Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

Shocking Video: ಎರಡು ಹಾವುಗಳನ್ನು ಮನೆಗೆ ತಂದ ಆತ ತನಗೆ ರಕ್ಷಣೆ ನೀಡು ಎಂದು ಆ ಹಾವುಗಳಿಗೆ ರಾಖಿ ಕಟ್ಟಿದ್ದ. ಆದರೆ, ಅದಾದ ಕೆಲವೇ ಸೆಕೆಂಡುಗಳಲ್ಲಿ ಒಂದು ಹಾವು ಆತನ ಕೈಗೆ ಕಚ್ಚಿದ್ದರಿಂದ ಆತ ವಿಷ ಕಾರಿ ಸಾವನ್ನಪ್ಪಿದ್ದಾನೆ.

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ
ಹಾವಿಗೆ ರಾಖಿ ಕಟ್ಟಿದ ಬಿಹಾರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 23, 2021 | 5:08 PM

ರಕ್ಷಾಬಂಧನದ ದಿನ ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟುವುದು ಭಾರತೀಯರ ಸಂಸ್ಕೃತಿ. ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸುವ ಮೂಲಕ ಜೀವನಪೂರ್ತಿ ತಮಗೆ ರಕ್ಷೆ ನೀಡುವಂತೆ ಸೋದರಿಯರು ಕೇಳಿಕೊಳ್ಳುವ ದಿನವಿದು. ಈಗೀಗ ಮನೆಯಲ್ಲಿ ತಮಗೆ ರಕ್ಷಣೆ ನೀಡುವ, ಸೋದರರಂತೆ ಜೊತೆಗಿರುವ ನಾಯಿ, ಬೆಕ್ಕುಗಳಿಗೆ ಕೂಡ ಜನರು ರಾಖಿ ಕಟ್ಟುವ ಸಂಪ್ರದಾಯ ಶುರುವಾಗಿದೆ. ಆದರೆ, ಇಲ್ಲೊಬ್ಬ ಆಸಾಮಿ ವಿಷಕಾರಿ 2 ಹಾವುಗಳಿಗೆ ರಾಖಿ ಕಟ್ಟಿದ್ದಾನೆ. ಹಾವುಗಳಿಗೆ ರಾಖಿ ಕಟ್ಟಿದ ಮರುಕ್ಷಣವೇ ವಿಷ ಕಾರಿ ಸಾವನ್ನಪ್ಪಿದ್ದಾನೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ 12 ಲಕ್ಷ ಜನರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಅಂದರೆ, ವರ್ಷಕ್ಕೆ 58,000 ಜನರು ಹಾವು ಕಚ್ಚಿದ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ. ಆದರೆ, ಹಾವು ಕಚ್ಚಿ ಸಾವನ್ನಪ್ಪಿರುವ ಬಿಹಾರದ ಈ ವ್ಯಕ್ತಿಯ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಯಾಕೆಂದರೆ ಈತ ಮಹಾನ್ ಸಾಧನೆ ಮಾಡುತ್ತೇನೆಂದು ಹಾವುಗಳನ್ನು ಹಿಡಿದು ಅದಕ್ಕೆ ರಾಖಿ ಕಟ್ಟಿ, ಅದೇ ಹಾವುಗಳಿಂದ ಸಾವನ್ನಪ್ಪಿದ್ದಾನೆ!

ಬಿಹಾರ ರಾಜ್ಯದ ಸರನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮನಮೋಹನ್ ಎಂಬ ಬಿಹಾರಿ ವ್ಯಕ್ತಿ ಈ ಬಾರಿ ರಕ್ಷಾಬಂಧನವನ್ನು ವಿಭಿನ್ನವಾಗಿ ಆಚರಣೆ ಮಾಡಲು ನಿರ್ಧರಿಸಿದ್ದ. ಹೀಗಾಗಿ, ಎರಡು ಹಾವುಗಳನ್ನು ಮನೆಗೆ ತಂದ ಆತ ತನಗೆ ರಕ್ಷಣೆ ನೀಡು ಎಂದು ಆ ಹಾವುಗಳಿಗೆ ರಾಖಿ ಕಟ್ಟಿದ್ದ. ಆದರೆ, ಅದಾದ ಕೆಲವೇ ಸೆಕೆಂಡುಗಳಲ್ಲಿ ಒಂದು ಹಾವು ಆತನ ಕೈಗೆ ಕಚ್ಚಿದ್ದರಿಂದ ಆತ ವಿಷ ಕಾರಿ ಸಾವನ್ನಪ್ಪಿದ್ದಾನೆ. ವಿಭಿನ್ನವಾಗಿ ರಕ್ಷಾಬಂಧನ ಆಚರಿಸಲು ಹೋದ ವ್ಯಕ್ತಿ ಇಹಲೋಕವನ್ನೇ ತ್ಯಜಿಸಿದ್ದಾನೆ.

25 ವರ್ಷದ ಮನಮೋಹನ್ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದಾತ. ಎರಡೂ ಹಾವಿನ ಬಾಲವನ್ನು ಹಿಡಿದು ಮನೆಯವರ ಬಳಿ ವಿಡಿಯೋ ಮಾಡಲು ಹೇಳಿದ್ದ ಆತ ಈ ವಿಭಿನ್ನವಾದ ರಕ್ಷಾಬಂಧನದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಲು ಯೋಚಿಸಿದ್ದ. ಎರಡು ಹಾವನ್ನು ಹಿಡಿದು ಒಂದು ಹಾವಿಗೆ ರಾಖಿ ಕಟ್ಟಿದ ಕೂಡಲೇ ಆತ ತಮಗೇನೋ ಅಪಾಯ ಮಾಡುತ್ತಿದ್ದಾನೆ ಎಂದು ಭಾವಿಸಿದ ಇನ್ನೊಂದು ಹಾವ ಆತ ತನಗೆ ರಾಖಿ ಕಟ್ಟುತ್ತಿದ್ದಂತೆ ಆತನ ಕೈಗೆ ಕಚ್ಚಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲಿ ಆತನಿಗೆ ವಿಷವೇರಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Shocking Video: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಲವ್ ಸ್ಟೋರಿ ಇಲ್ಲಿದೆ

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Viral Video: Bihar Man Ties Rakhi to Snakes on Raksha Bandhan Dies After Snake Bites Him watch Shocking Video)

Published On - 5:08 pm, Mon, 23 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ