ತಾಲಿಬಾನಿಗಳು ಪಂಜಶೀರ್ ಕಣಿವೆಗೆ ಹತ್ತಿರವಾಗುತ್ತಿದ್ದಾರೆ, ಯುದ್ಧ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ!
ಪಂಜಶೀರ್ನ ನಾರ್ದರ್ನ್ ಅಲಯನ್ಸ್ ಅನ್ನು ಸೋಲಿಸಲು ಬಹಳ ಕಷ್ಟ ಪಡಬೇಕು ಅನ್ನುವ ಸಂಗತಿ ತಾಲಿಬಾನಿಗಳಿಗೆ ಗೊತ್ತಿದೆ. ಅಲ್ಲದೆ, ಪಂಗಶೀರ್ ನಾಯಕ ಅಹ್ಮದ್ ಮಸ್ಸೂದ್ ಯುದ್ದ ಘೋಷಿಸುವ ಸೂಚನೆ ನೀಡಿದ್ದಾರೆ.
ಪಂಜಶೀರ್ ಮತ್ತು ತಾಲಿಬಾನಿಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಅಂತ ಹೇಳಲಾಗದ ಆದರೆ ಯುದ್ಧದ ಸನ್ನಿವೇಶವನ್ನು ನೆನಪಿಸುವ ಬಂದೂಕು ಮತ್ತು ಫಿರಂಗಿಗಳ ಮೊರೆತ ಪಂಜಶೀರ್ ಕಣಿವೆ ಪ್ರದೇಶದಲ್ಲಿ ಶುರುವಿಟ್ಟುಕೊಂಡಿದೆ. ತಾಲಿಬಾನ್, ಪಂಜಶೀರ್ ಸುತ್ತಲಿನ ಪ್ರದೇಶಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ತಾಲಿಬಾನ್ ಬಾತ್ಮೀದಾರ ಜಬಿಹುಲ್ಲಾಹ್ ಮುಜಾಹಿದ್ ಮಾತ್ರ ಪಜಶೀರ್ ಹತ್ತಿರದ ಬಘ್ಲಾನ್ ಪ್ರಾಂತ್ಯದ ದೆಹ್ ಸಲಾಹ್ ಮತ್ತು ಪುಲ್-ಎ ಹೆಸರ್ ಜಿಲ್ಲೆಗಳನ್ನು ತನ್ನ ಸೇನೆಗಳು ರೆಸಿಸ್ಟನ್ಸ್ 2 ನಿಂದ ಪುನರ್ ವಶಪಡಿಸಿಕೊಂಡಿವೆ ಎಂದು ಹೇಳಿದ್ದಾನೆ.
ಈ ವಿಡಿಯೋ ನೋಡಿದರೆ ತಾಲಿಬಾನಿಗಳು, ಪಂಜಶೀರ್ ಕಣಿವೆ ಪ್ರದೇಶಕ್ಕೆ ಹತ್ತಿರವಾಗುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಅಲ್ಲಿರುವ ಮರ ಗಿಡಗಳ ಮೇಲೆ ಕೂತು ಗುಂಡು ಹಾರಿಸುತ್ತಿದ್ದಾರೆ. ಪಂಜಶೀರ್ನ ನಾರ್ದರ್ನ್ ಅಲಯನ್ಸ್ ಅನ್ನು ಸೋಲಿಸಲು ಬಹಳ ಕಷ್ಟ ಪಡಬೇಕು ಅನ್ನುವ ಸಂಗತಿ ತಾಲಿಬಾನಿಗಳಿಗೆ ಗೊತ್ತಿದೆ. ಅಲ್ಲದೆ, ಪಂಗಶೀರ್ ನಾಯಕ ಅಹ್ಮದ್ ಮಸ್ಸೂದ್ ಯುದ್ದ ಘೋಷಿಸುವ ಸೂಚನೆ ನೀಡಿದ್ದಾರೆ. ಅವರ ಸೇನೆಯ ಯೋಧರು ಪರಾಕ್ರಮಿಗಳು. ಉಸಿರು ಬಿಟ್ಟಾರೆಯೇ ಹೊರತು ತಮ್ಮ ನೆಲದ ಒಂದಿಚನ್ನೂ ವೈರಿಗಳಿಗೆ ಬಿಡಲಾರರು.
ಆದರೆ ಅಫಘಾನಿಸ್ತಾನದ ಸೇನೆಯನ್ನು ಮಣಿಸಿರುವ ಹುಮ್ಮಸ್ಸಿನಿಂದ ಬೀಗುತ್ತಿರುವ ತಾಲಿಬಾನಿಗಳು ಪಂಜಶೀರ್ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಛಲ ತೊಟ್ಟಿದ್ದಾರೆ. ಇಷ್ಟರಲ್ಲೇ ಪೂರ್ಣಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ.