಿದ್ದರಿಂದ ಕೆಲವೇ ಕೆಲವು ಆಪ್ತರು ಮಾತ್ರ ಅದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಚಂದನ್​ ಅವರು ಕವಿತಾಗೆ ಒಂದು ಸರ್ಪ್ರೈಸ್​ ನೀಡಿದ್ದರು. ಬರ್ತ್​ಡೇ ಆಚರಿಸುವ ವೇಳೆ ಕಿಂಚಿತ್ತೂ ಸುಳಿವು ನೀಡದೆ, ಮಧ್ಯರಾತ್ರಿ ಕವಿತಾ ಮನೆಗೆ ಚಂದನ್​ ಎಂಟ್ರಿ ನೀಡಿದ್ದರು! ಅವರ ಪ್ರೀತಿಗೆ ಕರಗಿದ ಕವಿತಾ ಮುಖದಲ್ಲಿ ನಗು ಅರಳಿತ್ತು. ಆ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಲಾಕ್​ಡೌನ್​ ಸಡಿಲಿಕೆ ಆದನಂತರ ಸ್ನೇಹಿತರ ಜೊತೆಗೂಡಿ ಅನೇಕ ಪ್ರವಾಸಿ ಸ್ಥಳಗಳಿಗೆ ಕವಿತಾ-ಚಂದನ್​ ಭೇಟಿ ನೀಡಿದ್ದರು. ಆ ಸಂದರ್ಭದ ಅನೇಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಎಲ್ಲ ಫೋಟೋದಲ್ಲಿಯೂ ಕವಿತಾ ಮತ್ತು ಚಂದನ್​ ಆಪ್ತತೆಯನ್ನು ನೆಟ್ಟಿಗರು ಸುಲಭವಾಗಿ ಗುರುತಿಸಬಹುದಾಗಿತ್ತು. ಇತ್ತೀಚೆಗೆ ಚಂದನ್​ ಅವರು ಫುಡ್​ ಬ್ಯುಸಿನೆಸ್​ ಆರಂಭಿಸಿದರು. ಆಗಲೂ ಸಹ ಕವಿತಾ ಅವರು ಚಂದನ್​ ಜೊತೆ ನಿಂತು ಬೆಂಬಲ ನೀಡಿದರು. ಚಂದನ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕವಿತಾ ಅವರ ಹಲವಾರು ಫೋಟೋಗಳು ರಾರಾಜಿಸುತ್ತಿವೆ.

ಇದನ್ನೂ ಓದಿ: ಏಪ್ರಿಲ್​ 1ಕ್ಕೆ ಹಸೆಮಣೆ ಏರಲಿದ್ದಾರೆ ಚಂದನ್​-ಕವಿತಾ ಲವ್​ ಬರ್ಡ್ಸ್​​! ಕಡೆಗೂ ಅಧಿಕೃತವಾಯಿತು ಇಬ್ಬರ ಪ್ರೀತಿ

Published On - 1:20 pm, Wed, 31 March 21

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು