AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನಿಗಳ ಅಫಘಾನಿಸ್ತಾನದಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರೂ ಜೀನ್ಸ್ ಧರಿಸುವಂತಿಲ್ಲ! ದಿನಕ್ಕೊಂದು ಫತ್ವಾ!!

ತಾಲಿಬಾನಿಗಳ ಅಫಘಾನಿಸ್ತಾನದಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರೂ ಜೀನ್ಸ್ ಧರಿಸುವಂತಿಲ್ಲ! ದಿನಕ್ಕೊಂದು ಫತ್ವಾ!!

TV9 Web
| Edited By: |

Updated on: Aug 25, 2021 | 11:50 PM

Share

ನಡುಬೀದಿಯಲ್ಲಿ ಆ ಜೀನ್ಸ್​ಧಾರಿ ಯುವಕ ಅಸಾಹಯಕನಾಗಿ ಬಿಟ್ಟಿದ್ದಾನೆ. ಯಾರೊಬ್ಬರೂ ಅವನ ರಕ್ಷಣೆಗೆ ಹೋಗುವಂತಿಲ್ಲ. ಹಾಗೆ ಮಾಡಿದರೆ, ಮರಣಕ್ಕೆ ಆಹ್ವಾನವಿತ್ತಂತೆ!

ತಾಲಿಬಾನ್ ಕಟ್ಟಾ ಅಭಿಮಾನಿಗಳು ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಅಫಘಾನಿಸ್ತಾನವನ್ನು ಒಂದು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ತಾಲಿಬಾನಿಗಳು ಹತ್ತಾರು ಫತ್ವಾಗಳನ್ನು ಹೊರಡಿಸುತ್ತಿದ್ದಾರೆ. ಅವರ ಫತ್ವಾಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುತ್ತವೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ನಿಮಗೆ ಗೊತ್ತಿರಬಹುದು, ಮೊನ್ನೆಯಷ್ಟೇ ಮಹಿಳೆಯರು ಬುರ್ಖಾ ಧರಿಸದೆ ಹೊರಬರುವಂತಿಲ್ಲ ಅಂತ ಒಂದು ಫರ್ಮಾನು ತಾಲಿಬಾನಿಗಳು ಹೊರಡಿಸಿದ್ದರು. ಅವರು ಹಾಗೆ ಹೇಳುವ ನಿರೀಕ್ಷೆ ಇದ್ದುದ್ದರಿಂದ ಯಾರಿಗೂ ಆಶ್ಚರ್ಯವಾಗಲಿಲ್ಲ. ಹೆಣ್ಣುಮಕ್ಕಳು ಒಬ್ಬಂಟಿಯಾಗಿ ಹೊರಬರುವಂತಿಲ್ಲ, ಹೊರ ಬರುವ ಜರೂರತ್ತು ತಲೆದೋರಿದರೆ ಒಬ್ಬ ಗಂಡಸಿನೊಂದಿಗೆ ಬರಬೇಕು, ಅವರು ಮಾಡ್ ಡ್ರೆಸ್ ಧರಿಸುವಂತಿಲ್ಲ, ಜಿನ್ಸ್ ಹತ್ತಿರಕ್ಕೂ ಅವರು ಹೋಗಬಾರದು ಮೊದಲಾದ ಫರ್ಮಾನುಗಳನ್ನು ಅವರು ತಮ್ಮ ಮೊದಲ ಆಡಳಿತಾವಧಿಯಲ್ಲಿ (1996-2001) ಹೊರಡಿಸಿ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು.

ಈಗಿನ ಹೊಸ ಆಡಳಿತದಲ್ಲಿ ತಾಲಿಬಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಫಘಾನಿಸ್ತಾನದಲ್ಲಿ ಇನ್ನು ಮೇಲೆ ಪುರುಷರೂ ಜೀನ್ಸ್ ಧರಿಸುವಂತಿಲ್ಲ! ಬುಧವಾರದಂದು ಕಾಬೂಲ್ ನಗರದ ಪ್ರಮುಖ ಬೀದಿಯೊಂದರಲ್ಲಿ ಜೀನ್ಸ್ ಪ್ಯಾಂಟ್ ಧರಿಸಿದ ಯುವಕನೊಬ್ಬನನ್ನು ಬಂದೂಕುಧಾರಿ ತಾಲಿಬಾನಿಯೊಬ್ಬ ಅದನ್ನು ಧರಿಸಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಅವನನ್ನು ಎಳೆದಾಡಿದ್ದಾನೆ.

ನಡುಬೀದಿಯಲ್ಲಿ ಆ ಜೀನ್ಸ್​ಧಾರಿ ಯುವಕ ಅಸಾಹಯಕನಾಗಿ ಬಿಟ್ಟಿದ್ದಾನೆ. ಯಾರೊಬ್ಬರೂ ಅವನ ರಕ್ಷಣೆಗೆ ಹೋಗುವಂತಿಲ್ಲ. ಹಾಗೆ ಮಾಡಿದರೆ, ಮರಣಕ್ಕೆ ಆಹ್ವಾನವಿತ್ತಂತೆ!

ತಾಲಿಬಾನಿಗಳು ಮತ್ತೊಂದು ಫತ್ವಾ ಹೊರಡಿಸಿದ್ದಾರೆ. ಅಫಘಾನಿಸ್ತಾನದ ಮಹಿಳೆಯರಾಗಲೀ, ಯುವತಿಯರಾಗಲೀ ನೇಲ್ ಪಾಲಿಶ್ ಹಾಕುವಂತಿಲ್ಲ. ಅದು ಪಾಶ್ವಾತ್ಯ ಸಂಸ್ಕೃತಿಯಾಗಿರುವುದರಿಂದ ತಾಲಿಬಾನಿಗಳ ಅಫಘಾನಿಸ್ತಾನದಲ್ಲಿ ಅದಕ್ಕೆ ಅವಕಾಶವಿಲ್ಲ! ಮುಂದಿನ ದಿನಗಳಲ್ಲಿ ಮತ್ತೇನು ಹೊಸ ಫತ್ವಾಗಳನ್ನು ಹೊರಡಿಸಲಿದ್ದಾರೋ ಈ ಕಟ್ಟರ್ ಮೂಲಭೂತವಾದಿಗಳು?

ಇದನ್ನೂ ಓದಿ: Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ