‘ನಾನು ಹೆದರಿ ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ನಟ ಅಜಯ್​ ರಾವ್​ ಮಾತು

ಪ್ರತ್ಯಕ್ಷದರ್ಶಿ ಫೈಟರ್​ ರಂಜಿತ್ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಸೆನ್ಸೇಶನ್​ ಸೃಷ್ಟಿ ಮಾಡಿತ್ತು. ‘ಘಟನೆ ನಡೆದ ಸ್ಥಳದಿಂದ ಅಜಯ್​ ರಾವ್​ ಅವರು ಕೇವಲ 10-20 ಮೀಟರ್​ ಅಂತರದಲ್ಲೇ ಇದ್ದರು’ ಎಂದಿದ್ದರು ರಂಜಿತ್​. 

‘ನಾನು ಹೆದರಿ ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ನಟ ಅಜಯ್​ ರಾವ್​ ಮಾತು
 ‘ನಾನು ಹೆದರಿಕೊಂಡು ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ಅಜಯ್​ ರಾವ್​ ಮಾತು
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 26, 2021 | 5:25 PM

‘ಲವ್​​ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್​​ ವಿವೇಕ್​ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ಅಜಯ್​ ರಾವ್​ ಅವರು ಇಂದು (ಆಗಸ್ಟ್​ 26) ಬಿಡದಿ ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ‘ದುರಂತ ನಡೆದ ಬಳಿಕ ನಾನು ಎಲ್ಲೂ ಓಡಿಹೋಗಿಲ್ಲ’ ಎಂದಿದ್ದಾರೆ.

ಪ್ರತ್ಯಕ್ಷದರ್ಶಿ ಫೈಟರ್​ ರಂಜಿತ್ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಸೆನ್ಸೇಶನ್​ ಸೃಷ್ಟಿ ಮಾಡಿತ್ತು. ‘ಘಟನೆ ನಡೆದ ಸ್ಥಳದಿಂದ ಅಜಯ್​ ರಾವ್​ ಅವರು ಕೇವಲ 10-20 ಮೀಟರ್​ ಅಂತರದಲ್ಲೇ ಇದ್ದರು’ ಎಂದಿದ್ದರು ರಂಜಿತ್​.  ವಿಚಾರಣೆ ಮುಗಿಸಿ ಮಾಧ್ಯಮದ ಜತೆ ಮಾತನಾಡಿದ ಅಜಯ್​ ರಾವ್​ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಆಸ್ಪತ್ರೆಯಲ್ಲಿರುವವನಿಗೆ ಸುಳ್ಳು ಮಾಹಿತಿ ನೀಡಿ ಹೇಳಿಕೆ ಕೊಡಿಸಲಾಗಿದೆ. ಸೆಟ್​​ನಲ್ಲಿ ನಾನೊಬ್ಬನೇ ಇದ್ದೆನಾ? ಅಲ್ಲಿ ಎಲ್ಲರೂ ಇದ್ದರು. ಸಹಾಯ ಮಾಡಬೇಕು ಅಂದ್ರೆ ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು ಹೇಳಿ’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.

‘ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ನಾನು ಹೆದರಿಕೊಂಡು ಕೋರ್ಟ್​​ಗೆ ಅರ್ಜಿಯನ್ನು ಸಲ್ಲಿಸಿಲ್ಲ. ನನ್ನ ನಂಬಿ ನಿರ್ಮಾಪಕರು ನನ್ನ ಮೇಲೆ ಹಣ ಹೂಡಿರುತ್ತಾರೆ. ನಾನು ಹೆದರಿಕೊಂಡು ಎಲ್ಲೂ ಓಡಿ ಹೋಗಿಲ್ಲ’ ಎಂದಿದ್ದಾರೆ ಅಜಯ್​ ರಾವ್​.

ಮಂಗಳವಾರ (ಆಗಸ್ಟ್​ 24) ಬಿಡದಿ ಪೊಲೀಸ್​​ ಠಾಣೆಗೆ ಹಾಜರಾಗಿ ರಚಿತಾ ರಾಮ್​ ವಿಚಾರಣೆ ಎದುರಿಸಿದ್ದರು. ಡಿವೈಎಸ್​ಪಿ ಮೋಹನ್ ಕುಮಾರ್ ಅವರೇ ರಚಿತಾ ಅವರನ್ನು 45 ನಿಮಿಷಗಳ ಕಾಲ ಪ್ರಶ್ನೆ ಮಾಡಿದ್ದರು. ಪೊಲೀಸರ ವಿಚಾರಣೆ ಬಳಿಕ ರಚಿತಾ ರಾಮ್​ ಪ್ರತಿಕ್ರಿಯೆ ನೀಡಿದ್ದರು. ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿವರ ಗೊತ್ತಾಯ್ತು. ಫೈಟರ್​​ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು ರಚಿತಾ.

ಇದನ್ನೂ ಓದಿ: ಫೈಟರ್ ಸಾವು ಕೇಸ್: ಬಂಧನ ಭೀತಿಯಿಂದ ‌ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್​ ಅರ್ಜಿ

ಬಿಡದಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ನಟಿ ರಚಿತಾ ರಾಮ್

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ