ನಟ ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; 2 ತಿಂಗಳಲ್ಲಿ ಇಷ್ಟೊಂದು ಬದಲಾವಣೆ

ಚಂದನ್​ ಕುಮಾರ್​ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊವಿಡ್​ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್​ ತೆಗೆದುಕೊಂಡರು.

ನಟ ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; 2 ತಿಂಗಳಲ್ಲಿ ಇಷ್ಟೊಂದು ಬದಲಾವಣೆ
ನಟ ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; 2 ತಿಂಗಳಲ್ಲಿ ಇಷ್ಟೊಂದು ಬದಲಾವಣೆ
Follow us
TV9 Web
| Updated By: Digi Tech Desk

Updated on:Feb 20, 2024 | 2:55 PM

ಹೀರೋಗಳು ಫಿಟ್​ನೆಸ್​ ಕಾಯ್ದುಕೊಳ್ಳೋಕೆ ಹೆಚ್ಚು ಒತ್ತು ನೀಡುತ್ತಾರೆ. ಈ ಕಾರಣಕ್ಕೆ ನಿತ್ಯ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ, ಕೊವಿಡ್​ ಬಂದ ನಂತರದಲ್ಲಿ ಅನೇಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದ ಫಿಟ್​ನೆಸ್​ ಕಳೆದುಕೊಂಡಿದ್ದಾರೆ. ಇದರಲ್ಲಿ ನಟ ಚಂದನ್​ ಕುಮಾರ್​ ಕೂಡ ಒಬ್ಬರು. ಆದರೆ, ಕೇವಲ ಎರಡೇ ತಿಂಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಚಂದನ್​ ಕುಮಾರ್​ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊವಿಡ್​ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್​ ತೆಗೆದುಕೊಂಡರು. ಈ ಕಾರಣಕ್ಕೆ ತೆಲುಗು ಧಾರಾವಾಹಿಯಿಂದ ಹೊರ ಬಂದರು. ಈ ಮಧ್ಯೆ ಕೊವಿಡ್​ ಕಾಣಿಸಿಕೊಂಡಿತ್ತು. ಹೀಗಾಗಿ, ಚಂದನ್​ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ, ಅವರಿಗೆ ಜಿಮ್​ಗೆ ತೆರಳೋಕು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರ ದೇಹ ಶೇಪ್​ ಕಳೆದುಕೊಂಡಿತ್ತು.

ಆದರೆ, ಚಂದನ್​ ಕುಮಾರ್​ ಕೈಕಟ್ಟಿ ಕೂತಿಲ್ಲ. ಸತತ ಎರಡು ತಿಂಗಳು ಜಿಮ್​ನಲ್ಲಿ ಬೆವರು ಹರಿಸಿದ್ದಾರೆ. ಈ ಮೂಲಕ ಅವರ ಬಾಡಿಯನ್ನು ಕರಗಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಚಂದನ್​ ಹಂಚಿಕೊಂಡಿದ್ದಾರೆ.

ಜೂನ್​ 21ರ ಫೋಟೋದಲ್ಲಿ ಚಂದನ್​ಗೆ ದೊಡ್ಡದಾದ ಹೊಟ್ಟೆ ಬಂದಿದೆ. ಆದರೆ ಆಗಸ್ಟ್​ 26ರ ಫೋಟೋದಲ್ಲಿ ಅವರು ಸಖತ್​ ಫಿಟ್​ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್​ ಅಚ್ಚರಿ ಹೊರ ಹಾಕಿದ್ದಾರೆ. ಇನ್ನೂ ಕೆಲವರು ‘ನೀವೇ ನಮಗೆ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಚಂದನ್ ಕುಮಾರ್ – ನಟಿ ಕವಿತಾ ಗೌಡ ಸಿಂಪಲ್ ಮದುವೆಯ ಫೋಟೋಗಳು ವೈರಲ್

ಮಾಸ್ಕ್​ ಧರಿಸಿ ಹಸೆಮಣೆ ಏರಿದ ನಟ ಚಂದನ್​ ಕುಮಾರ್​, ನಟಿ ಕವಿತಾ ಗೌಡ…

Published On - 4:54 pm, Thu, 26 August 21

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ