‘ಸೆಟ್ನಲ್ಲಿ ಏನೇ ಆದರೂ ಹೀರೋ ಹೋಗಬೇಕು ಅಂತ ರೂಲ್ಸ್ ಮಾಡಿಬಿಡಿ’; ಅಜಯ್ ರಾವ್
ವಿಚಾರಣೆ ಮುಗಿಸಿ ಮಾಧ್ಯಮದ ಜತೆ ಮಾತನಾಡಿದ ಅಜಯ್ ರಾವ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ಅಜಯ್ ರಾವ್ ಅವರು ಇಂದು (ಆಗಸ್ಟ್ 26) ಬಿಡದಿ ಪೊಲೀಸ್ ಠಾಣೆಗೆ ಬಂದು ತಮ್ಮ ಹೇಳಿಕೆ ನೀಡಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ‘ದುರಂತ ನಡೆದ ಬಳಿಕ ನಾನು ಎಲ್ಲೂ ಓಡಿಹೋಗಿಲ್ಲ’ ಎಂದಿದ್ದಾರೆ.
ಪ್ರತ್ಯಕ್ಷದರ್ಶಿ ಫೈಟರ್ ರಂಜಿತ್ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಸೆನ್ಸೇಶನ್ ಸೃಷ್ಟಿ ಮಾಡಿತ್ತು. ‘ಘಟನೆ ನಡೆದ ಸ್ಥಳದಿಂದ ಅಜಯ್ ರಾವ್ ಅವರು ಕೇವಲ 10-20 ಮೀಟರ್ ಅಂತರದಲ್ಲೇ ಇದ್ದರು’ ಎಂದಿದ್ದರು ರಂಜಿತ್. ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವಿಚಾರಣೆ ಮುಗಿಸಿ ಮಾಧ್ಯಮದ ಜತೆ ಮಾತನಾಡಿದ ಅಜಯ್ ರಾವ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ‘ನಾನು ಹೆದರಿ ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ನಟ ಅಜಯ್ ರಾವ್ ಮಾತು
Latest Videos