Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

Cat Garden: ಗುಜರಾತ್​ನಲ್ಲಿರುವ ಪ್ರಾಣಿಪ್ರಿಯರೊಬ್ಬರು ಬೆಕ್ಕುಗಳಿಗೆಂದೇ ಬಂಗಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮನೆಯಲ್ಲಿ ಆಧುನಿಕ ಸೌಲಭ್ಯಗಳಾದ ಎಸಿ ರೂಂ, ಈಜು ಕೊಳ, ಅಡುಗೆ ಮನೆ, ಹೊರಗೆ ಗಾರ್ಡನ್ ಎಲ್ಲವೂ ಇದೆ.

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!
ಗುಜರಾತ್​ನಲ್ಲಿರುವ ಕ್ಯಾಟ್ ಗಾರ್ಡನ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 21, 2021 | 9:24 PM

ನಾಯಿ, ಬೆಕ್ಕುಗಳನ್ನು ತಮ್ಮ ಮನೆಯವರ ಹಾಗೇ ನೋಡಿಕೊಳ್ಳುವ ಅದೆಷ್ಟೋ ಪ್ರಾಣಿಪ್ರಿಯರಿದ್ದಾರೆ. ನಾಯಿ, ಬೆಕ್ಕುಗಳಿಗೂ ಮನೆಯಲ್ಲಿ ರೂಮ್ ಮಾಡಿ ನೋಡಿಕೊಳ್ಳುವವರು ಬಹಳ ಜನರಿದ್ದಾರೆ. ಗುಜರಾತ್​ನಲ್ಲಿರುವ ಪ್ರಾಣಿಪ್ರಿಯರೊಬ್ಬರು ಬೆಕ್ಕುಗಳಿಗೆಂದೇ ಬಂಗಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮನೆಗೆ ಕ್ಯಾಟ್ ಗಾರ್ಡನ್ ಎಂದು ಹೆಸರಿಟ್ಟಿದ್ದಾರೆ. ಈ ಕ್ಯಾಟ್ ಗಾರ್ಡನ್ 500 ಚದರ ಯಾರ್ಡ್ಸ್​ ಜಾಗದಲ್ಲಿ ನಿರ್ಮಾಣವಾಗಿದೆ.

ಈ ಮನೆಯಲ್ಲಿ ಆಧುನಿಕ ಸೌಲಭ್ಯಗಳಾದ ಎಸಿ ರೂಂ, ಈಜು ಕೊಳ, ಅಡುಗೆ ಮನೆ, ಹೊರಗೆ ಗಾರ್ಡನ್ ಎಲ್ಲವೂ ಇದೆ. ಗುಜರಾತ್​ನ ಕಚ್​ನಲ್ಲಿ ವಾಸವಾಗಿರುವ ಉಪೇಂದ್ರ ಗೋಸ್ವಾಮಿ ಬೆಕ್ಕುಗಳಿಗೆಂದೇ ಈ ಮನೆಯನ್ನು ನಿರ್ಮಿಸಿದ್ದಾರೆ. 2017ರಲ್ಲೇ ಈ ಮನೆಯನ್ನು ನಿರ್ಮಿಸಲಾಗಿದ್ದು, ಈ ಮನೆಯಲ್ಲಿ 200 ಬೆಕ್ಕುಗಳಿದ್ದಾವೆ. ಉಪೇಂದ್ರ ಅವರ ತಂಗಿಯ ನೆನಪಿನಲ್ಲಿ ಈ ಕ್ಯಾಟ್ ಗಾರ್ಡನ್ ನಿರ್ಮಿಸಲಾಗಿದೆ. ಉಪೇಂದ್ರ ಅವರ ತಂಗಿ 1994ರಲ್ಲಿ ಮೃತಪಟ್ಟಿದ್ದಾರೆ. ಆಗಿನಿಂದಲೂ ಉಪೇಂದ್ರ ಅವರು ತಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕುತ್ತಿದ್ದಾರೆ. ಬಳಿಕ 2017ರಲ್ಲಿ ಬೆಕ್ಕುಗಳಿಗೆ ಮನೆಯನ್ನು ನಿರ್ಮಿಸಿದರು.

ನನ್ನ ತಂಗಿಯ ಹುಟ್ಟುಹಬ್ಬವನ್ನು ಈಗಲೂ ಪ್ರತಿವರ್ಷ ಆಚರಿಸುತ್ತೇವೆ. ಆಕೆ ಸಾವನ್ನಪ್ಪಿದ ಮರು ವರ್ಷವೂ ಆಕೆಯ ಹುಟ್ಟುಹಬ್ಬವನ್ನು ನಾವೆಲ್ಲ ಸೇರಿ ಆಚರಿಸುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಬಂಗಲೆಯೊಳಗೆ ಬಂದ ಬೆಕ್ಕು ಆಕೆಯ ಹುಟ್ಟುಹಬ್ಬದ ಕೇಕ್ ತಿಂದಿತು. ಅಂದಿನಿಂದ ಆ ಬೆಕ್ಕು ನಮ್ಮೊಂದಿಗೇ ವಾಸವಾಗಿತ್ತು. ನನ್ನ ತಂಗಿಗೆ ಬೆಕ್ಕು ಬಹಳ ಇಷ್ಟವಿದ್ದುದರಿಂದ ಆಕೆಯೇ ಬೆಕ್ಕಿನ ರೂಪದಲ್ಲಿ ನಮ್ಮ ನೊತೆ ವಾಸಿಸುತ್ತಿದ್ದಾಳೆ ಎಂದು ನಾವು ಭಾವಿಸಿದ್ದೇವೆ ಎಂದು ಉಪೇಂದ್ರ ಹೇಳಿದ್ದಾರೆ.

ಈ ಕ್ಯಾಟ್ ಗಾರ್ಡನ್​ನಲ್ಲಿ ಎಸಿ ರೂಂಗಳಿವೆ, ಜೊತೆಗೆ ಥಿಯೇಟರ್ ಕೂಡ ಇದೆ. ಈ ಮನೆಯಲ್ಲಿ 4 ಎಸಿ ರೂಂಗಳಿವೆ ಹಾಗೂ 16 ಕಾಟೇಜ್​ಗಳಿವೆ. ಬೆಕ್ಕುಗಳಿಗೆ ಬೆಡ್ ಮತ್ತು ಮಂಚದ ವ್ಯವಸ್ಥೆಯೂ ಇದೆ. ಬಾತ್​ರೂಂನಲ್ಲಿ ಬೆಕ್ಕುಗಳಿಗೆ ಶವರ್ ವ್ಯವಸ್ಥೆಯೂ ಇದೆ. ಬೆಕ್ಕುಗಳಿಗೆಂದೇ ಇರುವ ಮಿನಿ ಥಿಯೇಟರ್ ನಿರ್ಮಿಸಲಾಗಿದ್ದು, ಸಂಜೆಯ ವೇಳೆ ಬೆಕ್ಕುಗಳಿಗೆ ಅನಿಮಲ್ ಶೋಗಳನ್ನು ಹಾಕಲಾಗುತ್ತದೆ. ದಿನಕ್ಕೆ ಮೂರು ವೇಳೆ ಬೆಕ್ಕುಗಳಿಗೆ ಆಹಾರ ನೀಡಲಾಗುತ್ತದೆ.

200 ಬೆಕ್ಕುಗಳಿಗೂ ವಾರಕ್ಕೊಮ್ಮೆ ವೈದ್ಯರಿಂದ ಚೆಕಪ್ ಮಾಡಿಸಲಾಗುತ್ತದೆ. ಉಪೇಂದ್ರ ಗೋಸ್ವಾಮಿ ಅವರ ಹೆಂಡತಿ ಕೂಡ ಶಾಲಾ ಶಿಕ್ಷಕಿಯಾಗಿದ್ದು, ಬೆಕ್ಕುಗಳನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಬೆಕ್ಕುಗಳನ್ನು ನೋಡಿಕೊಳ್ಳಲು ತಿಂಗಳಿಗೆ 1.5 ಲಕ್ಷ ರೂ. ವೆಚ್ಚವಾಗುತ್ತದೆ. ಆ ವೆಚ್ಚವನ್ನು ಈ ದಂಪತಿಯೇ ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುತ್ತಾರೆ.

ಇದನ್ನೂ ಓದಿ: Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!

(Viral News Gujarat Man Opens Cat Garden With AC Rooms and Mini Theatre to Raise 200 Cats)

Published On - 9:21 pm, Sat, 21 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ