Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗ್ಧ ನೋಟ ಮತ್ತು ಆಕರ್ಷಕ ಮೈಮಾಟದ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಮೊದಲು ಡುಮ್ಮಿಯಾಗಿದ್ದಳು ಅಂತ ನಿಮಗೆ ಗೊತ್ತಾ?

ಮುಗ್ಧ ನೋಟ ಮತ್ತು ಆಕರ್ಷಕ ಮೈಮಾಟದ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಮೊದಲು ಡುಮ್ಮಿಯಾಗಿದ್ದಳು ಅಂತ ನಿಮಗೆ ಗೊತ್ತಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2021 | 4:20 PM

ಸಿನಿಮಾಗೆ ಬರುವ ಮೊದಲು ಸೋನಾಕ್ಷಿಅಕ್ಷರಶಃ ಡುಮ್ಮಿಯಾಗಿದ್ದಳು. ತೂಕ 90 ಕೆಜಿಗಿಂತ ಜಾಸ್ತಿ ಮತ್ತು ಯಾವುದೇ ಉಡುಗೆ ಅಕೆ ಒಪ್ಪುತ್ತಿರಲಿಲ್ಲ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಕೆ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.

ದಬಾಂಗ್ ಚಿತ್ರ ಸೆಟ್ಟೇರಿದಾಗ ಅದರು ನಾಯಕಿ ನಟಿ ಸೋನಾಕ್ಷಿ ಸಿನ್ಹಾ ಬಗ್ಗೆ ಬಾಲಿವುಡ್​ನಲ್ಲಿ  ಭಾರಿ ಚರ್ಚೆ ನಡೆದಿತ್ತು. ಆಫ್ ಕೋರ್ಸ್ ಅಕೆ ಸುಂದರಿ ಮತ್ತು ಅಷ್ಟೇ ಆಕರ್ಷಕ ಅಂಗಸೌಷ್ಠವ ಹೊಂದಿದ್ದು ನೋಡಿದಾಕ್ಷಣ ಬಾಲಿವುಡ್ಗೆ ಹೇಳಿ ಮಾಡಿಸಿದ ಬೆಡಗಿ ಅನ್ನೋದು ಮನವರಿಕೆಯಾಗುತ್ತದೆ. ಅದು ಓಕೆ, ಆಕೆ ಬಗ್ಗೆ ಕುತೂಹಲ ಮೂಡುವುದಕ್ಕೆ ಬೇರೆ ಕಾರಣಗಳೂ ಇದ್ದವು. ಸೋನಾಕ್ಷಿ, ಹಿಂದಿಯ ಖ್ಯಾತ ನಟ ಮತ್ತು ಬಿಹಾರದ ಪ್ರಮುಖ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಮಗಳು ಮತ್ತು ಆಕೆಯ ಅರಂಗ್ರೇಟಂ ಜನಪ್ರಿಯ ನಟ ಸಲ್ಮಾನ್ ಖಾನ್​ನೊಂದಿಗೆ ಆಗುವುದರಲ್ಲಿತ್ತು. ಆದರೆ ಬಹಳಷ್ಟು ಜನಕ್ಕೆ ಗೊತ್ತಿರದ ಸಂಗತಿಯೆಂದರೆ, ಸಿನಿಮಾಗೆ ಬರುವ ಮೊದಲು ಆಕೆ ಅಕ್ಷರಶಃ ಡುಮ್ಮಿಯಾಗಿದ್ದಳು. ತೂಕ 90 ಕೆಜಿಗಿಂತ ಜಾಸ್ತಿ ಮತ್ತು ಯಾವುದೇ ಉಡುಗೆ ಅಕೆ ಒಪ್ಪುತ್ತಿರಲಿಲ್ಲ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಕೆ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಸಿನಿಮಾ ರಿಲೀಸ್ ಆದಾಗ ತೆರೆ ಮೇಲೆ ನಮಗೆ ಕಂಡ ಮುಗ್ಧ ನೋಟ ಮತ್ತು ಮಾದಕ ಮೈಮಾಟದ ಬೆಡಗಿಯೇ ಬೇರೆ ಮತ್ತು ಅದಕ್ಕೂ ಮೊದಲಿನ ಧಡೂತಿ ಸೋನಾಕ್ಷಿಯೇ ಬೇರೆ.

ದಬಾಂಗ್ ಚಿತ್ರ ಒಪ್ಪಿಕೊಳ್ಳುವ ಮೊದಲು ಆಕೆ ಎಷ್ಟು ಕೆಜಿ ತೂಕ ಇಳಿಸಿಕೊಂಡಳು ಅಂತಾ ಊಹಿಸಬಲ್ಲಿರಾ? ಮೂವತ್ತಕ್ಕಿಂತ ಹೆಚ್ಚು! ಆಕೆಯೇ ಹೇಳುವ ಹಾಗೆ ತೂಕ ಘಟಾಯಿಸುವುದು ಸುಲಭದ ಮಾತಾಗಿರಲಿಲ್ಲ. ಅದು ಕಷ್ಟ ನಿಜ, ಆದರೆ ಸರಳ ಉಪಾಯಗಳಿಂದ ಅದನ್ನು ಸಾಧಿಸಬಹುದು ಅಂತ ಸೋನಾಕ್ಷಿ ಹೇಳುತ್ತಾರೆ. ಬಿದ್ದಲ್ಲೇ ಬಿದ್ದುಕೊಂಡು ಜಂಕ್ ಫುಡ್ ಆರ್ಡರ್ ಮಾಡಿಕೊಂಡು ದಿನವಿಡೀ ಟಿವಿ ಮುಂದೆ ಕೂರುವುದು ಮತ್ತು ಮೊಬೈಲ್ ಫೋನಲ್ಲಿ ಗೇಮ್ ಆಡುತ್ತಾ, ಚ್ಯಾಟ್ ಮಾಡುತ್ತಾ ಇಡೀ ದಿನ ಕಳೆಯುವುದನ್ನು ಮೊದಲು ಬಿಡಬೇಕು ಎಂದು ಆಕೆ ಹೇಳುತ್ತಾರೆ.

‘ತೂಕ ಕಡಿಮೆ ಮಾಡಿಕೊಳ್ಳಬೇಕೆಂದರೆ ಡಯಟ್ ಸರಿಯಾಗಿರಬೇಕು ಮತ್ತು ದೇಹದಿಂದ ಬೆವರು ಸುರಿಯುವ ಕಸರತ್ತುಗಳನ್ನು ಮಾಡಬೇಕು. ಈ ಸರಳ ನಿಯಮ ಪಾಲಿಸಿಯೇ ನನ್ನ ದೇಹಕ್ಕೆ ಈ ಆಕಾರ ತಂದುಕೊಂಡಿದ್ದು,’ ಎಂದು ಸೋನಾಕ್ಷಿ ಹೇಳುತ್ತಾರೆ.

ಇದನ್ನೂ ಓದಿ:  Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ